Kornersite

Just In Sports

IPL 2023: ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂದಿನ ಪಂದ್ಯ!

ಐಪಿಎಲ್ (IPL) ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಲಕ್ನೋ ಸೂಪರ್ ಜೈಂಟ್ಸ್(lucknow super giants) ತಂಡಗಳು(Teams) ಮುಖಾಮುಖಿಯಾಗಲಿವೆ. ಒಂದು ಪಂದ್ಯ ಗೆದ್ದು ಒಂದರಲ್ಲಿ ಸೋಲು ಕಂಡಿರುವ ಆರ್ ಸಿಬಿಗೆ ಎರಡರಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಸೋಲು ಕಂಡಿರುವ ಲಕ್ನೋ ಮಧ್ಯೆ ಇಂದು ಬಿಗ್ ಫೈಟ್ ನ ನಿರೀಕ್ಷೆ ಇದೆ. ಆದರೆ, ಇಂದಿನ ದಿನದ ಪಂದ್ಯ ಹಲವು ದಾಖಲೆಗಳಿಗೂ ಸಾಕ್ಷಿಯಾಗುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಇಂದಿನ ಪಂದ್ಯ ಹೆಚ್ಚು ನಿರೀಕ್ಷೆಯನ್ನು ಮೂಡಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್(KL Rahul) ಸದ್ಯ ಐಪಿಎಲ್ನಲ್ಲಿ 3952 ರನ್ ಬಾರಿಸಿದ್ದು, ಇಂದು ಸೋಮವಾರ ಆರ್‌ಸಿಬಿ ವಿರುದ್ಧ 48 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ 4000 ರನ್‌ಗಳ ಮೈಲಿಗಲ್ಲನ್ನು ಸಾಧಿಸುವ ಅವಕಾಶ ಹೊಂದಿದ್ದಾರೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಂದ ಕೆಲವು ದಾಖಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

ಆರ್ ಸಿಬಿ ನಾಯಕ ಫಾಫ್ ಡು’ಪ್ಲೆಸಿಸ್ ಟಿ20 ಕ್ರಿಕೆಟ್‌ನಲ್ಲಿ ಸದ್ಯ 296 ಸಿಕ್ಸರ್ ಬಾರಿಸಿದ್ದು, ಇಂದಿನ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸಿದರೆ 300 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ದಾಖಲೆ ಬರೆಯಲಿದ್ದಾರೆ. ಈ ಪಂದ್ಯದಲ್ಲಿ 1 ರನ್ ಬಾರಿಸಿದರೆ ಐಪಿಎಲ್‌ನಲ್ಲಿ 3,500 ರನ್‌ಗಳ ಮೈಲುಗಲ್ಲನ್ನು ತಲುಪಲಿದ್ದಾರೆ.

ಮಾರ್ಕಸ್ ಸ್ಟೋಯ್ನಿಸ್ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್‌ಗಳನ್ನು ಕಬಳಿಸಿದ್ದು, ಆರ್‌ಸಿಬಿ ವಿರುದ್ಧ 4 ವಿಕೆಟ್ ಪಡೆದರೆ, ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಿದ ದಾಖಲೆ ಬರೆಯಲಿದ್ದಾರೆ.

ಲಕ್ನೋ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ 2 ಬೌಂಡರಿ ಬಾರಿಸಿದರೆ ಐಪಿಎಲ್‌ನಲ್ಲಿ 200 ಬೌಂಡರಿ ಪೂರೈಸಿದ ದಾಖಲೆ ಬರೆಯಲಿದ್ದಾರೆ.
ಅಮಿತ್ ಮಿಶ್ರಾ ಈ ವರ್ಷ ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿಯಲ್ಲಿ ಆಡುತ್ತಿದ್ದಾರೆ. ಆರ್ಸಿಬಿ ವಿರುದ್ಧ 3 ವಿಕೆಟ್ ಪಡೆದರೆ ಲಸಿತ್ ಮಾಲಿಂಗ (179) ಅವರನ್ನು ಹಿಂದಿಕ್ಕುವುದರೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಾಣಲಿದ್ದಾರೆ.


ನಿಕೋಲಸ್ ಪೂರನ್ ಐಪಿಎಲ್ನಲ್ಲಿ 1000 ರನ್ ಪೂರ್ಣಗೊಳಿಸಲು ಕೇವಲ 9 ರನ್‌ಗಳ ಕೊರತೆ ಎದುರಿಸುತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್‌ ಪೂರೈಸಲು ಶಹಬಾಜ್ ಅಹ್ಮದ್ 4 ವಿಕೆಟ್‌ಗಳ ದೂರದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಶಹಬಾಜ್ ಅಹ್ಮದ್ 4 ವಿಕೆಟ್‌ ಪಡೆದರೆ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್