Kornersite

Just In Sports

(IPL 2023)ಜೋಸ್ ಬಟ್ಲರ್, ಜೈಸ್ವಾಲ್ ಆರ್ಭಟಕ್ಕೆ ಶರಣಾದ ಡೆಲ್ಲಿ!

(IPL 2023)Delhi surrendered to Jos Buttler, Jaiswal riot!


ಗುವಾಹಟಿ : ಜೋಸ್‌ ಬಟ್ಲರ್‌ (Jos Buttler), ಯಶಸ್ವಿ ಜೈಸ್ವಾಲ್‌ (Yashasvi Jaiswal) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬಿಗಿ ಬೌಲಿಂಗ್‌ ನ ದಾಳಿಯಿಂದಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡವು 57 ರನ್ ಗಳ ಭರ್ಜರಿ ಜಯ ಗಳಿಸಿದೆ.

ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಉತ್ತಮ ಪ್ರದರ್ಶನ ತೋರಿತು. ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಿಂದಲೂ ಯಾವುದೇ ಗೆಲ್ಲುವ ಆತ್ಮವಿಶ್ವಾಸ ಮೂಡಿಸಲಿಲ್ಲ. ಡೇವಿಡ್‌ ವಾರ್ನರ್‌ (DavidWarner) ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು.


ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ನಾಯ ಡೇವಿಡ್‌ ವಾರ್ನರ್‌ ಒಬ್ಬರೇ ಏಕಾಂಗಿ ಹೋರಾಟ ನಡೆಸಿದರು. ರಾಜಸ್ಥಾನ್‌ ಬೌಲರ್‌ಗಳ ಸಂಘಟಿತ ದಾಳಿಗೆ ಬೆಚ್ಚಿದ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ ಪ್ಲೇನಲ್ಲಿಯೇ ಕೇವಲ 38 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ವಾರ್ನರ್‌ 19ನೇ ಓವರ್‌ವರೆಗೂ ಹೋರಾಡಿ 65 ರನ್‌ (55 ಎಸೆತ, 7 ಬೌಂಡರಿ) ಗಳಿಸಿದರು. ಇದರೊಂದಿಗೆ ಲಲಿತ್‌ ಯಾದವ್‌ 38 ರನ್‌ (24 ಎಸೆತ, 5 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು. ಉಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಅಂತಿಮವಾಗಿ 20 ಓವರ್‌ಗಳಲಿ 9 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌, ಯಜುವೇಂದ್ರ ಚಾಹಲ್‌ ತಲಾ 3 ವಿಕೆಟ್‌ ಪಡೆದರೆ, ರವಿಚಂದ್ರನ್‌ ಅಶ್ವಿನ್‌ 2 ವಿಕೆಟ್‌ ಹಾಗೂ ಸಂದೀಪ್‌ ಶರ್ಮಾ 1 ವಿಕೆಟ್‌ ಕಿತ್ತರು.

ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ಪರ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದ್ದರು. ಮೊದಲ ಓವರ್‌ನಲ್ಲಿಯೇ ಬರೋಬ್ಬರಿ 5 ಬೌಂಡರಿಗಳೊಂದಿಗೆ 20 ರನ್‌ ಚಚ್ಚಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಮೊದಲ ಓವರ್ ನಲ್ಲೇ ಅತಿ ಹೆಚ್ಚು ರನ್ ಸಿಕ್ಕಿತು. ಈ ಭರ್ಜರಿ ಬ್ಯಾಟಿಂಗ್ ನೊಂದಿಗೆ ರಾಜಸ್ಥಾನ್ ರಾಯಲ್ಸ್ ನ ರನ್ ವೇಗ ಕೂಡ ಹೆಚ್ಚುತ್ತಾ ಸಾಗಿತು. ಬಡ್ಲರ್‌ ಸಹ ಭರ್ಜರಿ ಸಿಕ್ಸರ್‌, ಬೌಂಡರಿ ಬಾರಿಸಿದರು. ಪರಿಣಾಮ ಮೊದಲ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 8.3 ಓವರ್‌ಗಳಲ್ಲಿ ಬರೋಬ್ಬರಿ 98 ರನ್‌ ಕಲೆಹಾಕಿ, ದೊಡ್ಡ ಮೊತ್ತ ಗಳಿಸಲು ನೆರವಾಯಿತು.


ಜೈಸ್ವಾಲ್‌ 60 ರನ್‌ (31 ಎಸೆತ, 11 ಬೌಂಡರಿ, 1 ಸಿಕ್ಸರ್‌) ಬಾರಿಸಿ ಫೆವಲಿಯನ್ ಹಾದಿ ಹಿಡಿದರು. ಆದರೆ, ಸಂಜು ಸ್ಯಾಮ್ಸನ್‌ ಸಹ ಶೂನ್ಯ ಸುತ್ತಿ ನಿರ್ಗಮಿಸಿದರೆ, ರಿಯಾನ್‌ ಪರಾಗ್‌ ಕೇವಲ 7 ರನ್‌ ಗಳಿಸಿ ಹೊರನಡೆದರು. ಆದರೂ ಬಟ್ಲರ್‌ ಬ್ಯಾಟಿಂಗ್‌ ಅಬ್ಬರ ನಿಲ್ಲಲಿಲ್ಲ. ಬಳಿಕ 5ನೇ ವಿಕೆಟ್‌ಗೆ ಜೊತೆಯಾದ ಬಡ್ಲರ್‌ ಹಾಗೂ ಹೇಟ್ಮೇಯರ್‌ 29 ಎಸೆತಗಳಲ್ಲಿ 49 ರನ್‌ ಕಲೆಹಾಕಿ ತಂಡಕ್ಕೆ ಚೇತರಿಕೆ ನೀಡಿತು. 51 ಎಸೆತಗಳಲ್ಲಿ 79 ರನ್‌ (11 ಬೌಂಡರಿ, 1 ಸಿಕ್ಸರ್)‌ ಚಚ್ಚಿ ಬಟ್ಲರ್‌ ಔಟಾದರು. ಕೊನೆಯಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ ಹೆಟ್ಮೇಯರ್‌ 21 ಎಸೆತಗಳಲ್ಲಿ ಸ್ಫೋಟಕ 39 ರನ್‌ (1 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಧ್ರುವ್ ಜುರೆಲ್ 3 ಎಸೆತಗಳಲ್ಲಿ 1 ಸಿಕ್ಸರ್‌ನೊಂದಿಗೆ 8 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ರಾಜಸ್ಥಾನ್‌ 20 ಓವರ್‌ಗಳಲ್ಲಿ 199 ರನ್‌ ಕಲೆಹಾಕಿತು.

ಡೆಲ್ಲಿ ಪರ ಮುಕೇಶ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಕುಲ್‌ದೀಪ್‌ ಯಾದವ್‌, ರೋವ್ಮನ್‌ ಪೋವೆಲ್‌ ತಲಾ ಒಂದು ವಿಕೆಟ್ ಕಿತ್ತರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್