Kornersite

Bollywood Mix Masala

ಹಾಲಿವುಡ್ ನಟಿಗೆ ಮತ್ತು ಕೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್ ನಟ ವರುಣ್ ಧವನ್!

ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತ ಸಡನ್ ಆಗಿ ಹಾಲಿವುಡ್ (Hollywood) ನಟಿ ಹಾಗೂ ಮಾಡೆಲ್ ಗಿಗಿಯನ್ನ ತಬ್ಬಿಕೊಂಡ. ನೋಡ ನೋಡುತ್ತಿದ್ದಂತೆ ಆಕೆಯನ್ನ ಎತ್ತಿ ಒಂದು ಸುತ್ತು ಹಾಕಿದ. ಏನು ನಡಿತಿದೆ ಎಂದು ನಟಿ ಯೋಚನೆ ಮಾಡುವಷ್ಟರಲ್ಲೆ ಕೆನ್ನೆಗೆ ಮುತ್ತು ಕೊಟ್ಟೆ ಬಿಟ್ಟ. ಇಷ್ಟೆಲ್ಲ ನಡೆದಿರುವುದರ ವಿಡಿಯೋ ವೈರಲ್ ಆಗ್ತಾ ಇದ್ದಂತೆ ನಟ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಅವನೇ ಬಾಲಿವುಡ್ (Bollywood) ನಟ ವರುಣ್ ಧವನ್ (Varun Dhavan).

ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಇವೆಂಟ್ ನಲ್ಲಿ ಹಲವು ನಟ, ನಟಿಯರು, ಗಣ್ಯರು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ನಿಕ್ ಜೋನಸ್ ಹಾಗೂ ಪ್ರಿಯಾಂಚಾ ಚೋಪ್ರಾ ಜೋನಸ್ ಸೇರಿದಂತೆ ಹಲವು ಸಲೆಬ್ರಿಟಿಗಳು ಭಾಗಿಯಾಗಿದ್ದರು. ಇದೇ ವೇಳೆ ವೇದಿಕೆ ಮೇಲೆ ನೃತ್ಯ ಪ್ರದರ್ಶನ ಮಾಡುತ್ತಿದ್ದ ನಟ ವರುಣ್, ಗಿಗಿಯನ್ನು ಕರೆದರು. ನಂತರ ಗಿಗಿಯ ಕೈ ಹಿಡಿದು ಅವಳನ್ನು ಎತ್ತಿಕೊಂಡ ಸುತ್ತುತ್ತಾನೆ. ನಂತರ ಅವಳ ಕೆನ್ನೆಗೆ ಕಿಸ್ ಮಾಡುತ್ತಾನೆ. ಈ ಘಟನೆ ನಡೆದ ತಕ್ಷಣ ಗಿಗಿ ವೇದಿಕೆಯಿಂದ ಕೂಡಲೇ ಇಳಿದು ಹೋಗುತ್ತಾಳೆ.

ಮ್ಯಾಟರ್ ಇಷ್ಟಕ್ಕೆ ಮುಗಿಯದೇ ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಇದು ಅಗತ್ಯವಿರಲಿಲ್ಲ” ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇನ್ಮುಂದೆ ಗಿಗಿ ಭಾರತಕ್ಕೆ ಮರಳಿ ಬರುವುದಿಲ್ಲ ಎಂದು ಹೇಳ್ತಾ ಇದ್ದಾರೆ

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Mix Masala

ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2 ಟ್ರೇಲರ್ ಬಿಡುಗಡೆ

ನಟ ರಮೇಶ್ ಅರವಿಂದ್(Ramesh Aravind) ನಟಿಸಿರುವ ಶಿವಾಜಿ ಸುರತ್ಕಲ್-2( Shivaji Suratkal-2) ಚಿತ್ರದ ಟ್ರೇಲರ್(trailer) ನ್ನು ಚಿತ್ರ ತಂಡವು ಬಿಡುಗಡೆ(Released) ಮಾಡಿದೆ.ಆಕಾಶ್ ಶ್ರೀವತ್ಸ(Akash Shrivatsa) ನಿರ್ದೇಶಿಸಿರುವ ಈ