Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಮೆರಿಕದ ಅರ್ಕಾನ್ಸಾಸ್ (Arkansas) ಮತ್ತು ಇಲಿನಾಯ್ಸ್ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು ಜನ ಗಾಯಗೊಂಡಿದ್ದು, 7 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಹೀಗಿಗ ಮಿಸೌರಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಕನಿಷ್ಠ 30 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ವ್ಯಾಪಾರಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಬೆಲ್ವಿಡೆರೆಯಲ್ಲಿಯ ಥಿಯೇಟರ್ ಮೇಲ್ಛಾವಣಿ ಕುಸಿದಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, 28 ಜನ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಲ್ಲಿವಾನ್ ಕಂಟ್ರಿ, ಇಂಡಿನಲ್ಲಿ, ಶೆರ್ಮನ್‌ನ ಪೂರ್ವಕ್ಕೆ ಸರಿಸುಮಾರು 150 ಮೈಲುಗಳಷ್ಟು ಸುಂಟರಗಾಳಿ ಭೀಕರವಾಗಿ ಬೀಸಿದ್ದು, ಈ ಭಾಗದಲ್ಲಿ ಮೂರು ಮೃತಪಟ್ಟಿದ್ದಾರೆ.
ಇಂಡಿಯಾನಾ, ಇಲಿನಾಯ್ಸ್, ಅರ್ಕಾನ್ಸಾಸ್ ಮತ್ತು ಟೆನ್ನೆಸ್ಸೀಯಲ್ಲಿ ಸುಮಾರು 4.4 ಲಕ್ಷಕ್ಕೂ ಅಧಿಕ ಮನೆಗಳು ಹಾನಿಯಾಗಿದ್ದು, ವ್ಯಾಪಾರ, ವ್ಯವಹಾರಕ್ಕೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು
