Kornersite

International Just In

Afghanistan: ಹೊಟೇಲ್, ಉದ್ಯಾನವನ ಹೋಗುವುದು ಬ್ಯಾನ್!

Kabool : ಮಹಿಳೆಯರು ಉದ್ಯಾನವನ (Gardens) ಹಾಗೂ ರೆಸ್ಟೊರೆಂಟ್‌ (Restaurant)ಗೆ ಹೋಗುವುದನ್ನು ಅಪ್ಘಾನಿಸ್ತಾನ(Afghanistan) ನಿಷೇಧಿಸಿದೆ.


ಅಲ್ಲಿನ ಮಹಿಳೆಯರು(Women), ಕುಟುಂಬ (Family) ಜೊತೆಗೆ ಹೆರಾತ್ (Herat) ಪ್ರಾಂತ್ಯದಲ್ಲಿ ಹೋಗುವಂತಿಲ್ಲ ಎಂದು ಸರ್ಕಾರ ಹೇಳಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ, ಮಹಿಳೆಯರ ಮೇಲೆ ಹಿಡಿತ ಸಾಧಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಪಾರ್ಕ್, ಜಿಮ್, ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಲಾಗಿತ್ತು. ಸದ್ಯ ಪಾರ್ಕ್ ಹಾಗೂ ಹೊಟೇಲ್ ಗಳಿಗೂ ಅದನ್ನು ವಿಸ್ತರಿಸಿದೆ.

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರದೇಶದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆ ಜಾರಿಗೊಳಿಸಿದೆ.ಈ ನಿಯಮದಂತೆ, ಪುರುಷರು ಫ್ಯಾಮಿಲಿ ರೆಸ್ಟೊರೆಂಟ್‌ಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡುವಂತಿಲ್ಲ. ಅಲ್ಲದೇ, ಮಹಿಳೆಯರೊಂದಿಗೆ ಪುರುಷರು ಉದ್ಯಾನವನಗಳಿಗೆ ಹೋಗುವಂತಿಲ್ಲ.


ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆ ನಿಷೇಧ ಹೆರಾತ್ ಪ್ರದೇಶದಲ್ಲಿ ಮಾತ್ರವೇ ಅನ್ವಯಿಸುತ್ತದೆ. ಇಂತಹ ಆವರಣಗಳು ಪರುಷರಿಗೆ ತೆರೆದಿರುತ್ತದೆ ಎಂದು ವರದಿ ಹೇಳಿದ್ದು, ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪುರುಷರು ಹಾಗೂ ಮಹಿಳೆಯರು ವಿವಿಧ ದಿನಗಳಲ್ಲಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿತ್ತು. ಇದರ ಪ್ರಕಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಉದ್ಯಾನವನಗಳಲ್ಲಿ ಮಹಿಳೆಯರಿಗೆ ಹೋಗಲು ಅವಕಾಶವಿದೆ. ಭಾನುವಾರ, ಸೋಮವಾರ, ಮಂಗಳವಾರ ಹಾಗೂ ಬುಧವಾರ ಪುರುಷರಿಗೆ ಮಾತ್ರವೇ ತೆರೆಯಲಾಗುತ್ತದೆ ಎಂದು ತಿಳಿಸಲಾಗಿತ್ತು.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ