OTP SCAM: ಮೊಬೈಲ್ ಓಟಿಪಿ ಸ್ಕ್ಯಾಮ್ ಇತ್ತೀಚೆಗೆ ಹೆಚ್ಚಾಗಿ ಹೋಗಿದೆ. ಗೊತ್ತೋ..ಗೊತ್ತಿಲ್ಲದೋ ಹಲವು ಜನರು ಈ ಸ್ಕ್ಯಾಮ್ ಗೆ ಗುರಿಯಾಗ್ತಾ ಇದಾರೆ. ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅನ್ನೋ ಹಾಗೆ ಆಗಿದೆ ಮೊಬೈಲ್ ಬಳಕೆದಾರರ ಪರಿಸ್ಥಿತಿ. ನಿಮಗೂ ಈ ಅನುಭವ ಆಗಿರಬಹುದು. ಬ್ಯಾಂಕ್ ಖಾತೆಯ ಬಗ್ಗೆ ವಿಚಾರಿಸಲು, ಕೆಲಸದ ಆಫರ್ ಗಾಗಿ ಹಲವು ಮೆಸೆಜ್ ಗಳು ಬರ್ತಾ ಇರ್ತಾವೆ. ಬಟ್ ಈ ರೀತಿಯ ಮೆಸೆಜ್ ಅಥವಾ ಫೋನ್ ಕಾಲ್ ಬಂದಾಗ ಹುಷಾರಾಗಿರಿ.
ಸ್ಮಾರ್ಟ್ ಫೋನ್ ಎಲ್ಲರಿಗೂ ಎಷ್ಟು ಉಪಯೋಗವಿದೆಯೋ ಕೆಲವೊಮ್ಮೆ ಅಷ್ಟೆ ಹಾನಿಕಾರಕವಾಗಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರತಿಯೊಬ್ಬರ ಕೈಯಲ್ಲಿ ಇರುತ್ತೆ. ಮಕ್ಕಳ ಕೈಲಿ ಇದ್ದಾಗ, ಮನೆಯ ಹಿರಿಯರ ಕೈಯಲ್ಲಿ ಫೋನ್ ಇದ್ದಾಗ ಕೆಲವೊಮ್ಮೆ ಗೊತ್ತಿಲ್ಲದೇ ಹಲವು ಸ್ಕ್ಯಾಮ್ ಗಳಿಗೆ ಒಳಗಾಗುವ ಸಂಭವ ಹೆಚ್ಚಾಗಿರುತ್ತೆ.
ಮೆಸೆಜ್/ವಾಟ್ಸಾಪ್ ಮೂಲಕ ಬರುವ ಲಿಂಕ್:
ಕೆಲಸದ ಆಫರ್ ಇದೆ ಎಂದು, ಖಾತೆಯ ಬಗ್ಗೆ ವಿಚಾರಿಸಲು ಮೆಸೆಜ್ ಗಳನ್ನ ಕಳುಹಿಸುತ್ತಾರೆ. ಇಂತಹ ಮೆಸೆಜ್ ಗೆ ರಿಪ್ಲೈ ಅಥವಾ ಅವರು ಕಳುಹಿಸುವ ಲಿಂಕ್ ಕ್ಲಿಕ್ ಮಾಡಿದ್ರೆ ಅಲ್ಲಿಂದ ಕೆಡುತ್ತೆ ನೋಡಿ ಗ್ರಹಚಾರ. ಇಂತಹ ಲಿಂಕ್ ಗಳ ಮೂಲಕ ಕೆಲವು ಮಾಹಿತಿಗಳನ್ನ ಕೇಳುತ್ತಾರೆ. ಒಂದೊಂದಾಗಿ ಮಾಹಿತಿ ಹಂಚಿಕೊಳ್ಳುತ್ತ ಹೋದರೆ ಡೈರೆಕ್ಟ್ ಆಗಿ ನಿಮ್ಮ ಖಾತೆಗೆ ಹಾಕ್ತಾರೆ ಖನ್ನ.
ಇನ್ನು ಕೆಲಸಕ್ಕೆಂದು ಬರುವ ಮೆಸೆಜ್ ನಲ್ಲಿ ಎರಡು ಸುತ್ತಿನ ಇಂಟರ್ವ್ಯೂ ಇರುತ್ತದೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಫಿಲ್ ಮಾಡಿ ಎಂದು ಹೇಳ್ತಾರೆ. ಮೊದಲಿಗೆ ಬೇಸಿಕ್ ಮಾಹಿತಿ ಕೇಳಲಾಗುತ್ತೆ. ನಂತರ ಬ್ಯಾಂಕ್ ಖಾತೆಯ ವಿವರ ಕೇಳಲಾಗುತ್ತೆ. ಒಂದು ವೇಳೆ ಅವರು ಕೇಳಿದ ಮಾಹಿತಿ ಫಿಲ್ ಮಾಡದೇ ಇದ್ದರೆ ಸೆಕೆಂಡ್ ರೌಂಡ್ ಇಂಟರ್ ವ್ಯೂ ಕ್ಯಾನ್ಸಲ್ ಆಗುತ್ತೆ ಅಂತಾರೆ.
ಪಾಪ..ಕೆಲಸದ ಅವಶ್ಯಕತೆ ಇರುವವರು ಎಲ್ಲ ಮಾಹಿತಿ ಕಳಿಸಿ, ಓಟಿಪಿ ಬಂದ್ರೆ ಅದರ ನಂಬರ್ ಕಳಿಸಿದ್ರೆ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಆಗುತ್ತೆ ಮಂಗಮಾಯ.
ಸೋ..ವಾಟ್ಸಾಪ್ ಮೂಲಕ ಯಾವುದೇ ಮೆಸೆಜ್ ಬಂದ್ರು ತುಂಬಾ ಜಾಗರೂಕರಾಗಿರಿ. ಯಾರ ಬಳಿಯೂ ಓಟಿಪಿಯನ್ನ ಹಂಚಿಕೊಳ್ಳಬೇಡಿ. ಒಂದು ವೇಳೆ ಸಂಶಯ ಬಂದಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ಅಥವಾ ನಿಮ್ಮ ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನ ತಿಳಿಸಿ.