New Delhi : ರಾಜ್ಯ ವಿಧಾನಸಭೆ ಚುನಾವಣೆಯ ಕಣ ರಂಗೇರಿದ್ದು, ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿತ್ತು. ಇಂದು ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿಯೇ ಬರೋಬ್ಬರಿ 189 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. 35 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ಅವುಗಳಿಗೆ ಇನ್ನೂ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ.
ಈ ಬಾರಿ ಬರೋಬ್ಬರಿ 52 ಜನ ಹೊಸಬರಿಗೆ ಬಿಜೆಪಿ ಅವಕಾಶ ನೀಡಿದೆ. 8 ಜನ ಮಹಿಳೆಯರು ಹಾಗೂ ಐವರು ವಕೀಲರಿಗೆ ಟಿಕೆಟ್ ನೀಡಲಾಗಿದೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಅರುಣ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಹೊಸ ಪೀಳಿಗೆಯನ್ನು ವಿಧಾನಸಭೆ ಸಭೆಯಲ್ಲಿ ನೋಡುವ ಪ್ರಯತ್ನದಿಂದಾಗಿ ಯುವ, ಹೊಸತನ, ಹೊಸ ಯೋಚನೆ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ವಿ. ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಿರುವ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ಪಡೆದವರ ಜಿಲ್ಲಾವಾರು ಕ್ಷೇತ್ರದ ಮಾಹಿತಿ:
ಶಿಗ್ಗಾಂವಿ ಕ್ಷೇತ್ರ -ಬಸವರಾಜ ಬೊಮ್ಮಾಯಿ,
ನಿಪ್ಪಾಣಿ – ಶಶಿಕಲಾ ಜೊಲ್ಲೆ
ಚಿಕ್ಕೋಡಿ – ರಮೇಶ್ ಕತ್ತಿ
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ – ಶ್ರೀಮಂತ ಪಾಟೀಲ್
ಕುಡಚಿ – ಪಿ.ರಾಜೀವ್
ರಾಯಯಬಾಗ – ದುರ್ಯೋಧನ ಐಹೊಳೆ
ಹುಕ್ಕೇರಿ – ನಿಖಿಲ್ ಕತ್ತಿ
ಅರಬಾವಿ – ಬಾಲಚಂದ್ರ ಜಾರಕಿಹೊಳಿ
ಗೋಕಾಕ್ – ರಮೇಶ್ ಜಾರಕಿಹೊಳಿ
ಬೆಳಗಾವಿ ಗ್ರಾಮಾಂತರ – ನಾಗೇಶ್
ಕಿತ್ತೂರು -ಮಹಾಂತೇಶ್ ದೊಡಗೌಡರ್
ಬೈಲಹೊಂಗಲ – ಜಗದೀಶ್ ಮೆಟಗುಡ್ಡ
ಸವದತ್ತಿ ಯಲ್ಲಮ್ಮ – ರತ್ನಾ ಮಾಮನಿ,
ರಾಮದುರ್ಗ – ಚಿಕ್ಕರೇವಣ್ಣ
ಮುಧೋಳ – ಗೋವಿಂದ ಕಾರಜೋಳ
ಬೆಳಗಾವಿ ಉತ್ತರ – ರವಿ ಪಾಟೀಲ
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
ಬೆಳಗಾವಿ ಗ್ರಾಮೀಣ – ನಾಗೇಶ್ ಮಾರ್ವಾಡಕರ್
ಬೈಲಹೊಂಗಲ – ಜಗದೀಶ್ ಮೆಟಗುಡ್ಡ
ವಿಜಯನಗರ – ಸಿದ್ದಾರ್ಥ್ ಸಿಂಗ್
ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು,
ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ
ಶಿಕಾರಿಪುರ – ಬಿ.ವೈ.ವಿಜಯೇಂದ್ರ
ಉಡುಪಿ – ಯಶ್ಪಾಲ್ ಸುವರ್ಣ
ಕಾರ್ಕಳ – ವಿ.ಸುನೀಲ್ ಕುಮಾರ್
ಚಿಕ್ಕಮಗಳೂರು – ಸಿ.ಟಿ.ರವಿ
ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ
ತಿಪಟೂರು – ಬಿ.ಸಿ.ನಾಗೇಶ್
ತುಮಕೂರು – ಜ್ಯೋತಿ ಗಣೇಶ್
ಕೊರಟಗೆರೆ – ಅನಿಲ್ ಕುಮಾರ್(ನಿವೃತ್ತ ಐಎಎಸ್ ಅಧಿಕಾರಿ)
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್
ಕಲಬುರಗಿ.ಗ್ರಾ – ಬಸವರಾಜ್
ಕಲಬುರಗಿ.ದ – ದತ್ತಾತೇಯ ಪಾಟೀಲ್
ಕಲಬುರಗಿ.ಉ – ಚಂದ್ರಕಾಂತ ಪಾಟೀಲ್
ಅಳಂದ-ಸುಭಾಷ್ ಗುತ್ತೇದಾರ್
ಔರಾದ್ – ಪ್ರಭು ಚೌಹಾಣ್
ರಾಯಚೂರು.ಗ್ರಾ – ತಿಪ್ಪರಾಜು ಹವಲ್ದಾರ್
ರಾಯಚೂರು-ಶಿವರಾಜ ಪಾಟೀಲ್
ಸಿಂಧನೂರು – ಕೆ.ಕರಿಯಪ್ಪ
ಮಸ್ಕಿ – ಪ್ರತಾಪಗೌಡ ಪಾಟೀಲ್
ಕನಕಗಿರಿ – ಬಸವರಾಜ ದಡೇಸುಗೂರು,
ನರಗುಂದ – ಶಂಕರ ಪಾಟೀಲ್
ಧಾರವಾಡ – ಅಮೃತ ದೇಸಾಯಿ
ಹಳಿಯಾಳ – ಸುನೀಲ್ ಹೆಗಡೆ
ಕಾರವಾರ -ರೂಪಾಲಿ ನಾಯ್ಕ್
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ವಿಜಯಪುರ – ಬಸನಗೌಡ ಪಾಟೀಲ್ ಯತ್ನಾಳ್
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ.
ಕೋಲಾರ – ವರ್ತೂರು ಪ್ರಕಾಶ್
ಯಲಹಂಕ – ಎಸ್.ಆರ್.ವಿಶ್ವನಾಥ್
ಕೆ.ಆರ್.ಪುರಂ – ಭೈರತಿ ಬಸವರಾಜು
ಯಶವಂತಪುರ – ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿನಗರ – ಮುನಿರತ್ನ ನಾಯ್ಡ,
ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ
ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಗಾಂಧಿನಗರ – ಸಪ್ತಗಿರಿಗೌಡ,
ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ IPS ಅಧಿಕಾರಿ),
ಬಸವಗುಡಿ – ರವಿ ಸುಬ್ರಹ್ಮಣ್ಯ
ಪದ್ಮನಾಭನಗರ – ಆರ್.ಅಶೋಕ್
ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್
ಹೊಸಕೋಟೆ – ಎಂಟಿಬಿ ನಾಗರಾಜ್
ರಾಜಾಜಿನಗರ – ಎಸ್.ಸುರೇಶ್ ಕುಮಾರ್
ಕನಕಪುರ – ಆರ್.ಅಶೋಕ್
ಪದ್ಮನಾಭನಗರ – ಆರ್.ಅಶೋಕ್
ಕನಕಪುರ – ಆರ್.ಅಶೋಕ್
ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ್
ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ
ಹಾಸನ – ಪ್ರೀತಂ ಗೌಡ
ಚಾಮರಾಜನಗರ – ವಿ. ಸೋಮಣ್ಣ,
ವರುಣಾ – ವಿ. ಸೋಮಣ್ಣ
ಬೆಳ್ತಂಗಡಿ – ಹರೀಶ್ ಪೂಂಜಾ,
ಬಂಟ್ವಾಳ – ರಾಜೇಶ್ ನಾಯಕ್
ಪುತ್ತೂರು – ಆಶಾ ತಿಮ್ಮಪ್ಪ
ಮಡಿಕೇರಿ – ಅಪ್ಪಚ್ಚು ರಂಜನ್
ವಿರಾಜಪೇಟೆ – ಕೆ.ಜಿ.ಬೋಪಯ್ಯ
ನಂಜನಗೂಡು – ಡಾ. ಹರ್ಷವರ್ಧನ್
ಹನೂರು – ಡಾ. ಪ್ರೀತಮ್ ನಾಗಪ್ಪ
ಕಾಗವಾಡ – ಶ್ರೀಮಂತ ಬಾಳಾಸಾಹೇಬ್ ಪಾಟೀಲ್
ಮುದ್ದೆಬಿಹಾಳ – ಎಎಸ್ ಪಾಟೀಲ್ ನಡಹಳ್ಳಿ
ರಾಯಭಾಗ – ದುರ್ಯೋಧನ್ ಮಹಾಲಿಂಗಪ್ಪ ಐಹೊಳೆ
ಯಮಕನಮರಡಿ – ಬಸವರಾಜ್ ಹುಂಡ್ರಿ
ಚಿಕ್ಕಪೇಟೆ – ಉದಯ ಗರುಡಾಚಾರ್
ಆನೇಕಲ್ – ಹುಲ್ಲಳ್ಳಿ ಶ್ರೀನಿವಾಶ್
ಹೊಸಕೋಟೆ – ಎಂ.ಟಿ.ಬಿ. ನಾಗರಾಜ್
ದೇವನಹಳ್ಳಿ – ಪಿಳ್ಳ ಮುನಿಶ್ಯಾಮಪ್ಪ
ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು
ನೆಲಮಂಗಲ – ಸಪ್ತಗಿರಿ ನಾಯ್ಕ್
ಮಾಗಡಿ – ಪ್ರಸಾದ್ ಗೌಡ
ರಾಮನಗರ – ಗೌತಮಗೌಡ
ಚನ್ನಪಟ್ಟಣ – ಸಿ.ಪಿ. ಯೋಗೇಶ್ವರ್
ಮಳವಳ್ಳಿ – ಮುನಿರಾಜು
ಮದ್ದೂರು – ಎಸ್.ಪಿ. ಸ್ವಾಮಿ
ಮೇಲುಕೋಟೆ – ಇಂದ್ರೇಶ್ ಕುಮಾರ್
ಮಂಡ್ಯ – ಅಶೋಕ ಜಯರಾಂ
ಶ್ರೀರಂಗಪಟ್ಟಣ – ಇಂಡವಾಳು ಸಚ್ಚಿದಾನಂದ
ನಾಗಮಂಗಲ – ಸುಧಾ ಶಿವರಾಂ
ಕೆ.ಆರ್. ಪೇಟೆ – ಕೆ.ಸಿ. ನಾರಾಯಣಗೌಡ
ಬೇಲೂರು – ಉಳ್ಳಳ್ಳಿ ಸುರೇಶ್
ಹೊಳೆನರಸೀಪುರ – ದೇವರಾಜೇಗೌಡ
ಅರಕಲಗೂಡು – ಯೋಗಾ ರಮೇಶ್
ಸಕಲೇಶ ಪುರ – ಸಿಮೆಂಟ್ ಮಂಜು
ಮೂಡಬಿದರೆ – ಉಮಾನಾಥ ಕೋಟ್ಯಾನ್
ಮಂಗಳೂರು ಉತ್ತರ – ಭರತ್ ಶೆಟ್ಟಿ
ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್
ಮಂಗಳೂರು – ಸತೀಶ್ ಕುಂಪಲ
ಸುಳ್ಯ – ಭಾಗೀರಥಿ ಮುರುಲ್ಯ
ಮಡಿಕೇರಿ – ಅಪ್ಚಚ್ಚು ರಂಜನ್
ವಿರಾಜಪೇಟೆ – ಕೆ.ಜಿ. ಬೋಪಯ್ಯ
ಪಿರಿಯಾಪಟ್ಟಣ – ಸಿ.ಎಚ್. ವಿಜಯಶಂಕರ್
ಕೆ.ಆರ್. ನಗರ – ವೆಂಕಟೇಶ್ ಹೊಸಳ್ಳಿ
ಹುಣಸೂರು – ದೇವರಹಳ್ಳಿ ಸೋಮಶೇಖರ್
ನಂಜನಗೂಡು – ಬಿ. ಹರ್ಷವರ್ಧನ
ಚಾಮುಂಡೇಶ್ವರಿ – ಕವೀಶ್ ಗೌಡ
ನರಸಿಂಹರಾಜ – ಸಂದೇಶ ಸ್ವಾಮಿ
ಟಿ. ನರಸೀಪುರ – ರೇವಣ್ಣ
ಹನೂರು – ಪ್ರೀತಂ ನಾಗಪ್ಪ
ಕೊಳ್ಳೇಗಾಲ – ಎನ್. ಮಹೇಶ್
ಗುಂಡ್ಲುಪೇಟೆ – ಸಿ.ಎಸ್. ನಿರಂಜನಕುಮಾರ್
ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ
ಸಾಗರ – ಹರತಾಳು ಹಾಲಪ್ಪ
ಯಲ್ಲಾಪುರ – ಶಿವರಾಂ ಹೆಬ್ಬಾರ್
ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು – ಬಿ.ಸಿ. ಪಾಟೀಲ
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ
ಹಡಗಲಿ (ಎಸ್‌ಸಿ) – ಕೃಷ್ಣಾ ನಾಯ್ಕ್
ಕಂಪ್ಲಿ (ಎಸ್‌ಟಿ) – ಟಿ.ಎಚ್. ಸುರೇಶ್ ಬಾಬು
ಸಿರಗುಪ್ಪ (ಎಸ್‌ಟಿ) – ಎಂ.ಎಸ್. ಸೋಮಲಿಂಗಪ್ಪ
ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ
ಕೂಡ್ಲಿಗಿ (ಎಸ್‌ಟಿ) – ಲೋಕೇಶ್ ವಿ. ನಾಯಕ್
ಮೊಳಕಾಲ್ಮುರು (ಎಸ್‌ಟಿ) – ಎಸ್. ತಿಪ್ಪೇಸ್ವಾಮಿ
ಚಳ್ಳಕೆರೆ (ಎಸ್‌ಟಿ) – ಅನಿಲ್ ಕುಮಾರ್
ಚಿತ್ರದುರ್ಗ – ಜಿ.ಎಚ್. ತಿಪ್ಪಾರೆಡ್ಡಿ
ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
ಹೊಳಲ್ಕೆರೆ (ಎಸ್‌ಸಿ) – ಎಂ. ಚಂದ್ರಪ್ಪ
ಜಗಳೂರು (ಎಸ್‌ಟಿ) – ಎಸ್.ವಿ. ರಾಮಚಂದ್ರ
ಹರಿಹರ – ಬಿ.ಪಿ. ಹರೀಶ್
ಹೊನ್ನಾಳಿ- ಎಂ.ಪಿ. ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ) – ಅಶೋಕ್ ನಾಯ್ಕ್
ಭದ್ರಾವತಿ – ಮಂಗೋಟಿ ರುದ್ರೇಶ್
ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
ಶಿಕಾರಿಪುರ – ಬಿ.ವೈ. ವಿಜಯೇಂದ್ರ
ಸೊರಬ – ಕುಮಾರ್ ಬಂಗಾರಪ್ಪ
ಕಾಪು – ಗುರ್ಮೆ ಸುರೇಶ್ ಶೆಟ್ಟಿ
ಸಿದ್ದರಾಮಯ್ಯ vs ಸೋಮಣ್ಣ
ಬಿಜೆಪಿಯ ಪಟ್ಟಿಯಲ್ಲಿ 7 ಜನ ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಅನಿಲ್ ಬೆನಕೆ – ಬೆಳಗಾವಿ, ಗೂಳಿಹಟ್ಟಿ ಶೇಖರ್ – ಹೊಸದುರ್ಗ, ಸಂಜೀವ್ ಮಠಂದೂರು – ಪುತ್ತೂರು, ಅಂಗಾರ – ಸುಳ್ಯ, ಲಾಲಾಜಿ ಮಂಡೆನ್ – ಕಾಪು, ರಘುಪತಿ ಭಟ್ – ಉಡುಪಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ – ಕುಂದಾಪುರ ಟಿಕೆಟ್ ಮಿಸ್ ಆಗಿದೆ.
ಈ ಸಂದರ್ಭದಲ್ಲಿ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಜಿಲ್ಲಾ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬಿಜೆಪಿಯ ಎಲ್ಲ ರಾಷ್ಟ್ರೀಯ ಪ್ರಮುಖ ನಾಯಕರ ಇನ್ ಪುಟ್ ಪಡೆದುಕೊಂಡಿದ್ದೇವೆ. 31 ಜಿಲ್ಲೆಗಳಲ್ಲಿಯೂ ಅಭಿಪ್ರಾಯ ಸಂಗ್ರಹಿಸಿದ್ದೇವೆ. 25 ಸಾವಿರ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.