ಇದೇ ದಿನ ಕಳೆದ 12 ವರ್ಷಗಳ ಹಿಂದೆ ಭಾರತೀಯರ ಪಾಲಿಗೆ ಬಹು ಸಂಭ್ರಮದ ದಿನವಾಗಿತ್ತು. ಏಕೆಂದರೆ ಈ ದಿನ ಭಾರತೀಯ ಕ್ರಿಕೆಟ್ ತಂಡವು ಇಡೀ ಭಾರತೀಯರಿಗೆ ಸಂತಸದ ರಸದೌತಣ ಉಣಬಡಿಸಿತ್ತು. ಅದೇನಪ್ಪ ಹೇಳ್ತಿದಾರೆ ಅಂತೀರಾ! ಹೌದು! ಭಾರತೀಯ ಕ್ರಿಕೆಟ್ ತಂಡವು ಇದೇ ದಿನ ಅಂದರೆ ಕಳೆದ 12 ವರ್ಷಗಳ ಹಿಂದೆ ಈ ದಿನ 2ನೇ ವಿಶ್ವಕಪ್ ಗೆ ಮುತ್ತಿಕ್ಕಿತ್ತು.
ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಭಾರತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಗೆಲುವಿನ ನಗೆ ಬೀರಿತ್ತು. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಕ್ಸ್ ಸಿಡಿಸುವ ಮೂಲಕ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಿದ್ದರು.
ಈ ವಿಶ್ವಕಪ್ ಗೆಲುವಿಗೆ 12 ವರ್ಷಗಳ ತುಂಬಿದ ಸಂದರ್ಭದಲ್ಲಿ ಐಸಿಸಿ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಲ್ಲದೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಲೋಗೋ ಕೂಡ ಬಿಡುಗಡೆ ಮಾಡಿದೆ. ಈ ಬಾರಿಯ ವಿಶ್ವಕಪ್ ಆರಂಭವಾಗಲು ಇನ್ನೂ 6 ತಿಂಗಳು ಬಾಕಿ ಉಳಿದಿವೆ. ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ 10 ತಂಡಗಳು ಭಾಗವಹಿಸಲಿದ್ದು, ಬರೋಬ್ಬರಿ 48 ದಿನಗಳ ಕಾಲ ಈ ಟೂರ್ನಿ ನಡೆಯಲಿದೆ.
2011ರಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಕೂಡ ಒಂದಾಗಿತ್ತು. ಅದೇ ರೀತಿ ಭಾರತ ತಂಡದ ಪ್ರದರ್ಶನ ನಡೆದಿತ್ತು. ಎಲ್ಲದಕ್ಕೂ ಮುಖ್ಯವಾಗಿ ಆ ವಿಶ್ವಕಪ್ ಗೆಲ್ಲಲೇಬೇಕಾದ ಒತ್ತಡದಲ್ಲಿ ಹಾಗೂ ಗುರಿಯಲ್ಲಿ ಭಾರತೀಯ ತಂಡವಿತ್ತು. ಕಾರಣ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 7ನೇ ವಿಶ್ವಕಪ್ ನಲ್ಲಿ ಆಡುತ್ತಿದ್ದರೂ ಒಮ್ಮೆ ಕೂಡ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದು ಅವರ ಕೊನೆಯ ವಿಶ್ವಕಪ್ ಟೂರ್ನಿ ಇದಾಗಿತ್ತು. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ ನೇತೃತ್ವದ ಭಾರತ ತಂಡಕ್ಕೆ ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದು ಉತ್ತಮ ಅವಕಾಶವಾಗಿತ್ತು. ಮೊದಲನೇ ಪಂದ್ಯದಲ್ಲೇ ಬಾಂಗ್ಲಾದೇಶದ ವಿರುದ್ಧ 87 ರನ್‌ಗಳ ಗೆಲುವಿನ ಮೂಲಕ ಭಾರತ ತಂಡವು ಅಭಿಯಾನ ಆರಂಭಿಸಿತ್ತು.
2011ರ ಏಕದಿನ ವಿಶ್ವಕಪ್ ಗೆಲ್ಲುವುದು ಭಾರತಕ್ಕೆ ಮುಖ್ಯವಾಗಿತ್ತು. ಸಚಿನ್ ತೆಂಡೂಲ್ಕರ್ 7ನೇ ವಿಶ್ವಕಪ್‌ನಲ್ಲಿ ಆಡುತ್ತಿದ್ದರೂ, ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದು ಅವರ ಕೊನೆಯ ವಿಶ್ವಕಪ್ ಟೂರ್ನಿಯಾಗಿತ್ತು. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ ನೇತೃತ್ವದ ಭಾರತ ತಂಡಕ್ಕೆ ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದು ಉತ್ತಮ ಅವಕಾಶವಾಗಿತ್ತು. ಭಾರತ ತಂಡವು ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 87 ರನ್ ಗಳ ಗೆಲುವು ಸಾಧಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿತ್ತು.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಮೂರನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೂಡ 5 ವಿಕೆಟ್‌ಗಳ ಜಯ ಗಳಿಸಿತು. ಆನಂತರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತವನ್ನು 3 ವಿಕೆಟ್‌ಗಳಿಂದ ಸೋಲನುಭವಿಸಿತು. ವೆಸ್ಟ್ ಇಂಡೀಸ್ ವಿರುದ್ಧ ಭಾರತ 80 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು.
ಈ ಮೂಲಕ ಭಾರತ ತಂಡವು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತ್ತು. ಆಗ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವು 260 ರನ್ ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಭಾರತ ತಂಡವು ಸಚಿನ್, ಗೌತಮ್ ಗಂಭೀರ್ ಹಾಗೂ ಯುವರಾಜ್ ಸಿಂಗ್ ಅವರ ಅರ್ಧ ಶತಕದ ನೆರವಿನಿಂದ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 29 ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿ 260 ರನ್ ಗಳಿಸಿದ ಭಾರತ ಪಾಕಿಸ್ತಾನವನ್ನು 231 ರನ್‌ಗಳಿಗೆ ಆಲೌಟ್ ಮಾಡಿತ್ತು. ಸಚಿನ್ ತೆಂಡೂಲ್ಕರ್ 85 ರನ್ ಗಳಿಸಿ ಮಿಂಚಿದ್ದರು.
ಇನ್ನೂ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 274 ರನ್ ಗಳಿಸಿತು. ಮಹೇಲ ಜಯವರ್ಧನೆ 103 ರನ್ ಗಳಿಸಿ ಮಿಂಚಿದರು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ ಆಸರೆಯಾದರು. ಗಂಭೀರ್ 122 ಎಸೆತಗಳಲ್ಲಿ 97 ರನ್ ಗಳಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ 79 ಎಸೆತಗಳಲ್ಲಿ 8 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 91 ರನ್ ಗಳಿಸಿದರು. ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಎರಡನೇ ಏಕದಿನ ವಿಶ್ವಕಪ್ ಗೆದ್ದು ಕೊಟ್ಟರು. ಸದ್ಯ ಇಡೀ ಭಾರತೀಯರು ಈ ಘಳಿಗೆಯನ್ನು ಮತ್ತೊಮ್ಮೆ ಮೆಲಕು ಹಾಕುತ್ತಿದ್ದಾರೆ.

