Chikkaballapur : ಪಾಪಿ ಪತಿಯೊಬ್ಬ ಸ್ಕ್ರೂಡ್ರೈವರ್ ನಿಂದ ತನ್ನ ಪತ್ನಿಯ ಕೊಲೆ ಮಾಡಲು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದೆ. ಘಟನೆಯಲ್ಲಿ ನಿರ್ಮಲಾ ಗಂಡನಿಂದ ಹಲ್ಲೆಗೆ ಒಳಗಾದ ಮಹಿಳೆ ಎಂದು ಗುರುತಿಸಲಾಗಿದ್ದು, ಗಂಡ ರಾಜೇಶ್ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಿಮ್ಮಲಕುಂಟೆ ಎಂಬ ಗ್ರಾಮದ ನಿವಾಸಿಯಾಗಿರುವ ರಾಕೇಶ್, ಬೋರ್ ಮೋಟಾರ್ ರಿಪೇರಿ ಮಾಡುತ್ತ ಜೀವನ ಸಾಗಿಸುತ್ತಿದ್ದ. ಈತ ಬೆಂಗಳೂರಿನ ಕೆ.ಆರ್ ಪುರಂನ ಲೀಲಾ ಎಂಬುವವರೊಂದಿಗೆ ಮೊದಲ ವಿವಾಹವಾಗಿದ್ದ. ಆದರೆ, ಲೀಲಾ ಹೆರಿಗೆಗೆಂದು ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಅಕ್ಕ ನಿರ್ಮಲಾಳನ್ನು ಪ್ರೀತಿಸಿ ಮದುವೆಯಾಗಿದ್ದ(Nirmala- Rajesh Love Marriage).

ನಂತರ ಕೂಲಿ ಅರಸಿ ಊರೂರು ಅಲೆದು ಸಂಸಾರ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪತ್ನಿ ನಿರ್ಮಲಾ ನಾಪತ್ತೆಯಾಗಿದ್ದಳು. ಆತ ನಿರ್ಮಲಾಗಾಗಿ ಹುಡುಕಾಟ ನಡೆಸುತ್ತಿದ್ದ. ಆದರೆ, ನಿರ್ಮಲಾ ಸಿಗುತ್ತಿದ್ದಂತೆ ಮರಳಿ ಬರುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಮಹಿಳೆ ಒಪ್ಪಿಲ್ಲ. ಇದರಿಂದ ಆಕ್ರೋಶಕೊಂಡ ರಾಕೇಶ್, ಸ್ಕ್ರೂಡ್ರೈವರ್ ನಿಂದ ಕುತ್ತಿಗೆಗೆ ಚುಚ್ಚಿ ಹಾಗೂ ಚಾಕುವಿನಿಂದ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ.
ಆದರೆ, ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ತನ್ನ ಹೆಂಡತಿ ಸತ್ತು ಹೋದಳು ಅಂತ ಅಂದುಕೊಂಡಿದ್ದ ರಾಕೇಶ್, ಬಾರ್ ಗೆ ಹೋಗಿ, ಕಂಠಪೂರ್ತಿ ಕುಡಿದು, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕಳೆದ 1 ತಿಂಗಳ ಹಿಂದೆ ದಿಬ್ಬೂರಹಳ್ಳಿ ಎಂಬಲ್ಲಿ ಇಬ್ಬರೂ ವಾಸಿಸುತ್ತಿದ್ದಾಗ ನಿರ್ಮಲಾ, ರಾಜೇಶ್ ಗೆ ಏನೂ ಹೇಳದೆ ಹೊರಟು ಹೋಗಿದ್ದಳು. ಹೀಗಾಗಿ ಹೆಂಡತಿಗಾಗಿ ಆತ ಹುಡುಕಾಟ ನಡೆಸುತ್ತಿದ್ದ. ರಾಜೇಶ್ ಗೆ ನಿನ್ನೆ ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿ ಬಳಿ ನಿರ್ಮಲಾ ಕಂಡಿದ್ದಾಳೆ.

ಸ್ನೇಹಿತೆ ಸುನೀತಾ ಮನೆಯಲ್ಲಿದ್ದ ನಿರ್ಮಲಾಳನ್ನು ತನ್ನೊಂದಿಗೆ ಮರಳಿ ಬರುವಂತೆ ಕೇಳಿಕೊಂಡಿದ್ದಾನೆ. ಆದರೆ, ನಾನು ನಿನ್ನ ಜೊತೆ ಬರುವುದಿಲ್ಲ. ನನ್ನ ಮರ್ಯಾದೆ ತೆಗೆಯಬೇಡ ಎಂದು ಹೇಳಿದ್ದಾಳೆ. ಇದರಿಂದ ರೋಸಿ ಹೋದ ರಾಜೇಶ್, ಸುನೀತಾ ಮನೆಯಲ್ಲಿಯೇ ಇದ್ದ ಸ್ಕ್ರೂಡ್ರೈವರ್ ನಿಂದ ನಿರ್ಮಲಾ ಕುತ್ತಿಗೆಗೆ ಇರಿದಿದ್ದಾನೆ. ತನ್ನ ಬಳಿಯೇ ಇದ್ದ ಚಿಕ್ಕ ಚಾಕುವಿನಿಂದ ಎದೆ ಹಾಗೂ ಕುತ್ತಿಗೆ ಮುಖದ ಮೇಲೆ ಕೊಯ್ದಿದ್ದಾನೆ.
ಎಡಗೈ ಮೂಳೆ ಸಮಸ್ಯೆಗೆ ಗಂಡ ಚಿಕಿತ್ಸೆ ಕೊಡಿಸಿರಲಿಲ್ಲ. ಹೀಗಾಗಿ ತವರು ಮನೆ ಸೇರಿದ್ದೆ. ಚಿಕಿತ್ಸೆ ಪಡೆಯುವುದಕ್ಕಾಗಿ ದುಡ್ಡು ಇಲ್ಲ ಎಂದು ಮುದ್ದೇನಹಳ್ಳಿಯ ಪ್ರೀ ಹಾಸ್ಪಿಟಲ್ ಗೆ ಟ್ರೀಟ್ ಮೆಂಟ್ ಗೆ ಎಂದು ಬಂದಿದ್ದೆ. ಈ ಸಂದರ್ಭದಲ್ಲಿ ಸ್ನೇಹಿತೆ ಸುನೀತಾ ಸಿಕ್ಕಿದ್ದರು. ಅವರ ಮನೆಗೆ ಹೋದಾಗ, ಪತಿ ಏಕಾಏಕಿ ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸ್ನೇಹಿತೆ ಕಾಪಾಡಲು ಮುಂದಾಗಿದ್ದರು. ಆದರೆ, ಅವಳ ಮೇಲೆ ಕೂಡ ದಾಳಿ ಮಾಡಿದ್ದಾನೆ ಎಂದು ನಿರ್ಮಲಾ ಹೇಳಿದ್ದಾಳೆ. ನಿರ್ಮಲಾಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.