Kornersite

Bengaluru Just In Karnataka State

(Nandini-Amul) ಅಮುಲ್ ಭಾರತದ ಬ್ರಾಂಡ್, ಇಲ್ಲಿ ಮಾರಾಟ ಮಾಡಿದರೆ ಏನು ತೊಂದರೆ- ಸಿ.ಟಿ. ರವಿ ಪ್ರಶ್ನೆಗೆ ಕಾಂಗ್ರೆಸ್ ಕಿಡಿ

ಬೆಂಗಳೂರು : ಅಮುಲ್ ಭಾರತದ ಬ್ರ್ಯಾಂಡ್. ಭಾರತದಲ್ಲಿಯೇ ಮಾರಾಟ ಮಾಡಿದರೆ, ಇವರಿಗೇನು ತೊಂದರೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ (Congress) ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.


ಅಮುಲ್ ಹಾಗೂ ನಂದಿನಿ (Nandini-Amul) ಜಟಾಪಟಿ ವಿಚಾರದಲ್ಲಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ, ಗುಲಾಮಗಿರಿಗೆ ಯಾವುದೇ ಆಕ್ಷೇಪ ಇಲ್ಲ. ಅಮುಲ್ ಭಾರತದ ಬ್ರ್ಯಾಂಡ್, ಇಲ್ಲೇ ಮಾರಾಟ ಮಾಡಿದರೆ, ಇವರಿಗೇನು ತೊಂದರೆ. ಇದೆಲ್ಲ ಸೋತವರ ಗುಂಪಿನ ಅಸಮಾಧಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಟ್ವೀಟ್ ಮೂಲಕ ಕೂಡ ಆರೋಪ ಮಾಡಿರುವ ಸಿ.ಟಿ. ರವಿ, ಕಾಂಗ್ರೆಸ್ ಪಕ್ಷವು ನಮ್ಮ ತಾಯಂದಿರು ಹಾಗೂ ಅಕ್ಕಂದಿರನ್ನು ಕೇವಲ ಸಗಣಿ ಬಾಚಲು ಬಿಟ್ಟಿತ್ತು. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟು ಗ್ರಾಮೀಣ ಕುಟುಂಬಗಳ ಬದುಕನ್ನು ಸಮೃದ್ಧಿಗೊಳಿಸಿದೆ. ನಂದಿನಿ ಈಗಾಗಲೇ 12 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದ್ದು, ಇನ್ನೂ ಹೆಚ್ಚು ರಾಜ್ಯಗಳಲ್ಲಿ ಉತ್ಪನ್ನಗಳನ್ನ ಮಾರಾಟ ಮಾಡಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.


ಅಮುಲ್ ಕುಟುಂಬವು ಬೆಂಗಳೂರು (Bengaluru) ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡ ಏಪ್ರಿಲ್ 5 ರಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಕನ್ನಡಿಗರು, ರಾಜಕೀಯ ನಾಯಕರು ಅಮುಲ್ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.


ನಂದಿನಿ ಕೇವಲ ರಾಜ್ಯದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ. ಇನ್ನುಳಿದ ರಾಜ್ಯಗಳಲ್ಲಿಯೂ ಹಾಲು ಮಾರಾಟ ಮಾಡುತ್ತಿದೆ. ಹೀಗಿರುವಾಗ ಅಮುಲ್ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಅಧಿಕಾರವಿದೆ. ಯಾವುದು ಬೇಕೋ ಅದನ್ನು ಗ್ರಾಹಕ ಖರೀದಿಸುತ್ತಾನೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ