ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ (Sudeep) ಬಿಜೆಪಿಗೆ(BJP)ಗೆ ಬೆಂಬಲಿಸುತ್ತಿದ್ದಂತೆ ಅವರ ಮೇಲೆ ನಟ ಪ್ರಕಾಶ ರೈ(Prakash Rai) ಮುಗಿ ಬಿದ್ದಂತೆ ಮಾಡುತ್ತಿದ್ದಾರೆ. ಇತ್ತ ಕಿಚ್ಚ ರಾಜಕೀಯ (Politics) ಅಂಗಳದಲ್ಲಿ ಕಾಲಿಡುತ್ತಿದ್ದಂತೆಯೇ ಟ್ವೀಟ್ ಗಳ ಸರಣಿಯನ್ನೇ ಪ್ರಕಾರ್ ನಡೆಸಿದ್ದಾರೆ.
ಪ್ರತಿಭಾವಂತ ನಟ ಸುದೀಪ್, ಬಿಜೆಪಿ ಬೆಂಬಲಿಸುವುದಿಲ್ಲ ಎನ್ನುವ ಸಂದೇಶದಿಂದ ಹಿಡಿದು ಇಲ್ಲಿಯವರೆಗೂ ಸಾಕಷ್ಟು ಟ್ವೀಟ್ ಮಾಡಿದ್ದಾರೆ. ಆದರೆ, ಪ್ರಕಾಶ್ ರಾಜ್ ವಿಚಾರವಾಗಿ ಸುದೀಪ್ ಮೌನವಹಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಪ್ರಕಾಶ ರೈ ಮಾತ್ರ ತಮ್ಮ ಮಾತಿನ ದಾಟಿ ಮುಂದುವರೆಸಿದ್ದಾರೆ.
ಪ್ರಕಾಶ್ ರೈ ನಿನ್ನೆ ಮತ್ತೊಂದು ಟ್ವೀಟ್ ಮಾಡಿ, ‘ನೋಡ್ರಪ್ಪ, ನಿಮ್ ಮಾಮನೋ.. ನಿಮ್ ಅತ್ತೇನೊ.. ನಿಮ್ ಕಷ್ಟ ಕಾದಲ್ಲಿ ಸಹಾಯ ಮಾಡಿದ್ದರೆ, ನೀವು ದುಡಿದಿದ್ರಲ್ಲಿ 10%.. 20%.. ಇಲ್ಲ 30% ಕೊಡಿ. ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಲ್ಲೆ ಹೊಡೆಯೋಕೆ ಬಿಡ್ಬೇಡಿ.. ಅಷ್ಟೇ.. ಅಷ್ಟೇ..’ ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು, ‘ಸುದೀಪ್ ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಳ್ಳ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ಇನ್ನು ಮುಂದೆ ನಿಮ್ಮನ್ನೂ ನಿಮ್ಮ ಪಕ್ಷವನ್ನೂ ಪ್ರಶ್ನಿಸುವ ಜನ ದನಿಗೆ ತಯಾರಾಗಿ’ ಎಂದು ಬರೆದುಕೊಂಡಿದ್ದರು.
ಆದರೆ, ನಟ ಸುದೀಪ್ ಮಾತ್ರ ಇದುವರೆಗೂ ಪ್ರಕಾಶ್ ರೈ ಪರ ಮಾತನಾಡಿಲ್ಲ. ಆದರೆ, ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಪ್ರಕಾಶ್ ರೈ ಉತ್ತಮ ಕಲಾವಿದ. ಅವರೊಂದಿಗೆ ಒಂದು ಸಿನಮಾ ಮಾಡಿದ್ದೇನೆ. ಮುಂದೆಯೂ ಸಿನಿಮಾ ಮಾಡಲು ಕಾತುರನಾಗಿದ್ದೇನೆ ಎಂದು ಹೇಳಿದ್ದರು. ಆದರೆ, ಸುದ್ದಿಗೋಷ್ಠಿಯ ನಂತರವೂ ಪ್ರಕಾಶ ರೈ ಟ್ವೀಟ್ ಮುಂದುವರೆಸಿದ್ದು, ಸುದೀಪ್ ಮತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.