ತೀವ್ರ ಜ್ವರ ಹಾಗೂ ಬಾಡಿ ವೀಕ್ ನೆಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ನಟಿ ಖುಷ್ಬೂ (Khushboo) ಅನಾರೋಗ್ಯದಿಂದ ಬಳಲುತ್ತಿದ್ದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ನಿನ್ನೆಯೇ ಹೈದರಾದಾಬ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಈ ಆತಂಕದ ಹಿನ್ನೆಲೆಯಲ್ಲಿ ಆಸ್ಪತ್ರೆಯ (Hospital) ಮುಂದೆ ಅಭಿಮಾನಿಗಳು ಜಮಾಯಿಸಿ, ನಟಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಅಭಿಮಾನಿಗಳ ಆತಂಕ ಗಮನಿಸಿದ ಖುಷ್ಬೂ ಅವರು ತಮ್ಮ ಆರೋಗ್ಯದ ಕುರಿತು ಅಪ್ಡೇಟ್ ನೀಡಿದ್ದಾರೆ.

ನಾನು ವಿಪರೀತ ಜ್ವರದಿಂದ ಬಳಲಿದ್ದರಿಂದಾಗಿ ಆಸ್ಪತ್ರೆಗೆ ತೆರಳಿದ್ದೆ. ಅಸಾಧರಣ ನೋವಿತ್ತು. ನನ್ನಿಂದ ತಡೆದುಕೊಳ್ಳಲು ಆಗದೇ ಆಸ್ಪತ್ರೆಗೆ ದಾಖಲಾದೆ. ಈಗ ಜ್ವರ ಕಡಿಮೆ ಆಗಿದೆ. ಆರೋಗ್ಯ ಸುಧಾರಿಸುತ್ತಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಖುಷ್ಬೂ ಹೇಳಿದ್ದಾರೆ.

ಇತ್ತೀಚೆಗೆ ನಟಿ ಖುಷ್ಬೂ ಅವರು ಜ್ವರ ಹಾಗೂ ಬಾಡಿ ವೀಕ್ ನೆಸ್ ನಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನನ್ನು ಕೊಲ್ಲುತ್ತಿದೆ. ಆದರೆ ನಾನು ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ಬರೆದುಕೊಂಡಿದ್ದರು.

ನಟಿ ಖುಷ್ಬೂ ದಕ್ಷಿಣ ಭಾರತದ ಖ್ಯಾತ ನಟಿ. ಅವರು ಕನ್ನಡದಲ್ಲಿಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ರಣಧೀರ, ಶಾಂತಿ ಕ್ರಾಂತಿ, ಹೃದಯಗೀತೆ, ಪಾಳೇಗಾರ ಸೇರಿದಂತೆ ಪರಭಾಷೆಗಳಲ್ಲೂ ನಟಿ ಖುಷ್ಬೂ ಸುಂದರ್ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೇ, ಅವರು ರಾಜಕೀಯವಾಗಿ ಕೂಡ ಬೆಳೆದಿದ್ದಾರೆ.

