ನಟ ರಮೇಶ್ ಅರವಿಂದ್(Ramesh Aravind) ನಟಿಸಿರುವ ಶಿವಾಜಿ ಸುರತ್ಕಲ್-2( Shivaji Suratkal-2) ಚಿತ್ರದ ಟ್ರೇಲರ್(trailer) ನ್ನು ಚಿತ್ರ ತಂಡವು ಬಿಡುಗಡೆ(Released) ಮಾಡಿದೆ.
ಆಕಾಶ್ ಶ್ರೀವತ್ಸ(Akash Shrivatsa) ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಶಿವಾಜಿ ಸುರತ್ಕಲ್ 2 ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆಯಾಗಿದ್ದು, ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯ ಕುರಿತು ಚರ್ಚೆ ಮಾಡಿದ್ದೇವು. ಆದರೆ, ಪ್ರತಿಯೊಬ್ಬರೂ ಲಾಕ್ ಡೌನ್ ನಿಂದ ತೊಂದರೆ ಅನುಭವಿಸಿದರೆ, ನಾವು ಮಾತ್ರ ಈ ಚಿತ್ರದ ಕಥೆ ಬರೆದೇವು. ನಮ್ಮ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಅಂದುಕೊಂಡಂತೆ ಈಗ ಟ್ರೈಲರ್ ಬಿಡುಗಡೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮನೆ ಮಾಡಿರುವ ‘ಮಾಯಾವಿ ಯಾರು?’ ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ.
ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಉತ್ತಮವಾಗಿದೆ. ಏಪ್ರಿಲ್(April) ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ ಎಂದು ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.
ಅನೂಪ್ ಗೌಡ ನಿರ್ಮಾಪಕರಾಗಿದ್ದು, ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಈ ಚಿತ್ರದಲ್ಲಿ ನಟಿಸಿದ್ದಾರೆ
ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2 ಟ್ರೇಲರ್ ಬಿಡುಗಡೆ

