Kornersite

Bengaluru Just In Karnataka National

Gold and Silver Prices: ಚಿನ್ನ ಕೊಳ್ಳುವವರಿಗೆ ಇಂದು ಶುಭ ದಿನ!

Bangalore : ದೇಶದಲ್ಲಿ ಚಿನ್ನದ(Gold) ದರ ಸತತ ಏರಿಕೆ ಕಾಣುತ್ತಿತ್ತು. ಇದರ ಮಧ್ಯೆ ಆಗಾಗ ಇಳಿಕೆ ಕಾಣುತ್ತಿತ್ತು. ಇಂದು ಕೂಡ ಚಿನ್ನ ಬ್ರೇಕ್ ಪಡೆದಿದ್ದು,

ಚಿನ್ನ ಹಾಗೂ ಬೆಳ್ಳಿ (Gold and Silver Prices) ಇಂದು ಇಳಿಕೆ ಕಂಡಿವೆ. ಹೀಗಾಗಿ ಚಿನ್ನಪ್ರಿಯರಲ್ಲಿ ಸಂತಸ ಮನೆ ಮಾಡಿದೆ. ಬೆಳ್ಳಿಯ ಬೆಲೆ 100 ಗ್ರಾಂಗೆ 30 ರೂ.ರಷ್ಟು ಅಲ್ಪ ಇಳಿಕೆ ಕಂಡಿದೆ. ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 390 ರುಪಾಯಿಯಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಇಳಿಕೆ ಬರಬಹುದು ಎನ್ನಲಾಗುತ್ತಿದೆ.

ಕೆಲವು ವಾರಗಳ ಹಿಂದೆ ನಾಲ್ಕು ಸಾವಿರದಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆಗೆ ಬೇಡಿಕೆ ಎಂದಿಗೂ ಇರುತ್ತದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,400 ರೂ. ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,430 ರೂ. ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ 7,630 ರೂ.ಗೆ ಇಳಿದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,450 ರೂ. ಆಗಿದೆ. ಬೆಳ್ಳಿ ಬೆಲೆ 8 ಸಾವಿರ ರೂ.ಗೆ ಇಳಿಕೆ ಕಂಡಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಇಳಿಕೆ ಕಂಡಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಕನಿಷ್ಠ 50 ಸಾವಿರ ರೂ ಮಟ್ಟಕ್ಕೆ ತಲುಪಿದೆ. ಮಲೇಷ್ಯಾ, ಕತಾರ್ ಮತ್ತು ಓಮನ್ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.

ಅಮೆರಿಕದಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಅಲ್ಲಿಯ ಫೆಡರಲ್ ಬ್ಯಾಂಕು ತನ್ನ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ ಜನರು ಚಿನ್ನದ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ, ಚಿನ್ನದ ಬೆಲೆ ಸದ್ಯಕ್ಕೆ ಜಾಗತಿಕವಾಗಿ ಇಳಿಕೆ ಕಾಣುತ್ತಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ