ಕೆಎಂಎಫ್ ಮತ್ತು ಅಮೂಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಕಾರ ಸಚಿವರಾದ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮ ಶಾಕ್ ನಲ್ಲಿದೆ. ಅಲ್ಲದೇ ಈ ಪ್ರಸ್ತಾಪಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ನಂದಿನಿ ಹಾಲಿನ ಪರ ಬ್ಯಾಟ್ ಬೀಸಿದ್ದಾರೆ.

ಕೆಎಂಎಫ್ ನಮ್ಮ ಹೆಮ್ಮೆ.. ನಾವು ಅದರ ಜೊತೆ ನಿಲ್ಲೋಣ ಎಂದು ಸದ್ಯ ನಂದಿನಿ ಹಾಲಿನ ಪರ ನಟಿ ಸಂಜನಾ ಗಲ್ರಾನಿ ಹೇಳಿಕೆ ನೀಡಿದ್ದಾರೆ.
ನಂದಿನಿ ಹಾಲಿನ ಜೊತೆ ಸಿಕ್ಕಾಪಟ್ಟೆ ನೆನಪುಗಳಿವೆ. ತಿಳುವಳಿಕೆ ಬಂದಾಗಿನಿಂದ ನಂದಿನಿ ಹಾಲನ್ನ ಬಳಸುತ್ತಿದ್ದೇವೆ. ಅಲ್ಲದೇ ತಾಯಿ ಹಾಲಿನ ನಂತರ ನಾನು ಕುಡಿದಿದ್ದೇ ನಂದಿನಿ ಹಾಲು.

ನಮ್ಮ ರೈತರ ಕಷ್ಟದ ಫಲವೇ ನಮ್ಮ ನಂದಿನಿ ಹಾಲು. ನಂದಿನಿ ಹಾಲು ನಮ್ಮ ತಾಯಿಯಿದ್ದಂತೆ ಎಂದು ಹೇಳಿದ್ದಾರೆ.

ಯಾರೋ ಬಂದ ಮಾತ್ರಕ್ಕೆ ನಾವು ನಮ್ಮ ತಾಯಿಯನ್ನ ಬಿಡಲು ಆಗಲ್ಲ. ಇಂತ ಟೈಂನಲ್ಲಿ ಕನ್ನಡಿಗರು ಒಗ್ಗಟ್ಟಾಗಿರಬೇಕು. ಒಗ್ಗಟ್ಟಾಗಿ ನಂದಿನಿ ಹಾಲಿನ ಪರ ನಿಲ್ಲಬೇಕು ಎಂದು ಹೇಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.