ನವದೆಹಲಿ : ಆಂಧ್ರದ (Andhra Pradesh) ಮಾಜಿ ಸಿಎಂ (Former Chief Minister) ಕಿರಣ್ ಕುಮಾರ್ ರೆಡ್ಡಿ (Kiran Kumar Reddy) ಅವರು ಬಿಜೆಪಿ (BJP) ಸೇರಿದ್ದಾರೆ.
ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದ ಕಿರಣ್ ಕುಮಾರ್ ರೆಡ್ಡಿ ಅವರು ಮಾರ್ಚ್ 12ರಂದು ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಶುಕ್ರವಾರ ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಎದುರು ಬಿಜೆಪಿ ಸೇರಿದ್ದಾರೆ.
ಆಂಧ್ರ ಪ್ರದೇಶದ ವಿಭಜನೆಯನ್ನು ವಿರೋಧಿಸಿದ್ದ ಕಿರಣ್ ಕುಮಾರ್ 2014ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದಿದ್ದರು. ನಂತರ, ಕ ‘ಕಿರಣ್ ಜೈ ಸಮೈಕ್ಯಾ ಆಂಧ್ರ’ ಪಕ್ಷ ಕಟ್ಟಿದ್ದರು. ಆದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಗತ್ಯ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ. ಆ ನಂತರ ಅವರು ಮತ್ತೆ 2018ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು.
ಕಳೆದ ತಿಂಗಳು ಕಿರಣ್ ಕುಮಾರ್ ಕಾಂಗ್ರೆಸ್ ಪಕ್ಷದ ಬಗ್ಗೆ ನಿರಾಶೆ ಹಾಗೂ ಅಪನಂಬಿಕೆ ವ್ಯಕ್ತಪಡಿಸಿ ಪಕ್ಷ ತೊರೆದಿದ್ದರು. ಸದ್ಯ ಅವರು ಬಿಜೆಪಿ ಸೇರಿದ್ದಾರೆ. ಆಂಧ್ರ ಮಾಜಿ ಸಿಎಂ ಬಿಜೆಪಿ ಸೇರಿರುವುದರಿಂದಾಗಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.