Ankola : ಒಳ್ಳೆಯದು, ಸಮಾಜಕ್ಕೆ ಉಪಯೋಗವಾಗುವುದನ್ನು ಕಂಡ ಕೂಡಲೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡು ಶ್ಲಾಘಿಸುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಸದ್ಯ ಅಂಕೋಲಾದ ಹಾಲಕ್ಕೆ ಮಹಿಳೆನ್ನು ಹಾಡಿ ಹೊಗಳಿದ್ದಾರೆ.
ಅಂಕೋಲಾ ಬಸ್ ನಿಲ್ದಾಣದಲ್ಲಿ ನೇರಳೆ ಹಣ್ಣು ಮಾರಾಟ ಮಾಡುವ ಹಾಲಕ್ಕಿ ಮಹಿಳೆ ಮೋಹಿನಿ ಗೌಡ ಅವರನ್ನು ಆನಂದ್ ಮಹೀಂದ್ರಾ ಅವರು ಹೊಗಳಿದ್ದಾರೆ. ಈ ಮಹಿಳೆ, ನೇರಳೆ ಹಣ್ಣು ಮಾರಾಟ ಮಾಡುವುದಲ್ಲದೇ, ತಿಂದು ಬಿಸಾಡಿದ ಎಲೆಗಳನ್ನು ಆಯ್ದು ಸ್ವಚ್ಛಗೊಳಿಸುತ್ತಾರೆ. ಈ ಮಹಿಳೆ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಎಲೆಗಳನ್ನು ಆಯ್ದು ಕಸದ ಬುಟ್ಟಿಗೆ ಹಾಕುವುದನ್ನು ಆದರ್ಶ್ ಹೆಗಡೆ ಎಂಬವವರು ವಿಡಿಯೋ ಮಾಡಿ ಹಂಚಿಕೊಂಡಿದ್ದರು.
ಆದರ್ಶ ಹೆಗಡೆ ಟ್ವಿಟ್ಟರ್ ನ್ನು ನೋಡಿರುವ ಆನಂದ್ ಮಹೀಂದ್ರಾ, ಇಂತಹ ವ್ಯಕ್ತಿಗಳೇ ಸ್ವಚ್ಛ ಭಾರತದ ರಿಯಲ್ ಹೀರೋಗಳು ಎಂದು ಶ್ಲಾಘಿಸಿರುವ ಅವರು, ಆ ಮಹಿಳೆಯನ್ನು ಸಂಪರ್ಕ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆನಂದ ಮಹೀಂದ್ರಾ ಅವರ ಟ್ವೀಟ್ ನಂತರ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.