Kornersite

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ, ಈ ಸಿನಿಮಾವನ್ನು ನ್ನ ಆಸ್ಕರ್‌ಗೆ ನಾಮಿನೇಟ್ ಮಾಡಿಸುವುದಕ್ಕಾಗಿ ಸಾಕಷ್ಟು ಖರ್ಚು ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಈ ಚಿತ್ರವನ್ನು ಆಸ್ಕರ್ ಗೆ ನಾಮಿನೇಟ್ ಮಾಡಲು ಕ್ಯಾಂಪೇನ್‌ಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಅಲ್ಲದೇ, ಆಸ್ಕರ್ ಸಮಾರಂಭದಲ್ಲಿ ಸಹ ದೊಡ್ಡ ಮೊತ್ತದ ಹಣವನ್ನೇ ತೆತ್ತಿದ್ದಾರೆ.
ಆಸ್ಕರ್ ಅಂಗಳದಲ್ಲಿ ಭಾರತದ ಎರಡು ಸಿನಿಮಾ ಆಸ್ಕರ್ ಅವಾರ್ಡ್ ಗೆದ್ದಿವೆ. ರಾಜಮೌಳಿ ಚಿತ್ರತಂಡ ತಮ್ಮ ಕುಟುಂಬದ ಜೊತೆ ಆಸ್ಕರ್ ಅವಾರ್ಡ್‌ನಲ್ಲಿ ಭಾಗಿಯಾಗಲು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ.
ಆಸ್ಕರ್ ನಾಮಿನೇಟ್ ಆದವರಿಗಷ್ಟೆ ಪ್ರಶಸ್ತಿಯ ಆಯೋಜಕರಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ ಆಂಡ್ ಸೈನ್ಸ್ ನವರು ಟಿಕೆಟ್ ಕಳಿಹಿಸುತ್ತಾರೆ. ನಾಮಿನೇಟ್ ಆಗಿದ್ದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ಚಿತ್ರ ಸಾಹಿತಿ ಚಂದ್ರಭೋಸ್ ಹಾಗೂ ಅವರ ಕುಟುಂಬದವರಿಗಷ್ಟೆ ವಿಮಾನ ಟಿಕೆಟ್ ಹಾಗೂ ಆಸ್ಕರ್ ಹಾಲ್‌ ಗೆ ಉಚಿತ ಎಂಟ್ರಿ ನೀಡಲಾಗಿತ್ತು. ರಾಜಮೌಳಿ, ರಾಮ್ ಚರಣ್, ತಾರಕ್ ಅವರ ಕುಟುಂಬಗಳಿಗೆ ಟಿಕೆಟ್ ನೀಡಿರಲಿಲ್ಲ. ಅವರುಗಳು ಸ್ವಂತ ಖರ್ಚಿನಲ್ಲಿಯೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಆಸ್ಕರ್ ಸಮಾರಂಭ ವೀಕ್ಷಿಸಲು, ರೆಡ್ ಕಾರ್ಪೆಟ್ ಇವೆಂಟ್‌ನಲ್ಲಿ ಭಾಗವಹಿಸಲು ಮತ್ತು ಇನ್ನಿತರೆಗಳಿಗೆ ಭಾರಿ ಮೊತ್ತದ ಟಿಕೆಟ್ ಅನ್ನು ಖರೀದಿಸಬೇಕಾಗುತ್ತದೆ. ಈ ಬಾರಿ ಟಿಕೆಟ್ ಬೆಲೆ ಹೆಚ್ಚು ನಿಗದಿಪಡಿಸಲಾಗಿತ್ತು. ಹೀಗಾಗಿ ರಾಜಮೌಳಿ ಬರೋಬ್ಬರಿ 25000 ಡಾಲರ್ ನೀಡಿ ಟಿಕೆಟ್ ಖರೀದಿ ಮಾಡಿದ್ದರು ಎನ್ನಲಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಒಂದು ಟಿಕೆಟ್‌ಗೆ 20.60 ಲಕ್ಷ ರೂ. ಹಣ ನೀಡಿದ್ದಾರೆ. ರಾಜಮೌಳಿಯವರು ತಮ್ಮ ಪತ್ನಿ ಹಾಗೂ ಪುತ್ರ ಹಾಗೂ ಸೊಸೆಯೊಡನೆ ಇವೆಂಟ್‌ಗೆ ಹೋಗಿದ್ದರಾದ್ದರಿಂದ ಸುಮಾರು 80 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕೇವಲ ಟಿಕೆಟ್‌ಗೆ ಖರ್ಚು ಮಾಡಿದ್ದಾರೆ.
20 ಲಕ್ಷ ಒಬ್ಬ ವ್ಯಕ್ತಿಗೆ ನೀಡಿದ್ದರೂ ಸಹ ಅದು ವಿಐಪಿ ಟಿಕೆಟ್ ಆಗಿರಲಿಲ್ಲ ವಿಐಪಿ ಟಿಕೆಟ್ ಪಡೆಯಲು 40 ಲಕ್ಷಕ್ಕಿಂತಲೂ ಹೆಚ್ಚು ಹಣ ನಿಗದಿ ಮಾಡಿದ್ದರು ಎನ್ನಲಾಗಿದೆ.

You may also like

Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ
Mix Masala

ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2 ಟ್ರೇಲರ್ ಬಿಡುಗಡೆ

ನಟ ರಮೇಶ್ ಅರವಿಂದ್(Ramesh Aravind) ನಟಿಸಿರುವ ಶಿವಾಜಿ ಸುರತ್ಕಲ್-2( Shivaji Suratkal-2) ಚಿತ್ರದ ಟ್ರೇಲರ್(trailer) ನ್ನು ಚಿತ್ರ ತಂಡವು ಬಿಡುಗಡೆ(Released) ಮಾಡಿದೆ.ಆಕಾಶ್ ಶ್ರೀವತ್ಸ(Akash Shrivatsa) ನಿರ್ದೇಶಿಸಿರುವ ಈ