ರಾಜ್ಯದಲ್ಲಿ ವಿಧಾನಸಭಾ-2023ರ ಕಾವು ಜೋರಾಗಿದೆ. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಹೀಗಿರುವಾಗ ಮತದಾರರ ಗಮನ ತಮ್ಮತ್ತ ಸೆಳೆಯಲು ರಾಜಕಾರಣಿಗಳು ಹಾಗೂ ರಾಜಕೀಯ ಸ್ಟಾರ್ ನಟರನ್ನ ಕರೆತರುವಲ್ಲಿ ಪ್ರಯತ್ನ ನಡೆಸಿವೆ.

ಈಗಾಗಲೇ ಬಿಜೆಪಿ ಮುಖಂಡರು ಕಿಚ್ಚ ಸುದೀಪ್ ಅವರನ್ನ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪರ ಬ್ಯಾಟ್ ಬೀಸೋದಾಗಿ ಕಿಚ್ಚ ಕೂಡ ಬಹಿರಂಗವಾಗಿ ಅನೌನ್ಸ್ ಮಾಡಿದ್ದಾರೆ. ಸುದೀಪ್ ಬೆನ್ನಲ್ಲೇ ಈ ಸಾಲಿನಲ್ಲಿ ಯಶ್ ಕೂಡ ಸೇರುತ್ತಾರಾ ಅನ್ನೋ ಮಾತು ಹರದಾಡುತ್ತಿದೆ.

ಬಟ್ ಇದೀಗ ಈ ಊಹಾಪೋಹಕ್ಕೆ ಆಲ್ ಮೋಸ್ಟ್ ತೆರೆ ಬಿದ್ದಿದೆ. ಹೌದು, ಯಶ್ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಬಿಟ್ಟಿದ್ದಾರೆ.

ಈಗಾಗಲೇ ಹಲವು ಪಕ್ಷದವರು ಯಶ್ ಮನೆ ಬಾಗಿಲನ್ನ ತಟ್ಟಿದ್ದಾರೆ. ತಮ್ಮ ಪರ ಹಾಗೂ ತಮ್ಮ ಪಕ್ಷದ ಪರ ಬ್ಯಾಟ್ ಬೀಸುವಂತೆ ಕೇಳಿಕೊಂಡಿದ್ದಾರೆ.

ಆದ್ರೆ ಯಶ್ ಮಾತ್ರ ನಾನು ಈ ಬಾರಿ ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಯಾವ ಪಕ್ಷದ ಪರ ಪ್ರಾಚಾರ ಮಾಡುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರಂತೆ.