Mumbai: ಬರೋಬ್ಬರಿ 17 ವರ್ಷಗಳ ಹಿಂದೆ ಬಾಲಿವುಡ (Bollywood) ಗಾಯಕ ಮಿಕಾ ಸಿಂಗ್ (Mika Singh) ನಟಿ ರಾಖಿ ಸಾವಂತ್ (Rakhi Sawant)ಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬಲವಂತವಾಗಿ ಲಿಪ್ ಕಿಸ್ ಮಾಡಿದ್ದರು. ಇದು ದೊಡ್ಡ ಸುದ್ದಿಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ರಾಖಿ ಸಾವಂತ್ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಈಗ ಬಾಂಬೆ ಹೈಕೋರ್ಟ್ ಮೊರೆಗೆ ಹೋಗಲಾಗಿದೆ.

ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಈಗ ತಮ್ಮದಲ್ಲದ ತಪ್ಪಿಗೆ ಸುದ್ದಿಯಾಗಿದ್ದಾರೆ. ಲಿಪ್ ಕಿಸ್ (Lip Kiss) ಪ್ರಕರಣ ಬರೋಬ್ಬರಿ 17 ವರ್ಷಗಳ ಹಿಂದೆ ನಡೆದದ್ದು ಎಂದು ಹೇಳಲಾಗುತ್ತಿದೆ.

2006ರಲ್ಲಿ ನಡೆದ ಘಟನೆಯ ಬಗ್ಗೆ ರಾಖಿ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಕೋರ್ಟ್ ನಲ್ಲಿ ಸತತ 17 ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದೆ. ಹೀಗಾಗಿ ಸದ್ಯ ಮಿಕಾ ಸಿಂಗ್ ಆ ಕೇಸ್ ಅನ್ನು ಕ್ಲೋಸ್ ಮಾಡಬೇಕು ಎಂದು ಬಾಂಬೆ ಹೈಕೋರ್ಟಿಗೆ ಮೊರೆ ಹೋಗಿ ಮನವಿ ಮಾಡಿದ್ದಾರೆ.
ಈ ಪ್ರಕರಣದ ನಂತರ ನಾವಿಬ್ಬರೂ ಮನಸ್ತಾಪ ಬಗೆಹರಿಸಿಕೊಂಡಿದ್ದೇವೆ. ರಾಖಿ ಸಾವಂತ್ ಕೂಡ ತಮ್ಮದೇ ಆದ ಉದ್ಯೋಗದಲ್ಲಿ ಈಗ ಬ್ಯೂಸಿಯಾಗಿದ್ದಾರೆ. ಹೀಗಾಗಿ ಎಫ್ ಐಆರ್ ಕ್ಲೋಸ್ ಮಾಡಬೇಕು. ಇದಕ್ಕೆ ರಾಖಿ ಅವರ ಅಭ್ಯಂತರ ಕೂಡ ಇಲ್ಲ. ಹೀಗಾಗಿ ಈ ಪ್ರಕರಣವನ್ನು ಕೈ ಬಿಡಬೇಕು ಎಂದು ಮಿಕಾ ಸಿಂಗ್ ಮನವಿ ಮಾಡಿದ್ದಾರೆ.