ದೇಶಕ್ಕೆ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಕೊರನಾಗೆ ಇನ್ನು 15 ರಿಂದ 20 ದಿನಗಳು ನಿರ್ಣಾಯಕವಾಗಿದ್ದು, ಈ ಸಂದರ್ಭದಲ್ಲಿ ಕೊರೊನಾ ತುತ್ತ ತುದಿಗೆ ಹೋಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲಿಯೇ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಉಲ್ಭಣವಾಗಬಹುದು. ದೇಶದಲ್ಲಿ ಸದ್ಯ ದಿನಕ್ಕೆ 5 ರಿಂದ 6 ಸಾವಿರದಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಈ ಕೊರೊನಾ ಸೋಂಕು ಸೌಮ್ಯ ಗುಣಗಳನ್ನು ಹೊಂದಿದ್ದು, ಕೆಮ್ಮು, ಶೀತಕ್ಕೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿ ಲಸಿಕಾರಣ ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ. ಕರೊನಾ ರೂಲ್ಸ್ ಫಾಲೋ ಮಾಡುವಂತೆ ತಾಕೀತು ಮಾಡಲಾಗಿದೆ. ಜಿನೋಮ್ ಸಿಕ್ವೆಂಸಿಂಗ್ ಟೆಸ್ಟ್ ಹೆಚ್ಚಿಸಬೇಕು. ಏಪ್ರಿಲ್ 10, 11ರಂದು ಆಸ್ಪತ್ರೆಗಳ ಸನ್ನದ್ಧತೆ ಪರೀಶೀಲನೆಗೆ ಅಣಕು ಕಾರ್ಯಾಚರಣೆ ಮಾಡಬೇಕು. ಉಸಿರಾಟದ ತೊಂದರೆ ಇರುವವರ ಮೇಲೆ ತೀವ್ರ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಗೆ ಕಿವಿಮಾತು ಹೇಳಿದ್ದು, ದಿನದಿಂದ ದಿನಕ್ಕೆ ರಾಷ್ಟ್ರ ಮಟ್ಟದಲ್ಲಿ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಚುನಾವಣೆಯ ಹೆಸರಿನಲ್ಲಿ ಜನರು ಸೇರದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಚುನಾವಣೆಗೆ ವಿಶೇಷ ಗೈಡ್ ಲೈನ್ಸ್ ಜಾರಿ ಮಾಡಬೇಕ ಎಂದು ಹೇಳಿದೆ. ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಹೀಗೆ ಏರಿದರೆ, ಚುನಾವಣೆಗೆ ಹೊಸ ಗೈಡ್ ಲೈನ್ಸ್ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.