ಕಾಂಗ್ರೆಸ್ (Congress) 2ನೇ ಪಟ್ಟಿಯಲ್ಲೂ ಸಿದ್ದರಾಮಯ್ಯ (Siddaramaiah) ಮಿಸ್ಸಿಂಗ್!-42 ಅಭ್ಯರ್ಥಿಗಳ ಪಟ್ಟಿಯಲ್ಲಿ ಬಾದಾಮಿ ಸೋಲ್ಡ್ ಔಟ್ - Kornersite

Kornersite

Bengaluru Just In Politics

ಕಾಂಗ್ರೆಸ್ (Congress) 2ನೇ ಪಟ್ಟಿಯಲ್ಲೂ ಸಿದ್ದರಾಮಯ್ಯ (Siddaramaiah) ಮಿಸ್ಸಿಂಗ್!-42 ಅಭ್ಯರ್ಥಿಗಳ ಪಟ್ಟಿಯಲ್ಲಿ ಬಾದಾಮಿ ಸೋಲ್ಡ್ ಔಟ್

Bangalore: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎಡನೇ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಎಐಸಿಸಿ 42 ಕ್ಷೇತ್ರಗಳ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಆದರೆ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈ.ಎಸ್. ದತ್ತಾಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇದರಿಂದಾಗಿ ದತ್ತಾ ಹಾಗೂ ಅಭಿಮಾನಿಗಳಿಗೆ ಬೇಸರ ಉಂಟಾಗುವಂತಾಗಿದೆ. ಇನ್ನೂ ಶಿಗ್ಗಾವಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಎದುರು ವಿನಯ ಕುಲಕರ್ಣಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರಿಗೆ ಧಾರವಾಡ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ನಿಪ್ಪಾಣಿ ಕ್ಷೇತ್ರ-ಕಾಕಾ ಸಾಹೇಬ್ ಪಾಟೀಲ್, ಗೋಕಾಕ್ ಕ್ಷೇತ್ರ-ಮಹಾಂತೇಶ್ ಕಡಾಡಿ, ಕಿತ್ತೂರ- ಬಾಬಾಸಾಹೇಬ್ ಡಿ. ಪಾಟೀಲ್, ಸವದತ್ತಿ ಯಲ್ಲಮ್ಮ- ವಿಶ್ವಾಸ ವಸಂತ ವೈದ್ಯ, ಮುಧೋಳ(ಎಸ್ಸಿ)- ರಾಮಪ್ಪ ಬಾಳಪ್ಪ ತಿಮ್ಮಾಪುರ, ಬೀಳಗಿ- ಜೆ.ಟಿ. ಪಾಟೀಲ್, ಬದಾಮಿ – ಬೀಮಸೇನ್ ಚಿಮ್ಮನಕಟ್ಟಿ, ಬಾಗಲಕೋಟೆ- ಎಚ್.ವೈ. ಮೇಟಿ, ವಿಜಯಪುರ ನಗರ – ಅಬ್ಲುಲ್ ಹಮೀದ್ ಕಾಜಸಾಹೇಬ್ ಮುಶ್ರಿಫ್, ನಾಗಠಾಣ(ಎಸ್ಸಿ) – ವಿಠ್ಠಲ ಕಟಕದೊಂಡ, ಅಫಜಲಪುರ – ಎಂ.ವೈ. ಪಾಟೀಲ, ಯಾದಗಿರಿ- ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಗುರುಮಿಠಕಲ್- ಬಾಬುರಾವ್ ಚಿಂಚನಸೂರ್, ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ, ಬಸವಕಲ್ಯಾಣ – ವಿಜಯ ಧರಂಸಿಂಗ್, ಗಂಗಾವತಿ – ಇಕ್ಬಾಲ್ ಅನ್ಸಾರಿ, ನರಗುಂದ- ಬಿ.ಆರ್. ಯಾವಗಲ್, ಧಾರವಾಡ- ವಿನಯ ಕುಲಕರ್ಣಿ, ಕಲಘಟಗಿ- ಸಂತೋಷ್ ಎಸ್. ಲಾಡ್, ಶಿರಸಿ- ಭೀಮಣ್ಣ ನಾಯಕ್, ಯಲ್ಲಾಪುರ – ವಿ.ಎಸ್. ಪಾಟೀಲ್, ಕುಡಲಗಿ(ಎಸ್ಟಿ)- ಡಾ. ಶ್ರೀನಿವಾಸ ಎನ್.ಟಿ, ಮೊಳಕಾಲ್ಮೂರು(ಎಸ್ಟಿ)- ಎನ್.ವೈ. ಗೋಪಾಲಕೃಷ್ಣ, ಚಿತ್ರದುರ್ಗ – ಕೆ.ಸಿ. ವೀರೇಂದ್ರ, ಚನ್ನಗಿರಿ – ಬಸವರಾಜ ಶಿವಗಂಗಾ, ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್, ಉಡುಪಿ- ಪ್ರಸಾದ್ ರಾಜ್ ಕಾಂಚನ್, ಕಡೂರ್- ಆನಂದ ಕೆ.ಎಸ್, ತುಮಕೂರು ನಗರ – ಇಕ್ಬಾಲ್ ಅಹ್ಮದ್, ಗುಬ್ಬಿ- ಎಸ್.ಆರ್. ಶ್ರೀನಿವಾಸ, ಯಲಹಂಕ- ಕೇಶವ ರಾಜಣ್ಣ ಬಿ, ಯಶವಂತಪುರ – ಎಸ್. ಬಾಲರಾಜ್ ಗೌಡ, ಮಹಾಲಕ್ಷ್ಮೀ ಲೇಔಟ್ – ಕೇಶವ ಮೂರ್ತಿ, ಪದ್ಮನಾಭ ನಗರ – ವಿ. ರಘುನಾಥ ನಾಯ್ಡು, ಮೇಲುಕೋಟೆ- ದರ್ಶನ ಪುಟ್ಟಣ್ಣಯ್ಯ, ಮಂಡ್ಯ- ಪಿ. ರವಿಕುಮಾರ್, ಕೃಷ್ಣರಾಜಪೇಟೆ- ಬಿ.ಎಲ್. ದೇವರಾಜ್, ಬೇಲೂರು- ಬಿ. ಶಿವರಾಮ್, ಮಡಿಕೇರಿ- ಡಾ. ಮಂಥರಾ ಗೌಡ, ಚಾಮುಂಡೇಶ್ವರಿ – ಸಿದ್ದೇಗೌಡ, ಕೊಳ್ಳೇಗಾಲ(ಎಸ್ಸಿ)- ಎ.ಆರ್. ಕೃಷ್ಣಮೂರ್ತಿಗೆ ಟಿಕೆಟ್ ನೀಡಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮತ್ತೊಮ್ಮೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಪಟ್ಟು ಹಿಡಿದಿದ್ದರು. ಈ ಕುರಿತು ದೆಹಲಿ ಚಲೋ ಕೂಡ ನಡೆಸಿದ್ದರು. ಆದರೆ, ಬಾದಾಮಿಯಿಂದ ಈ ಬಾರಿ ಬಿ.ಬಿ. ಚಿಮ್ಮನಕಟ್ಟಿಗೆ ಟಿಕೆಟ್ ನೀಡಲಾಗಿದೆ. ಆದರೆ, ಎರಡನೇ ಪಟ್ಟಿಯಲ್ಲಿ ಕೂಡ ಕೋಲಾರದ ಅಭ್ಯರ್ಥಿ ಕುರಿತು ಅಂತಿಮವಾಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧೆ ಮಾಡಬಹುದು ಎಂಬ ಸಂಶಯ ಇನ್ನೂ ಮತದಾರರನ್ನು ಕಾಡುತ್ತಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು