Kornersite

Bollywood Entertainment Just In Mix Masala

Priyanka Chopra: ಮಗಳೊಂದಿಗೆ ಸಿದ್ಧಿ ವಿನಾಯಕನ ದರ್ಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ

Mumbai : ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ತಮ್ಮ ಪತಿ ಹಾಗೂ ಮಗಳೊಂದಿಗೆ ಮುಂಬಯಿನಲ್ಲಿ ಕೆಲವು ದಿನಗಳಿಂದ ನೆಲೆಸಿದ್ದಾರೆ. ಮುಂದಿನ ವೆಬ್ ಸರಣಿ `ಸಿಟಾಡೆಲ್’ ಪ್ರಚಾರದಲ್ಲಿ ಸದ್ಯ ಪ್ರಿಯಾಂಕಾ ನಿರತರಾಗಿದ್ದು, ಈ ಮಧ್ಯೆ ಗುರುವಾರ ತಮ್ಮ ಪುತ್ರಿ ಮಾಲ್ತಿ ಮೇರಿಯೊಂದಿಗೆ ನಗರದಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಅವರು ದೇವಸ್ಥಾನಕ್ಕೆ ಹೋಗಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳನ್ನು ಪ್ರಿಯಾಂಕಾ ಹಚ್ಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾಂಕಾ ತಮ್ಮ ಮಗಳು ಮಾಲ್ತಿಯನ್ನು ತೋಳುಗಳಲ್ಲಿ ಹಿಡಿದಿರುವನ್ನು ನೋಡಬಹುದಾಗಿದೆ. ನಟಿ ಸಾಂಪ್ರದಾಯಿಕ ಉಡುಪು ಧರಿಸಿದ್ದು, ದೇವಸ್ಥಾನದ ಒಳಗಿರುವ ಗಣೇಶನ ಮೂರ್ತಿಯ ಮುಂದೆ ಭಕ್ತಿ- ಭಾವದಿಂದ ನಿಂತಿರುವುದನ್ನು ನೋಡಬಹುದಾಗಿದೆ.
ನಟಿ ಪ್ರಿಯಾಂಕಾಗೆ ಮುಂಬಯಿ ನಗರ ಎಂದರೆ ಎಲ್ಲಿಲ್ಲದ ಪ್ರೀತಿ ಎಂಬುವುದನ್ನು ಆಗಾಗಗ ತೋರಿಸಿದ್ದಾರೆ. ಸದ್ಯ ಮುಂಬಯಿಗೆ ಆಗಮಿಸಿರುವ ಅವರು ಸಿದ್ಧಿವಿನಾಯಕನ ದರ್ಶನ ಪಡೆದಿದ್ದಾರೆ. ಪ್ರಿಯಾಂಕಾ ಮದುವೆಯಾಗುತ್ತಿದ್ದಂತೆ ವಿದೇಶಕ್ಕೆ ತೆರಳಿದ್ದಾರೆ. ಆದರೂ ಕೂಡ ಅವರು ಭಾರತೀಯ ಸಂಸ್ಕೃತಿ ಮರೆತಿಲ್ಲ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ.
ಅವರು ವಿದೇಶದಲ್ಲಿದ್ದರೂ ಭಾರತೀಯರ ಪ್ರತಿಯೊಂದು ಹಬ್ಬವನ್ನೂ ಆಚರಿಸುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಪತಿ ನಿಕ್ ಜೋನಸ್ ಜೊತೆ ನೈಟ್ ಡೇಟಿಂಗ್ ಎಂದು ಮುಂಬಯಿನಲ್ಲಿ (Mumbai) ಆಟೋರಿಕ್ಷಾದ ಬಳಿ ನಿಂತು ಫೋಟೋ ತೆಗೆಸಿಕೊಂಡಿದ್ದರು. ಈಗ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಅವರ ಪುಟ್ಟ ಮಗಳಾದ ಮಾಲ್ತಿ (Malti) ಮೇರಿಯನ್ನು ಮುಂಬಯಿನಲ್ಲಿರುವ ಪ್ರಸಿದ್ದ ಸಿದ್ದಿ ವಿನಾಯಕ ದೇವಸ್ಥಾನಕ್ಕೆ (Vinayaka Temple) ಕರೆದುಕೊಂಡು ಹೋಗಿ ಈಗ ಮತ್ತೆ ಸುದ್ದಿಯಾಗಿದ್ದಾರೆ.
ನಟಿ ಪ್ರಿಯಾಂಕಾ ಮುಖೇಶ್ ಅಂಬಾನಿ ಅವರ ಕಲ್ಚರಲ್ ಸೆಂಟರ್ ನ ಗ್ರ್ಯಾಂಡ್ ಓಪನಿಂಗ್ ವೀಕೆಂಡ್ ಕಾರ್ಯಕ್ರಮಕ್ಕೆ ಬಂದು, ಈಗ ಮುಂಬಯಿನಲ್ಲಿಯೇ ಸುತ್ತಾಟ ನಡೆಸಿ, ಎಂಜಾಯ್ ಮಾಡುತ್ತಿದ್ದಾರೆ. ನಟಿ ಪ್ರಿಯಾಂಕಾ ಮಗಳು ಜನಿಸಿದ ಮೇಲೆ ಇದೇ ಮೊದಲ ಬಾರಿಗೆ ದೇಶಕ್ಕೆ ಬಂದಿದ್ದಾರೆ. ಆದರೆ, ಸಿದ್ಧಿವಿನಾಯಕನ ದರ್ಶನದಲ್ಲಿ ತಾಯಿ ಮಗಳು ಇಬ್ಬರೇ ಇರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ನಿಕ್ ದೇವಸ್ಥಾನದ ಒಳಗೆ ತೆಗೆಸಿಕೊಂಡ ಯಾವುದೇ ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ.
ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಕೂಡ ನಟಿ ಪ್ರಿಯಾಂಕ ಹಾಗೂ ಮಗಳ ಪೋಟೋ ಹಾಗೂ ವಿಡಿಯೋ ಮಾಡಿಕೊಂಡು ಸಂತಸ ಪಟ್ಟಿದ್ದಾರೆ.
ಈ ಫೋಟೋ ಹಾಗೂ ವಿಡಿಯೋಗಳಿಗೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಂಕಾ ಮಗು ತುಂಬಾ ಚೆನ್ನಾಗಿದೆ ಹಾಗೂ ಶಾಂತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ದೇವಸ್ಥಾನಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಕಮೆಂಟ್ ಮಾಡಿದ್ದಾರೆ.
ಪ್ರಿಯಾಂಕಾ ಸ್ಪೈ-ಥ್ರಿಲ್ಲರ್ ವೆಬ್ ಸೀರಿಸ್ ‘ದಿ ಸಿಟಾಡೆಲ್’ ನ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದು, ಪ್ರೈಮ್ ವೀಡಿಯೋ ಸೀರಿಸ್ ನ ಪ್ರೀಮಿಯರ್ ಕೂಡ ನಡೆಯಿತು. ಇದರಲ್ಲಿ ಹಲವಾರು ಕಲಾವಿದರು ಭಾಗವಹಿಸಿದ್ದರು. ಇದು ಏ. 28ರಂದು ಬರೋಬ್ಬರಿ 40 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ