ನಾವು ಊಟಕ್ಕೆ ಎಷ್ಟು ಮಹತ್ವ ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಊಟ(Food) ಆದ್ಮೇಲೆ ಏನು ಮಾಡ್ತೀವಿ ಅನ್ನೋದು ಮುಖ್ಯ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸ(Habbit) ಇರುತ್ತದೆ. ಕೆಲವರು ಊಟ ಆದ ಮೇಲೆ ನಿದ್ದೆ ಮಾಡ್ತಾರೆ. ಇನ್ನು ಕೆಲವರು ವಾಕಿಂಗ್ ಮಾಡ್ತಾರೆ. ಮತ್ತೆ ಕೆಲವರು ಫ್ರೇಶ್ ಆಗೋದಕ್ಕೆ ಸ್ನಾನ ಮಾಡ್ತಾರೆ. ಹೌದು ನಿಮಗೂ ಈ ರೀತಿಯ ಅಭ್ಯಾಸ ಇದೆಯಾ..? ಒಂದು ವೇಳೆ ಇದ್ದರೆ ಮಿಸ್ ಮಾಡದೇ ಕಂಪ್ಲೀಟ್ ಆಗಿ ಈ ಸ್ಟೋರಿ ಓದಿ.
ಊಟ ಆದ್ಮೇಲೆ ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು. ಒಂದು ವೇಳೆ ಅಪ್ಪಿ ತಪ್ಪಿಯೂ ಹೀಗೆ ಮಾಡಿದ್ರೆ ನಿಮ್ಮ ಆರೋಗ್ಯ(Health) ಸಮಸ್ಯೆ ಕಟ್ಟಿಟ್ಟ ಬುತ್ತಿ.
ಆಹಾರ ಕರಗಲು ದೇಹದ ಬಹಳಷ್ಟು ಎನರ್ಜಿ ಹಾಗೂ ರಕ್ತಚಲನೆಯ (Blood Circulation) ಅಗತ್ಯವಿರುತ್ತದೆ. ಊಟವಾದ ಕೂಡಲೇ ಸ್ನಾನ ಮಾಡಿದರೆ ದೇಹ ಉಷ್ಣಾಂಶವನ್ನು ಹೊರ ಹಾಕಲು ಚರ್ಮದ(Skin) ಕಡೆ ರಕ್ತ ನುಗ್ಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಕಷ್ಟ.
ಸೋ ನಿವೇನಾದ್ರು ಊಟ ಆದ್ಮೇಲೆ ಸ್ನಾನ ಮಾಡುವ ಅಭ್ಯಾಸ ಹೊಂದಿದ್ದೇ ಆದಲ್ಲಿ ಕೂಡಲೇ ಬಿಟ್ಟು ಬಿಡಿ. ಸ್ನಾನ ಆದ ಮೇಲೆ ಊಟ ಮಾಡುವ ಅಭ್ಯಾಸ ರೋಢಿಸಿಕೊಳ್ಳಿ. ಆರೋಗ್ಯದ ಕಡೆ ಗಮನ ಕೊಡಿ