Mumbai : ಭಾಯಿಜಾನ್ ಸಲ್ಮಾನ್ಗೆ ರಾಕಿ ಭಾಯ್ ಹೆಸರಿನಿಂದ ಬೆದರಿಕೆ ಕರೆ ಬಂದಿದೆ. ಬಾಲಿವುಡ್ ನಟ (Bollywood) ಸಲ್ಮಾನ್ ಖಾನ್ಗೆ (Salman Khan) ಹಲವು ಬಾರಿ ಈ ರೀತಿಯ ಬೆದರಿಕೆ ಕರೆಗಳು ಬಂದಿವೆ. ಈ ಹಿಂದೆಯೂ ಅನ್ಯ ದೇಶದಿಂದ ಬೆದರಿಕೆ ಕರೆ ಬಂದಿದ್ದು. ಸದ್ಯ ದೇಶದ ಬೆದರಿಕೆಯ ಕರೆ ಬಂದಿದೆ.
ಸದ್ಯ ಸಲ್ಮಾನ್ ಖಾನ್ ಗೆ ಕರೆ ಮಾಡಿರುವ ವ್ಯಕ್ತಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಏ. 30ರಂದು ಝೋಧಪುರ ಸ್ಥಳದಿಂದ ಈ ದುಷ್ಕರ್ಮಿ ಕರೆ ಮಾಡಿದ್ದಾನೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಖಡಕ್ ಆಗಿ ಮಾತನಾಡಿದ್ದಾನೆ. ಝೋಧಪುರದ ಈ ವ್ಯಕ್ತಿ ಗೋ ರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಮುಂಬಯಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಸಲ್ಮಾನ್ ಬೆದರಿಕೆ ಕರೆ ಹೆಚ್ಚಾಗುತ್ತಿದ್ದಂತೆ, ಬಿಳಿ ಬುಲೆಟ್ ಫ್ರೂಪ್ ನಿಸ್ಸಾನ್ ಅನ್ನು ಖಾನ್ ಖರೀದಿಸಿದ್ದಾರೆ. ಅಲ್ಲದೇ, ಅವರಿಗೆ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಅವರು Kisi Ka Bhai Kisi Ka Jaan ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಏ.21ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮೊದಲ ಬಾರಿಗೆ ಪೂಜಾ ಹೆಗ್ಡೆ- ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿದ್ದಾರೆ.