Kornersite

Just In Sports

IPL 2023: RCB ಹೋರಾಟ ವ್ಯರ್ಥ; ಹೋರಾಡಿ ಗೆದ್ದ ಲಕ್ನೋ!

Banglaore : ಕೊಹ್ಲಿ(Kohli), ಗ್ಲೇನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್‌ ಭರ್ಜರಿ ಆಟಕ್ಕೆ ಆರ್ ಸಿಬಿ ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿತ್ತು. ಆದರೆ, ಲಕ್ನೋ ತಂಡವು ಬೆಂಗಳೂರು ಅಭಿಮಾನಗಳ ಕನಸನ್ನು ಕಸಿದುಕೊಂಡಿತು.

ನಿಕೊಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ KGF ಭರ್ಜರಿ ಬ್ಯಾಟಿಂಗ್‌ ಹೊರತಾಗಿಯೂ, ನಿಕೋಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಬ್ಯಾಟಿಂಗ್‌ ಅಬ್ಬರಕ್ಕೆ ಆರ್‌ಸಿಬಿ ತಂಡ ಮಕಾಡೆ ಮಲಗಿತು. ಈ ಮೂಲಕ ತವರಿನಲ್ಲಿಯೇ ಸೋತು ತೀವ್ರ ಮುಖಭಂಗ ಅನುಭವಿಸಿದ್ದು, ಐಪಿಎಲ್‌ನಲ್ಲಿ ಸತತ 2 ಪಂದ್ಯಗಳನ್ನು ಸೋತಿತು.


ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಆರ್‌ ಸಿಬಿ ತಂಡ 20 ಓವರ್‌ ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಭರ್ಜರಿ 212 212 ರನ್‌ ಗಳ ಬೃಹತ್ ಮೊತ್ತ ಕಲೆ ಹಾಕಿತು. 213 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ರೋಚಕ ಜಯ ಸಾಧಿಸಿತು.

ಚೇಸಿಂಗ್‌ ಆರಂಭಿಸಿದ ಲಕ್ನೋ ತಂಡ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಕೇಲ್‌ ಮೇಯರ್ಸ್‌, ಕೆ.ಎಲ್‌ ರಾಹುಲ್‌, ದೀಪಕ್‌ ಹೂಡಾ ಹಾಗೂ ಕೃನಾಲ್‌ ಪಾಂಡ್ಯ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತುತ್ತಾಗಿ ಪೆವಿಲಿಯನ್‌ ಸೇರಿದರು. ನಾಯಕ ಕೆ.ಎಲ್‌. ರಾಹುಲ್‌ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು. ಪರಿಣಾಮ ಲಕ್ನೋ ತಂಡ 6 ಓವರ್‌ಗಳಲ್ಲಿ 37 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡು, ಸೋಲಿನ ಭೀತಿ ಎದುರಿಸಿತ್ತು.

ಬೃಹತ್ ಮೊತ್ತ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಉತ್ತಮ ಶುಭಾರಂಭ ಸಿಗಲಿಲ್ಲ. ಕೇಲ್‌ ಮೇಯರ್ಸ್‌, ಕೆ.ಎಲ್‌. ರಾಹುಲ್‌, ದೀಪಕ್‌ ಹೂಡಾ ಹಾಗೂ ಕೃನಾಲ್‌ ಪಾಂಡ್ಯ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿ ಫೇವಲಿಯನ್ ಸೇರಿದ್ದರು. ನಾಯಕ ಕೆ.ಎಲ್‌. ರಾಹುಲ್‌ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು. ಪರಿಣಾಮ ಲಕ್ನೋ ತಂಡ 6 ಓವರ್‌ಗಳಲ್ಲಿ 37 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತ್ತು.
ನಂತರ 5ನೇ ವಿಕೆಟ್‌ಗೆ ಕಣಕ್ಕಿಳಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಾರ್ಕಸ್‌ ಸ್ಟೋಯ್ನಿಸ್‌ ಉತ್ತಮ ಚೇತರಿಕೆ ನೀಡಿದರು. ಕೇವಲ 30 ಎಸೆತಗಳಲ್ಲಿ ಭರ್ಜರಿ 65 ರನ್‌ (6 ಬೌಂಡರಿ, 5 ಸಿಕ್ಸರ್‌) ಸಿಡಿಸಿದರು. ಇದರಿಂದ ತಂಡ 10 ಓವರ್‌ಗಳ ಅಂತ್ಯಕ್ಕೆ 91 ರನ್‌ ಗಳಿಸಿತ್ತು. ನಂತರ ನಿಕೊಲಸ್‌ ಪೂರನ್‌ ಬ್ಯಾಟಿಂಗ್‌ ದಾಳಿಗೆ ಆರ್‌ಸಿಬಿ ತಂಡ ಸಂಪೂರ್ಣ ಮಂಕಾಯಿತು. ಆರ್‌ಸಿಬಿ ಬೌಲರ್‌ಗಳನ್ನು ಬಿಡದೇ ಬೆಂಡೆತ್ತಿದ್ದ ನಿಲಕೋಲಸ್‌ ಪೂರನ್‌ ಕೇವಲ 15 ಎಸೆತಗಳಲ್ಲಿ 50 ರನ್‌ ಹೊಸ ದಾಖಲೆ ಬರೆದರು.

ನಿಕೋಲಸ್‌ ಪೂರನ್‌ 18 ಎಸೆತಗಳಲ್ಲಿ 62 ರನ್‌ (4 ಬೌಂಡರಿ, 7 ಸಿಕ್ಸರ್‌) ಗಳಿಸಿ ಆಡುತ್ತಿದ್ದಾಗ ಕ್ಯಾಚ್‌ ನೀಡಿ ಔಟಾದರು. ಇದರೊಂದಿಗೆ ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್‌ ಗಳಿಸಿ ತಂಡಕ್ಕೆ ನೆರವಾದರು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಆರ್‌ಸಿಬಿ ತಂಡಕ್ಕೆ ಜಯಕ್ಕೆ ಮತ್ತೆ ಜೀವ ಬಂದಂತಾಗಿತ್ತು. ಆದರೆ ಕೊನೆಯಲ್ಲಿ ಜಯದೇವ್‌ ಉನಾದ್ಕಟ್‌ 9 ರನ್‌ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು, 2 ಎಸೆತಗಳಲ್ಲಿ 1 ರನ್‌ ಬೇಕಿದ್ದಾಗಲೇ ಉನಾದ್ಕಟ್‌ ಕ್ಯಾಚ್‌ ನೀಡಿದ್ದರು. ಕೊನೆಯ ಓಂದು ಎಸೆತಕ್ಕೆ ಒಂದು ರನ್‌ ಬೇಕಿದ್ದಾಗ ಅವೇಶ್‌ ಖಾನ್‌ ಕೊನೆಯ ಎಸೆತ ಎದುರಿಸುವಲ್ಲಿ ವಿಫಲರಾದರು. ಆದರೆ ಬೈಸ್‌ ರನ್‌ ಕದಿಯುವ ಮೂಲಕ ಲಕ್ನೋ ತಂಡ ಜಯ ಸಾಧಿಸಿತು.
ಆರ್‌ಸಿಬಿ ಪರ ಮೊಹಮ್ಮದ್‌ ಸಿರಾಜ್‌, ವೇಯ್ನ್ ಪಾರ್ನೆಲ್ ತಲಾ 3 ವಿಕೆಟ್‌ ಕಿತ್ತರೆ, ಕರಣ್‌ ಶರ್ಮಾ 1 ವಿಕೆಟ್‌, ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಿತ್ತರು.

ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಆರ್‌ಸಿಬಿ ತಂಡಕ್ಕೆ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಈ ಜೋಡಿ 11.3 ಓವರ್‌ಗಳಲ್ಲಿ 96 ರನ್‌ ಗಳಿಸಿತ್ತು. ಈ ವೇಳೆ ವಿರಾಟ್‌ 61 ರನ್‌ (44 ಎಸೆತ, 4 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು. ನಂತರ ಜೊತೆಯಾದ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಫಾಫ್‌ ಡುಪ್ಲೆಸಿಸ್‌ ಜೋಡಿ ಲಕ್ನೋ ಬೌಲರ್‌ಗಳನ್ನು ಬೆಂಡೆತ್ತಿದರು 50 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 115 ರನ್‌ ಸಿಡಿಸಿತ್ತು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಫಾಫ್ ಡುಪ್ಲೆಸಿಸ್ ನಂತರ ಅಬ್ಬರಿಸಿದರು. ರವಿ ಬಿಷ್ಣೋಯಿ ಓವರ್ ನಲ್ಲಿ 115 ಮೀಟರ್ ಸಿಕ್ಸರ್ ಸಿಡಿಸಿ ಮಿಂಚಿದರು. 203 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದರು. ಮ್ಯಾಕ್ಟ್‌ವೆಲ್‌ 29 ಎಸೆತಗಳಲ್ಲಿ ಸ್ಫೋಟಕ 59 ರನ್‌ (6 ಸಿಕ್ಸರ್‌, 3 ಬೌಂಡರಿ) ಚಚ್ಚಿ ಕೊನೆಯಲ್ಲಿ ಒಂದು ಎಸೆತ ಬಾಕಿಯಿರುವಂತೆ ಔಟಾದರು. 171 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಫಾಫ್‌ ಡುಪ್ಲೆಸಿಸ್‌ 46 ಎಸೆತಗಳಲ್ಲಿ 79 ರನ್‌ (5 ಸಿಕ್ಸರ್‌, 5 ಬೌಂಡರಿ) ಸಿಡಿಸಿ ಅಜೇಯರಾಗುಳಿದರು. ಲಕ್ನೋ ಸೂಪರ್‌ ಜೈಂಟ್ಸ್‌ ಪರ ಮಾರ್ಕ್‌ವುಡ್‌, ಅಮಿತ್‌ ಮಿಶ್ರಾ ತಲಾ ಒಂದೊಂದು ವಿಕೆಟ್‌ ಪಡೆದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್