Kornersite

International Just In National

Corona: ಅಬ್ಬಾ! ಬರೋಬ್ಬರಿ 2 ವರ್ಷಗಳ ನಂತರ ಕೊರೊನಾದಿಂದ ಮುಕ್ತಿ! ವಾಸನೆ ಗ್ರಹಿಸಿ ಕಣ್ಣೀರಾದ ಮಹಿಳೆ!

Washington : ಕೊರೊನಾ ಇಡೀ ಜಗತ್ತನ್ನೇ ಒಂದು ಸಮಯದಲ್ಲಿ ಬೆಚ್ಚಿ ಬೀಳಿಸಿತ್ತು. ಹಲವರು ಕೊರೊನಾ ಸಮಯದಲ್ಲಿ ಇಹಲೋಕ ತ್ಯಜಿಸಿದರೆ, ಹಲವಾರು ಕುಟುಂಬಗಳು ಬೀದಿಗೆ ಬಂದಿದ್ದವು. ಹಲವರಿಗೆ ಈ ಕೊರೊನಾದಿಂದ ಹೆಚ್ಚಿನ ತೊಂದರೆಯಾಗದಿದ್ದರೆ, ಹಲವರು ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡಿದ್ದಾರೆ.


ಅಮೆರಿಕ (America) ಮೂಲದ ಜೆನ್ನಿಫರ್ ಎಂಬ ಮಹಿಳೆ (Woman) ಎರಡು ವರ್ಷಗಳಿಂದ ದೀರ್ಘ ಕಾಲದ ಕೊರೊನಾದಿಂದ (Covid) ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡು, ಇದೀಗ ಮರಳಿ ಪಡೆದಿದ್ದಾರೆ.


ಕ್ಲೆವೆಲ್ಯಾಂಡ್ ಕ್ಲಿನಿಕ್‌ ನ (Cleveland Clinic) ಇನ್ ಸ್ಟಾಗ್ರಾಂನಲ್ಲಿ (Instagram) ಮಹಿಳೆ ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಒಂದು ಕಾಫಿ (Coffee) ಕಪ್ ಎತ್ತಿಕೊಂಡು ವಾಸನೆ ಗ್ರಹಿಸಿದ್ದಾಳೆ. ನಂತರ ನನಗೆ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ ಎಂದು ಗದ್ಗದಿತಳಾಗಿ ನುಡಿದಿದ್ದಾಳೆ.


ಬರೋಬ್ಬರಿ ಎರಡು ವರ್ಷಗಳಿಂದ ನನಗೆ ನನಗೆ ರುಚಿ ಗೊತ್ತಾಗುತ್ತಿರಲಿಲ್ಲ. ವಾಸನೆಯ ಅರಿವಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಸಾಮಾನ್ಯ ಚಿಕಿತ್ಸೆಗಾಗಿ ಬಳಸುವ ಸ್ಟೇಲೆಟ್ ಗ್ಯಾಂಗ್ಲಿಯಾನ್ ಬ್ಲಾಕ್ (Stellate ganglion block) ಇಂಜೆಕ್ಷನ್ ನೀಡಿದ ಮೇಲೆ ಮಹಿಳೆ ಮೊದಲ ಬಾರಿಗೆ ವಾಸನೆ ಹಾಗೂ ರುಚಿ ಗ್ರಹಿಸಿದ್ದಾರೆ ಎನ್ನಲಾಗಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು