Kornersite

State

101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಶೂರ!

Koppala : ಬ್ರಹ್ಮಚಾರಿ ಹನುಮಂತ(Hanumant) ಶಕ್ತಿಯ ಪ್ರತಿರೂಪ. ಹೀಗಾಗಿ ದೇಹ ದಂಡಿಸುವ, ಶಾರೀರಿಕವಾಗಿ ಶಕ್ತಿ ಬಯಸುವವರು ಕೂಡ ಹನುಮನ ಭಕ್ತರಾಗಿರುತ್ತಾರೆ. ಹೀಗಾಗಿಯೇ ಪ್ರತಿಯೊಂದು ಗರಡಿ ಮನೆ ಸೇರಿದಂತೆ ಶಕ್ತಿ ಪ್ರದರ್ಶನದ ವ್ಯಾಯಾಮ ಸ್ಥಳಗಳಲ್ಲಿ ಅವರ ಆರಾಧ್ಯ ದೈವ ಹನುಮನ ಪಟಕ್ಕೆ ಮೊದಲ ಸ್ಥಾನ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಹನುಮನ ಭಕ್ತ, ತನ್ನ ಶಕ್ತಿ ಪ್ರದರ್ಶನ ಮಾಡಿ, ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
46 ವರ್ಷದ ವ್ಯಕ್ತಿ ರಾಯಪ್ಪ ದಪೇದಾರ್(Rayappa Dapedar) ಎಂಬ ವ್ಯಕ್ತಿ ರಾಮ ನವಮಿ ದಿನದಂದು 101 ಕೆಜಿಯ ಜೋಳದ ಚೀಲ ಹೊತ್ತು ಹನುಮಂತ ಹುಟ್ಟಿದ ಸ್ಥಳ, ಅಂಜನಾದ್ರಿ(Anjanadri) ಬೆಟ್ಟ ಏರಿ ಸಾಹಸ ಮೆರೆದಿದ್ದ. ಸದ್ಯ ಮತ್ತೋರ್ವ ಆಂಜನೇಯನ ಭಕ್ತ, 105 ಕೆಜಿಯ ಅಕ್ಕಿ(Rice) ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ್ದಾರೆ.
ಜಿಲ್ಲೆಯ ಯಲಬುರ್ಗಾ(Yalburga) ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದ 34 ವರ್ಷದ ಹನುಮಂತಪ್ಪ ಪೂಜಾರ(Hanumantappa Pujar) ಎಂಬ ಯುವಕ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿ ಎಲ್ಲರ ಗಮನ ಸೆಳೆದಿದ್ದಾನೆ. ಅಲ್ಲದೇ, ರಾಯಪ್ಪ ಅವರ ದಾಖಲೆ ಮುರಿದಿದ್ದಾನೆ. ಬೆಳಿಗ್ಗೆ 6 ಗಂಟೆಗೆ ಬೆಟ್ಟ(Hill) ಏರುವುದನ್ನು ಆರಂಭಿಸಿ 50 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಹತ್ತಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಬೆಟ್ಟದಲ್ಲಿ 575 ಮೆಟ್ಟಿಲುಗಳಿವೆ. ಹೀಗಾಗಿ ಭಕ್ತರು ಮೆಟ್ಟಿಲು ಹತ್ತರು ಕಷ್ಟ ಪಡುತ್ತಿರುತ್ತಾರೆ. ಆದರೆ, ಇಂತಹ ಕಷ್ಟದ ಕೆಲಸವನ್ನು ಬಿರು ಬೇಸಿಗೆಯಲ್ಲಿಯೇ ಈ ವ್ಯಕ್ತಿ ಮಾಡಿದ್ದಾರೆ. ರಾಮ ನವಮಿಯ ದಿನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬುವರು 101 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ್ದರು. ಈಗ ಹನುಮಂತಪ್ಪ ಪೂಜಾರ,ರಾಯಪ್ಪ ಅವರಿಗಿಂತ 4 ಕೆಜಿ ಹೆಚ್ಚಿರುವ ಅಕ್ಕಿ ಚೀಲ ಹೊತ್ತುಕೊಂಡು ಹನುಮನ ದರ್ಶನ ಮಾಡಿದ್ದಾರೆ.
ಆಂಜನೇಯನ ದರ್ಶನ ಪಡೆಯಬೇಕು ಎಂದು ಹಲವು ವರ್ಷಗಳಿಂದ ಕಾಯುತ್ತಿದ್ದೆ. ಮೊದಲ ಬಾರಿಗೆ ಬೆಟ್ಟ ಹತ್ತಿದ‌ ನೆನಪನ್ನು ಸ್ಮರಣೀಯವಾಗಿರಿಸಬೇಕು ಎಂಬ ಕಾರಣಕ್ಕೆ ಅಕ್ಕಿ‌ಚೀಲ ಹೊತ್ತು ಹತ್ತಲು ನಿರ್ಧರಿಸಿದ್ದರು. ಚೀಲ ಹೊತ್ತು ಬೆಟ್ಟ ಹತ್ತಬೇಕು ಎನ್ನುವ ಬಹಳ ದಿನಗಳ ಕನಸು ಈಗ ನನಸಾಗಿದೆ. ನನ್ನ ಆಸೆಗೆ ಊರಿನ ಸ್ನೇಹಿತರು ನೆರವಾದರು. ಬಿಸಿಲು ಹೆಚ್ಚಾಗುವ ಮೊದಲೇ ಬೆಟ್ಟ ಹತ್ತಿ ಇಳಿಯಬೇಕು ಎಂದು ನಿರ್ಧರಿಸಿದ್ದೆ. ಅಂದುಕೊಂಡಂತೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಆ ವ್ಯಕ್ತಿ ಹೇಳಿದ್ದಾರೆ

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ