Lucknow : ಬೀದಿ ನಾಯಿಗಳ (Stary Dogs) ದಾಳಿಗೆ(Attack) ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮಹಾರಾಜ್‌ಗಂಜ್‌ನ (Maharajganj) ಶಾಸ್ತ್ರಿನಗರದ ಇಂಟರ್‌ಮೀಡಿಯೇಟ್ ಕಾಲೇಜು ಮೈದಾನದಲ್ಲಿ ನಡೆದಿದೆ.
ಆದರ್ಶ್ (11) ಮೃತ ಬಾಲಕ ಎಂದು ಗುರುತಿಸಲಾಗಿದೆ. ಬಾಲಕನು ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತನ್ನ ಮನೆಯಿಂದ ಮಾರುಕಟ್ಟೆಗೆ ಹೋಗಿದ್ದವನು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದರು. ತುಂಬಾ ಸಮಯದ ನಂತರ ಹುಡುಕಾಡಲು ಆರಂಭಿಸಿದ ಕುಟುಂಬಸ್ಥರಿಗೆ, ತಡರಾತ್ರಿ ಸಂದರ್ಭದಲ್ಲಿ ಕಚ್ಚಿದ ಗುರುತುಗಳೊಂದಿಗೆ ಆತನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆತನ ಮುಖ ಮತ್ತು ಬಲಗೈ ಕಚ್ಚಿದ ಗುರುತುಗಳಿದ್ದು, ಬಾಲಕ ನಾಯಿಗಳ ವಿರುದ್ಧ ಸೆಣಸಾಡಿದಂತೆ ಕಂಡು ಬಂದಿದೆ. ನಾಯಿಗಳ ಹಿಂಡು ದಾಳಿ ಮಾಡಿ ಬಾಲಕನನ್ನು ಕೊಂದು ಹಾಕಿದೆ. ಮೃತದೇಹವನ್ನು ಸ್ವಾಧೀನಪಡಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇನ್ಸ್ಪೆಕ್ಟರ್ ಕೊತ್ವಾಲಿ ರವಿ ರೈ ತಿಳಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿತ್ತು ಎನ್ನಲಾಗಿದೆ.