Hubballi: ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಅವರು ಹಾಸನದಲ್ಲಿ (Hassan) ಭವಾನಿ ರೇವಣ್ಣ (Bhavani Revanna) ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ (Hassan) ಶಕ್ತಿಯುತ ಕಾರ್ಯಕರ್ತರ ಪಡೆಯೇ ಇದೆ. ಅವರ ನಿರ್ಧಾರವೇ ಅಂತಿಮವಾಗಿದೆ. ವಾಸ್ತವಿಕ ಮತ್ತು ಗ್ರೌಂಡ್ ರಿಯಾಲಿಟಿ ಅರಿತು ನಾನು ಮಾತನಾಡುತ್ತಿದ್ದೇನೆ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೇ ಗೆಲ್ಲುವುದಿಲ್ಲ. ನಾನು ನನ್ನದೆಯಾದ ಸರ್ವೇ ಮಾಡಿಸಿ, ವರದಿ ತರಿಸಿಕೊಂಡಿದ್ದೇನೆ. ಇದನ್ನು ಗಮನದಲ್ಲಿರಿಸಿಕೊಂಡು ನಾನು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಎಲ್ಲ ಚರ್ಚೆಗಳು ನಾಲ್ಕು ಗೋಡೆಗಳ ಮಧ್ಯೆಯೇ ನಡೆದಿವೆ. ಆದರೆ ಮಾಧ್ಯಮಗಳು ತಮಗೆ ಏನು ಬೇಕೋ ಹಾಗೇ ಮಾತನಾಡುತ್ತಿವೆ. ಅವರಿಗೆ ಈಗ ಟಿಕೆಟ್ ನೀಡಿ, ನಾಳೆ ಸೋತ ಮೇಲೆ ಮಾಧ್ಯಮದವರಿಗೆ ಆಹಾರವಾಗಲು ಆಗುವುದಿಲ್ಲ. ನಾನು ಮೊದಲಿಂದಲೂ ಹಾಸನದ ಟಿಕೆಟ್ ನ್ನು ಸಾಮಾನ್ಯ ವ್ಯಕ್ತಿಗೆ ನೀಡುವುದಾಗಿ ಹೇಳಿದ್ದೆ. ಅದೇ ರೀತಿ ಈಗ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಮುಂದಾಗಲಾಗಿದೆ. ಹಾಸನ ಶಾಸಕ ನಮ್ಮ ಕುಟುಂಬಸ್ಥರಿಗೆ ಸವಾಲು ಹಾಕಿದ್ದ. ಹೀಗಾಗಿ ನಾವು ಆತನ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವುದಾಗಿ ಮೊದಲನಿಂದ ಶಪಥ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರೇವಣ್ಣ (HD Revanna) ಮತ್ತು ಅವರ ಕುಟುಂಬಕ್ಕೆ ಯಾರು ತಲೆ ತುಂಬಿತ್ತಿದ್ದಾರೆ ಎಂಬುವುದು ಗೊತ್ತು. ಆದರೆ ಅವರು ಅಂತಹ ಶಕುನಿಗಳ ಮಾತು ಕೇಳುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಅಂದುಕೊಂಡಿದ್ದಾರೆ. ಅವರು ಅಂತಹ ವ್ಯಕ್ತಿಗಳಿಗೆ ಹಾಲು ಎರೆಯುತ್ತಿದ್ದಾರೆ. ಈ ಮಣ್ಣಿನ ಗುಣದಲ್ಲಿಯೇ ಅದು ಇದೆ. ಇಂತಹ ಸಂಗತಿಗಳಿಂದ ಕುರುಕ್ಷೇತ್ರ ಯುದ್ಧವಾಗಿದೆ ಎಂದು ಕಿಡಿಕಾರಿದರು.
ದೇವೇಗೌಡರ (HD Devegowda) ಕುಟುಂಬದಲ್ಲಿ ನಡೆಯುತ್ತಿರುವ ಬೆಳವಣಿಗೆ ಮಾಧ್ಯಮದ ಸೃಷ್ಟಿಯಾಗಿದೆ. ನಾಲ್ಕು ಗೋಡೆಗಳ ನಡುವೆ ವಿಚಾರ ಹೇಗೆ ಮಾಧ್ಯಮಗಳಿಗೆ ಗೊತ್ತಾಗುತ್ತೆ? ಇದೆಲ್ಲಾ ಮಾಧ್ಯಮಗಳ ಅಂತೆ ಕಂತೆ ಸುದ್ದಿಯಾಗಿದೆ. ಎಲ್ಲಾ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರತಿಕ್ರಿಯೆ ನಡೆಯುತ್ತಿದೆ. ನಾನು ನಿರಂತರವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಕೆಲವು ಸಣ್ಣ- ಪುಟ್ಟ ಸಮಸ್ಯೆಗಳದಿಂದ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಸದ್ಯದಲ್ಲಿಯೇ ಈ ಪಟ್ಟಿ ಬಿಡುಗಡೆಯಾಗಲಿದೆ.