Kornersite

Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.
1960ರ ದಶಕದಲ್ಲಿ ಭಾರತದ ಆಲ್ ರೌಂಡರ್ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಆಲ್ರೌಂಡರ್ ಕ್ರಿಕೆಟಿಗರಾಗಿದ್ದ ದುರಾನಿ ಅವರು ಬಾಲಿವುಡ್ ನಲ್ಲಿ ಕೂಡ ನಟಿಸಿದ್ದಾರೆ. 1934ರ ಡಿಸೆಂಬರ್ 11ರಂದು ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಜನಿಸಿದ್ದ ಸಲೀಂ ದುರಾನಿ, ಗುಜರಾತ್ನ ಜಮ್ನಾಗರ್ದಲ್ಲಿ ತಮ್ಮ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ವಾಸಿಸುತ್ತಿದ್ದರು. ಜನವರಿಯಲ್ಲಿ ಕುಸಿದು ಬಿದ್ದು ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದರು.
ದುರಾನಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಿಂದ ಖ್ಯಾತಿ ಗಳಿಸಿದ್ದರು. ಎಡಗೈ ಬೌಲರ್ ಆಗಿದ್ದ ಸಲೀಂ, ಭಾರತದ ಪರ 29 ಟೆಸ್ಟ್‌ಗಳನ್ನು ಆಡಿದ್ದು, 1961- 62 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೆಸ್ಟ್ ಸರಣಿಯ ಐತಿಹಾಸಿಕ ಗೆಲುವಿನಲ್ಲಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಸಲೀಂ ಕ್ರಮವಾಗಿ 8 ಮತ್ತು 10 ವಿಕೆಟ್‌ ಗಳನ್ನು ಪಡೆದು, 2-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು ಕಾರಣರಾಗಿದ್ದರು.

ಸಲೀಂ ದುರಾನಿ ಅವರು 1960ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು 1960ರಲ್ಲಿ. 1961-62ರಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದಿದ್ದ ಟೆಸ್ಟ್ ಮ್ಯಾಚ್ನಲ್ಲಿ ಸ್ಟಾರ್ ಆಗಿ ಹೊರ ಹೊಮ್ಮಿದ್ದರು.
ಆಡಿದ 50 ಇನ್ನಿಂಗ್ಸ್‌ ಗಳ ಪೈಕಿ 7 ಅರ್ಧಶತಕ, ಒಂದು ಶತಕ ಸಿಡಿಸಿರುವ ಅವರು ಒಟ್ಟು 1,202 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ವಿಜಯದ ಒಂದು ದಶಕದ ನಂತರ, ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸಿದ್ದರು. ಅಂದಿನ ದೈತ್ಯ ದಂತಕಥೆಗಳಾದ ಕ್ಲೈವ್ ಲಾಯ್ಡ್ ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್ ಇಬ್ಬರನ್ನೂ ಪಂದ್ಯದಲ್ಲಿ ಔಟ್ ಮಾಡಿದ್ದರು. ಅವರು ಉತ್ತಮ ಶಿಸ್ತಿಗೆ ಹೆಸರು ವಾಸಿಯಾಗಿದ್ದರು. ಅವರ ಡ್ರೆಸ್ಸಿಂಗ್ ಕೋಡ್ ನ್ನು ಎಲ್ಲರೂ ಕೊಂಡಾಡುತ್ತಿದ್ದರು.
1960ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅವರು, 1960ರಲ್ಲಿ. 1961-62ರಲ್ಲಿ ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಾವಳಿಯಲ್ಲಿ 10 ವಿಕೆಟ್ ಪಡೆದಿದ್ದರು. ನಂತರ ಸ್ಪೇನ್ನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿಯೂ ಭಾರತ ಮೊದಲ ಬಾರಿಗೆ ಗೆಲುವು ಸಾಧಿಸುವಲ್ಲಿ ದುರಾನಿ ಪಾತ್ರ ದೊಡ್ಡದಿತ್ತು. 1973 ರಲ್ಲಿ ಬಾಲಿವುಡ್ನ ಚರಿತ್ರಾ ಸಿನಿಮಾದಲ್ಲಿ ಹೆಸರಾಂತ ನಟ ಪ್ರವೀಣ್ ಬಾಬಿ ಜೊತೆ ನಟಿಸಿದ್ದರು. ಈ ಮೂಲಕ ಬಣ್ಣದ ಲೋಕಕ್ಕೂ ಎಂಟ್ರಿ ಕೊಟ್ಟಿದ್ದರು.
ಸಲೀಂ ದುರಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಸಲೀಂ ದುರಾನಿಯವರು ಮೊದಲಿನಿಂದಲೂ ಗುಜರಾತ್ ಜೊತೆಗೆ ಗಟ್ಟಿಯಾದ ಒಡನಾಟ ಹೊಂದಿದ್ದರು. ಅವರು ಗುಜರಾತ್ ಮತ್ತು ಸೌರಾಷ್ಟ್ರ ಪರ ಆಟವಾಡಿದ್ದರು. ಬಳಿಕ ಗುಜರಾತ್ನಲ್ಲೇ ನೆಲೆಸಿದ್ದರು. ನನಗೂ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರ ಬಹುಮುಖ ವ್ಯಕ್ತಿತ್ವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಅಗಲುವಿಕೆ ಕಾಡುತ್ತದೆ. ಸಲೀಂ ದುರಾನಿ ಜೀ ಅವರು ಕ್ರಿಕೆಟ್ನ ದಂತಕಥೆ. ಅವರೇ ಒಬ್ಬ ಇನ್ಸ್ಟಿಟ್ಯೂಶನ್ ಆಗಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಬೆಳೆಯಲು ಮಹತ್ವದ ಕೊಡುಗೆ ನೀಡಿದ್ದಾರೆ. ನ್ನು ಕ್ರಿಕೆಟ್ ಫೀಲ್ಡ್ನಲ್ಲಿ ಇರಬಹುದು, ಆಚೆಗೆ ಇರಬಹುದು. ತಮ್ಮದೇ ಆದ ಒಂದು ಸ್ಟೈಲ್ ಹೊಂದಿದ್ದರು. ಅವರ ಸಾವು ನೋವು ತಂದಿದೆ. ಸಲೀಂ ದುರಾನಿ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಭಾರತ ತಂಡದ 2ನೇ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 12

ಇದೇ ದಿನ ಕಳೆದ 12 ವರ್ಷಗಳ ಹಿಂದೆ ಭಾರತೀಯರ ಪಾಲಿಗೆ ಬಹು ಸಂಭ್ರಮದ ದಿನವಾಗಿತ್ತು. ಏಕೆಂದರೆ ಈ ದಿನ ಭಾರತೀಯ ಕ್ರಿಕೆಟ್ ತಂಡವು ಇಡೀ ಭಾರತೀಯರಿಗೆ ಸಂತಸದ