ಭೋಪಾಲ್ : ಪೊಲೀಸ್ ಠಾಣೆಗೆ(Police Station) ನುಗ್ಗಿದ್ದ ದುಷ್ಕರ್ಮಿಗಳು ಠಾಣೆಯಲ್ಲಿದ್ದ ಮೂವರನ್ನು ಬಿಡುಗಡೆ ಮಾಡಿ, ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಈ ಘಟನೆ ಮಧ್ಯಪ್ರದೇಶದ (Madhya Pradesh) ನೇಪಾನಗರ (Nepanagar)ದಲ್ಲಿ ನಡೆದಿದೆ. ಆ ಗುಂಪು ಪೊಲೀಸ್ ಠಾಣೆಗೆ (Police Station) ನುಗ್ಗಿ ಡಕಾಯಿತ (Dacoit) ಮಾಡಿದ್ದಲ್ಲದೇ, ಮೂವರನ್ನು ಬಿಡುಗಡೆ (Release) ಮಾಡಿದೆ. ಅಲ್ಲದೇ, ಪೊಲೀಸರ ಮೇಲೆ ಹಲ್ಲೆ ನಡೆಸಿದೆ.
ಶುಕ್ರವಾರ ಮಧ್ಯಾರಾತ್ರಿ ಅಂದರೆ ಬೆಳಗಿನ 3 ಗಂಟೆಯ ಸುಮಾರಿಗೆ ಹೇಮಾ ಮೇಘವಾಲ್ ಎಂಬ ಡಕಾಯಿತ ಮತ್ತು ಆತನ ಸಹಚರರಾದ ಮಗನ್ ಪಟೇಲ್, ಇನ್ನೋರ್ವ ಯುವಕನನ್ನು ಈ ತಂಡವು ಲಾಕಪ್ ನಿಂದ (Lock Up) ಬಿಡುಗಡೆಗೊಳಿಸಿದೆ. ಪೊಲೀಸರು ಮೇಘವಾಲ್ ಎಂಬಾತನನ್ನು ಕಳೆದ ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು ಎಂದು ಬುರ್ಹಾನ್‌ಪುರ (Burhanpur) ಪೊಲೀಸ್ ವರಿಷ್ಠಾಧಿಕಾರಿ (SP) ರಾಹುಲ್ ಕುಮಾರ್ ಲೋಧಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಭವ್ಯಾ ಮಿತ್ತಲ್ ಹಾಗೂ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದಾಳಿಕೋರರನ್ನು ಗುರುತಿಸಲು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರೀಕ್ಷಿಸುವಂತೆ ಪೊಲೀಸರಿಗೆ ತಿಳಿಸಿದರು. ಘಟನೆಯಲ್ಲಿ ಸುಮಾರು ನಾಲ್ವರು ಪೊಲೀಸರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.