ಮನೆಯಲ್ಲಿ ನೆಮ್ಮದಿ ಇಲ್ಲ. ಬಂದ ಹಣ ಕೈ ಯಲ್ಲಿ ನಿಲ್ಲುತ್ತಿಲ್ಲ. ಆರೋಗ್ಯ ಸಮಸ್ಯೆ, ಒಂದಾದರ ಮೇಲೆ ಒಂದು ಸಮಸ್ಯೆಗಳು ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದೆಲ್ಲ ನಕಾರಾತ್ಮಕ ಶಕ್ತಿಯ ಪ್ರಭಾವ. ಈ ನೆಗೆಟಿವ್ ಎನರ್ಜಿಯಿಂದ ದೂರ ಇರಬೇಕು ಎಂದರೇ ದಯವಿಟ್ಟು ಈ ಕೆಲಸ ಮಾಡಲೇಬೇಡಿ.

ಅನೇಕ ಮನೆಯಲ್ಲಿ ಮಹಿಳೆಯರು ರಾತ್ರಿಯೇ ಹಿಟ್ಟನ್ನ ಕಲಿಸಿ ಇಡುವ ಅಭ್ಯಾಸವಿರುತ್ತೆ. ಮಾರನೇ ದಿನ ಕೆಲಸ ಕಡಿಮೆಯಾಗಲಿ, ಕೆಲ್ಸಕ್ಕೆ ಹೋಗುವವರಿಗೆ ಸುಲಭವಾಗಲಿ. ಇನ್ನು ಕೆಲವರು ಚಪಾತಿ ಮೃದುವಾಗಿ ಬರಲಿ ಎಂದು ಈ ಕೆಲಸ ಮಾಡುತ್ತಾರೆ. ಆದರೆ ಈ ಕೆಲಸ ಮಾಡುವುದರ ಮೂಲಕ ನಕಾರಾತ್ಮಕ ಶಕ್ತಿಗೆ ವೆಲ್ ಕಮ್ ಮಾಡಿದಂತೆ ಆಗುತ್ತದೆ. ಬಿ ಕೇರ್ ಫುಲ್.

ವೈಜ್ಞಾನಿಕ ಕಾರಣ: ಒಂದು ಕಡೆ ನೆಗೆಟಿವ್ ಎನರ್ಜಿ ಅಂತಾದರೆ ಇನ್ನೊಂದು ಕಡೆ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ರಾತ್ರಿಯೇ ಹಿಟ್ಟನ್ನ್ ಕಲಸಿ ಫ್ರಿಡ್ಜ್ ನಲ್ಲಿ ಇಟ್ಟರೆ ಮಾರನೇ ದಿನ ಅದರ ಪೌಷ್ತಿಕಾಂಶ ಕಳೆದುಹೋಗಿರುತ್ತೆ. ಹಿಟ್ಟಿನಲ್ಲಿ ಬ್ಯಾಕ್ಟಿರಿಯಾ ಬೆಳೆಯಲು ಶುರುಮಾಡಿರುತ್ತವೆ. ಇದು ಕಾಯಿಲೆಗೆ ಕಾರಣವಾಗುತ್ತೆ.