Kerala: ಕೇವಲ 15 ನಿಮಿಷ ತಡವಾಗಿ ಎಬ್ಬಿಸಿದ್ದಕ್ಕೆ ಪಾಪಿ ಮಗನೊಬ್ಬ(Son) ತಂದೆಯನ್ನೇ(Father) ಕೊಲೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕುಡಿದ ಮತ್ತಿನಲ್ಲಿದ್ದ ಪಾಪಿ ಮಗನೊಬ್ಬ ತನ್ನ ತಂದೆಯನ್ನೇ ಹಲ್ಲೆಗೈದಿರುವ ಘಟನೆ ಕೇರಳದ ಚೆರ್ಪುವಿನ ಕೊಡನ್ನೂರಿನಲ್ಲಿ ನಡೆದಿದೆ.
ಜಾಯ್ (60) ಸಾವನ್ನಪ್ಪಿದ ದುರ್ದೈವ ತಂದೆ. ರಿಜೋ (25) ಕೊಲೆ ಮಾಡಿದ ಮಗ. ವೇಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಿಜೋ ಶುಕ್ರವಾರ ಕುಡಿದು ಮನೆಗೆ ಬಂದಿದ್ದಾನೆ. 5 ಗಂಟೆ ಹೊತ್ತಿಗೆ ಮನೆಗೆ ಬಂದಾಗ ತಂದೆ- ತಾಯಿಯ ಬಳಿ ನನ್ನನ್ನು 8.15ಕ್ಕೆ ಎಬ್ಬಿಸಿ ಎಂದು ಹೇಳಿ ಮಲಗಿದ್ದಾನೆ.
ತಂದೆ- ತಾಯಿ ಮಗನನ್ನು ರಾತ್ರಿ 8.30ಕ್ಕೆ ಎಬ್ಬಿಸಿದ್ದಾರೆ. ಈ ವೇಳೆ ಗಂಟೆ 8.30 ಆಗಿದ್ದು ರಿಜೋನಿಗೆ ತಿಳಿದಿದೆ. ಈ ಕಾರಣಕ್ಕಾಗಿ ಏಕೆ ತಡವಾಗಿ ಎಚ್ಚರಿಸಿದ್ದಿರೆಂದು ಜೋರು ಮಾಡಿದ್ದಾನೆ. ಇದಕ್ಕೆ ತಂದೆ ಸುಮ್ಮನಿರು ಎಂದು ಬುದ್ಧಿ ಹೇಳಿದ್ದಾರೆ. ಅಪ್ಪನ ಮಾತಿಗೆ ಸಿಟ್ಟಾದ ಮಗ, ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಜಾಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.