Kornersite

Bengaluru Just In Karnataka

Gold price: ಗುಡ್ ಫ್ರೈಡೇ ದಿನವೇ ಗುಡ್ ನ್ಯೂಸ್ ಕೊಟ್ಟ ಚಿನ್ನ!

Bangalore: ಚಿನ್ನದ ದರ ದೇಶದಲ್ಲಿ ಸತತವಾಗಿ ಏರಿಕೆ ಕಾಣುತ್ತಿತ್ತು. ಆದರೆ, ಸದ್ಯ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಬಂಗಾರ ಪ್ರಿಯಸು ಸಂತಸ ವ್ಯಕ್ತಪಡಿಸುವಂತಾಗಿದೆ.
ಇಂದು ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ (Gold Price in India) 300 ರೂ. ರಿಂದ 400 ರೂ. ನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ ಸುಮಾರು 60 ರೂ.ನಷ್ಟು ಕಡಿಮೆಯಾಗಿದೆ. ದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಾಲ್ಕೈದು ಸಾವಿರದಷ್ಟು ಏರಿಕೆ ಕಂಡಿದ್ದ ಚಿನ್ನ ಗುಡ್ ಫ್ರೈಡ್ ಡೇ ದಿನದಿಂದ ಬ್ರೇಕ್ ತೆಗೆದುಕೊಂಡು ಸ್ವಲ್ಪ ತಗ್ಗಿದೆ.
ಈ ಹಿನ್ನೆಲೆಯಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,900 ರೂ. ಆಗಿದೆ. 24 ಕ್ಯಾರೆಟ್ ನ ಅಪರಂಜಿ ಚಿನ್ನದ ಬೆಲೆ 60,980 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,649 ರೂ. ಗೆ ಇಳಿದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,950 ರೂ. ಆಗಿದೆ. ಬೆಳ್ಳಿ ಬೆಲೆ 8,000 ರೂ.ಗೆ ಇಳಿದಿದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಸದ್ಯ ಹೂಡಿಕೆದಾರರಲ್ಲಿ ಗೊಂದ ಮನೆ ಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿಯೇ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.
ದೇಶದಲ್ಲಿ ಆದಷ್ಟು ಚಿನ್ನದ ಬೆಲೆಯಲ್ಲಿನ ಏರಿಕೆ, ವಿದೇಶಗಳಲ್ಲಿ ಆಗಿಲ್ಲ. ಅಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಏಪ್ರಿಲ್ 7ರಂದು ಅಂತಾರಾಷ್ಟ್ರೀಯ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ ದಾಖಲೆ ಮಟ್ಟದ ಬೆಲೆಯಲ್ಲಿ ವಹಿವಾಟು ಕಾಣುತ್ತಿಲ್ಲ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಕನಿಷ್ಠ 50 ಸಾವಿರ ರೂ ಇದೆ. ಮಲೇಷ್ಯಾ, ಕತಾರ್ ಮತ್ತು ಓಮನ್ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.
ತಜ್ಞರ ಅನಿಸಿಕೆಯಂತೆ ಇನ್ನೂ ಹಲವು ದಿನಗಳ ಚಿನ್ನದ ಬೆಲೆಯಲ್ಲಿ ಏರಿಕೆಯಾಗಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎನ್ನುತ್ತಿದ್ದಾರೆ.
ವಿವಿಧ ನಗರಗಳಲ್ಲಿ ಇಂದು(ಏ. 7ರಂದು) 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 55,950 ರೂ, ಚೆನ್ನೈ: 56,500 ರೂ, ಮುಂಬೈ: 55,900 ರೂ, ದೆಹಲಿ: 56,050 ರೂ, ಕೋಲ್ಕತಾ: 55,900 ರೂ, ಕೇರಳ: 55,900 ರೂ, ಅಹ್ಮದಾಬಾದ್: 55,950 ರೂ, ಜೈಪುರ್: 56,050 ರೂ, ಲಕ್ನೋ: 56,050 ರೂ, ಭುವನೇಶ್ವರ್: 55,900 ರೂ ಇದೆ. ಇನ್ನೂ ಇದೇ ಚಿನ್ನದ ಬೆಲೆ ವಿದೇಶಗಳಲ್ಲಿ ನೋಡುವುದಾದರೆ, ಮಲೇಷ್ಯಾ: 2,830 ರಿಂಗಿಟ್ (52,688 ರುಪಾಯಿ), ದುಬೈ: 2262.50 ಡಿರಾಮ್ (50,454 ರುಪಾಯಿ), ಅಮೆರಿಕ: 620 ಡಾಲರ್ (50,796 ರುಪಾಯಿ), ಸಿಂಗಾಪುರ: 831 ಸಿಂಗಾಪುರ್ ಡಾಲರ್ (51,154 ರುಪಾಯಿ), ಕತಾರ್: 2,320 ಕತಾರಿ ರಿಯಾಲ್ (52,185 ರೂ),ಓಮನ್: 246 ಒಮಾನಿ ರಿಯಾಲ್ (52,333 ರುಪಾಯಿ), ಕುವೇತ್: 192.50 ಕುವೇತಿ ದಿನಾರ್ (51,382 ರುಪಾಯಿ) ದರ ಇದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ