ಬೆಂಗಳೂರು : 2023ರ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 80 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ 7 ಜನ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಾಸ್ಯ ಟೆನ್ನಿಸ್ ಕೃಷ್ಣಗೆ ತುರುವೇಕೆರೆಯಿಂದ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನ ಮಾಜಿ ವಕ್ತಾರ ಬ್ರೀಜೇಶ್ ಕಾಳಪ್ಪ ಅವರಿಗೆ ಬೆಂಗಳೂರು ನಗರದ ಚಿಕ್ಕಪೇಟೆ ಕ್ಷೇತ್ರ, ಡಾ.ರಾಘವೇಂದ್ರ ಚಿಂಚನಸೂರ ಅವರಿಗೆ ಗುಲ್ಬರ್ಗ ಗ್ರಾಮೀಣ ಟಿಕೆಟ್ ದೊರೆತಿದೆ. ಮಹಾಲಕ್ಷ್ಮೀ ಲೇಔಟ್ ನಿಂದ ಶಾಂತಲಾ ದಾಮ್ಲೆ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಇದುವರೆಗೆ ಯಾವ ಕ್ಷೇತ್ರವನ್ನು ನೀಡಿಲ್ಲ.
ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಈ ಪಕ್ಷವು ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿಕೊಂಡಿದೆ. ಈ ದೇಶದ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ. ದೇಶವನ್ನು ಉನ್ನತಿಯೆತ್ತ ಕರೆದೊಯ್ಯಲು ನಾವು ಕಣಕ್ಕಿಳಿಸಿರುವ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಇಂದು ಬಿಡುಗಡೆಯಾದ ಎಎಪಿ ಪಟ್ಟಿಯಲ್ಲಿ ತೇರದಾಳ – ಅರ್ಜುನ ಹಲಗಿಗೌಡರ, ಬಾದಾಮಿ – ಶಿವರಾಯಪ್ಪ ಜೋಗಿನ, ಬಾಗಲಕೋಟೆ – ರಮೇಶ ಬದ್ನೂರ, ಅಥಣಿ – ಸಂಪತ್ ಕುಮಾರ ಶೆಟ್ಟಿ, ಬೈಲಹೊಂಗಲ – ಬಿ. ಎಂ. ಚಿಕ್ಕನಗೌಡರ, ರಾಮದುರ್ಗ – ಮಲ್ಲಿಕಜಾನ್ ನದಾಫ, ಹುಬ್ಬಳ್ಳಿ-ದಾರವಾಡ ಪೂರ್ವ – ಬಸವರಾಜ ಎಸ್ ತೇರದಾಳ, ಹುಬ್ಬಳ್ಳಿ-ದಾರವಾಡ ಕೇಂದ್ರ – ವಿಕಾಸ ಸೊಪ್ಪಿನ, ಕಲಘಟಗಿ – ಮಂಜುನಾಥ ಜಕ್ಕಣ್ಣವರ, ರೋಣ – ಆನೇಕಲ್ ದೊಡ್ಡಯ್ಯ, ಬ್ಯಾಡಗಿ – ಎಂ.ಎನ್. ನಾಯಕ, ರಾಣೆಬೆನ್ನೂರು – ಹನುಮಂತಪ್ಪ ಕಬ್ಬಾರ, ಬಸವಕಲ್ಯಾಣ – ದೀಪಕ ಮಲಗಾರ, ಹುಮನಾಬಾದ – ಬ್ಯಾಂಕ್ ರೆಡ್ಡಿ, ಬೀದರ ದಕ್ಷಿಣ – ನಸೀಮುದ್ದಿನ್ ಪಟೇಲ, ಭಾಲ್ಕಿ – ತುಕಾರಾಮ ನಾರಾಯಣರಾವ್ ಹಜಾರೆ, ಔರಾದ್ – ಬಾಬುರಾವ ಅಡ್ಕೆ, ಗುಲ್ಬರ್ಗ ಗ್ರಾಮೀಣ – ಡಾ. ರಾಘವೇಂದ್ರ ಚಿಂಚನಸೂರ, ಗುಲ್ಬರ್ಗ ದಕ್ಷಿಣ – ಸಿದ್ದರಾಮ ಅಪ್ಪಾರಾವ ಪಾಟೀಲ, ಗುಲ್ಬರ್ಗ ಉತ್ತರ – ಸಯ್ಯದ್ ಸಜ್ಜಾದ್ ಅಲಿ, ಇಂಡಿ – ಗೋಪಾಲ ಆರ್ ಪಾಟೀಲ, ಗಂಗಾವತಿ – ಶರಣಪ್ಪ ಸಜ್ಜಿಹೊಲ, ರಾಯಚೂರು – ಗ್ರಾಮೀಣ ಡಾ. ಸುಭಾಶಚಂದ್ರ ಸಾಂಭಾಜಿ, ರಾಯಚೂರು – ಡಿ. ವೀರೇಶ ಕುಮಾರ ಯಾದವ, ಮಾನ್ವಿ – ರಾಜಾ ಶಾಮಸುಂದರ ನಾಯಕ, ಲಿಂಗಸುಗೂರು – ಶಿವಪುತ್ರ ಗಾಣದಾಳ, ಸಿಂಧನೂರು – ಸಂಗ್ರಾಮ ನಾರಾಯಣ ಕಿಲ್ಲೇದ, ವಿಜಯನಗರ – ಡಿ. ಶಂಕರದಾಸ, ಕೂಡ್ಲಿಗಿ – ಶ್ರೀನಿವಾಸ ಎನ್, ಹರಪನಹಳ್ಳಿ – ನಾಗರಾಜ ಎಚ್ ಇದ್ದಾರೆ.