ಮುಂದಿನ ತಿಂಗಳು ಅಂದರೆ 2023ರ ಮೇ. 5ರಂದು ಚಂದ್ರಗ್ರಹಣ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಹಲವು ರಾಶಿಯವರಿಗೆ ತೊಂದರೆಗಳಾದರೆ, ಹಲವು ರಾಶಿಯವರರು ಅನಿರೀಕ್ಷಿತ ಲಾಭಗಳನ್ನು ಗಳಿಸಲಿದ್ದಾರೆ.
ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ಸೂರ್ಯಗ್ರಹಣಗಳ ಗೋಚರಿಸಿದ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಕೆಟ್ಟದ್ದಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಜಾತಕ ಹಾಗೂ ರಾಶಿ ನೋಡಿಕೊಂಡು ಉತ್ತಮವಾಗುತ್ತದೆಯೋ ಅಥವಾ ಕೆಟ್ಟದ್ದಾಗುತ್ತದೆಯೋ ಎಂಬುವುದನ್ನು ತಿಳಿದುಕೊಂಡು ಆ ಪ್ರಕಾರ ನಡೆದುಕೊಳ್ಳಬೇಕು.
ಇನ್ನೂ ಈ ವರ್ಷದ ಮೊದಲ ಚಂದ್ರಗ್ರಹಣವು 2023 ರ ಮೊದಲ ಚಂದ್ರಗ್ರಹಣವು ಮೇ 5 ರಂದು ರಾತ್ರಿ 8.44 ಕ್ಕೆ ಪ್ರಾರಂಭವಾಗಿ ಅಂದೆ 1 ಗಂಟೆ ವೇಳೆಗೆ ಕೊನೆಯಾಗುತ್ತದೆ. ಈವರ್ಷದ ಈ ಚಂದ್ರ ಗ್ರಹಣವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೆನಂಬ್ರಾಲ್ ಗ್ರಹಣ ಎಂದು ಕರೆಯಲಾಗುತ್ತದೆ.
ಈ ವರ್ಷದ ಮೊದಲ ಚಂದ್ರ ಗ್ರಹಣವು ಪ್ರತಿಯೊಬ್ಬರ ಜೀವನದ ಮೇಲೆ ಕೆಲವು ಪ್ರಭಾವ ಬೀರಲಿದೆ. ಈ ಗ್ರಹಣವು ಎಲ್ಲಾ ರಾಶಿಗಳ ಮೇಲೆ ಖಂಡಿತವಾಗಿಯೂ ಸಾಕಷ್ಟು ಪರಿಣಾಮ ಬೀರುತ್ತಿದೆ. 12 ರಾಶಿಗಳ ಪೈಕಿ 9 ರಾಶಿಗಳ ಜನರಿಗೆ ಈ ಚಂದ್ರಗ್ರಹಣವು ಅಷ್ಟೊಂದು ಲಾಭ ನೀಡದಿದ್ದರೂ, ಮೂರು ರಾಶಿಗಳ ಜನರಿಗೆ ದೊಡ್ಡ ದೊಡ್ಡ ಲಾಭ, ಸಂಪತ್ತು, ಸಮೃದ್ಧಿಯನ್ನು ಪಡೆಯಲಿದ್ದಾರೆ.
ಈ ಚಂದ್ರಗ್ರಹಣದಿಂದ ಮಿಥುನ ರಾಶಿಯ ಜನರಿಗೆ ತುಂಬಾ ಲಾಭವಾಗಲಿದೆ. ಈ ಚಂದ್ರಗ್ರಹಣವು ಈ ರಾಶಿಯವರಿಗೆ ಶುಭಪ್ರದವಾಗಿದೆ. ಈ ರಾಶಿಯವರಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಇದಲ್ಲದೇ ಬಡ್ತಿ ಮತ್ತು ಇನ್ಕ್ರಿಮೆಂಟ್ ಪಡೆಯಬಹುದು. ಅದೃಷ್ಟದ ಬೆಂಬಲ ಸಿಗಲಿದೆ. ಮತ್ತೊಂದೆಡೆ, ವಿದೇಶಕ್ಕೆ ಹೋಗಲು ಬಯಸುವವರ ಕನಸುಗಳು ಈಡೇರುವ ಕಾಲ ಕೂಡ ಹತ್ತಿರವಾದಂತಾಗಿದೆ. ಈ ರಾಶಿಯವರ ಎಲ್ಲ ಇಷ್ಟಾರ್ಥಗಳು ಈಡೇರಲಿವೆ.
ಈ ಸಮಯದಲ್ಲಿ ಈ ರಾಶಿಯವರು ಕುಟುಂಬದ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯಲಿದ್ದಾರೆ. ಇದರೊಂದಿಗೆ, ಉದ್ಯಮಿಗಳು ವ್ಯಾಪಾರದಲ್ಲಿ ಬೆಳವಣಿಗೆ ಆಗುತ್ತದೆ. ಮತ್ತೊಂದೆಡೆ, ಈ ಗ್ರಹಣವು ವಿದ್ಯಾರ್ಥಿಗಳಿಗೆ ಮಂಗಳಕರವಾಗಿರಲಿದೆ.
ಇನ್ನೂ ಸಿಂಹ ರಾಶಿಯವರಿಗೆ ಈ ಚಂದ್ರಗ್ರಹಣದಿಂದ ಉತ್ತಮ ಲಾಭ ಸಿಗಲಿದೆ. ಈ ರಾಶಿಯವರ ಎಲ್ಲ ಕನಸುಗಳು ಈಡೇರಲಿವೆ. ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇದರೊಂದಿಗೆ, ಈ ಸಮಯದಲ್ಲಿ ನೀವು ನ್ಯಾಯಾಲಯ ವ್ಯವಹಾರಗಳಲ್ಲಿ ಯಶಸ್ಸು ಪಡೆಯಬಹುದು. ಈ ರಾಶಿಯವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ, ಉತ್ತಮ ಶುಭ ವಾರ್ತೆ ಕೇಳಲಿದ್ದಾರೆ. ಧ್ಯಾತ್ಮಿಕತೆಯ ಕುರಿತು ಈ ರಾಶಿಯವರಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅಲ್ಲದೇ, ನೀವು ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬಹುದು.
ಕೊನೆಯ ರಾಶಿ ಮಕರ ರಾಶಿಯಾಗಿದೆ. ಈ ಸಮಯದಲ್ಲಿ ಈ ರಾಶಿಯವರು ಅನಿರೀಕ್ಷಿತ ಹಾಗೂ ಊಹಿಸದೇ ಇರುವ ಲಾಭ ಕಾಣುತ್ತಾರೆ. ಉದ್ಯೋಗದಲ್ಲಿರುವವರಿಗೂ ಬಡ್ತಿ ಸಿಗಬಹುದು. ಇವರು ವಾಹನ ಖರೀದಿಸುವ ಕನಸು ಕಾಣುತ್ತಿದ್ದರೆ. ಅದು ಈ ಸಮಯದಲ್ಲಿ ಈಡೇರಲಿದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಸಹ ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೇ, ಉಳಿದ ರಾಶಿಯವರು ಹೆಚ್ಚಾಗಿ ದೇವರ ಮೊರೆ ಹೋಗಿ, ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು.