Kornersite

International Just In National

China Virus: ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರ್ ಪತ್ತೆ!

Beijing : ಇಡೀ ಜಗತ್ತಿಗೆ ಕೊರೊನಾ ವೈರಸ್ ನ್ನು ಕೊಡುಗೆಯಾಗಿ ನೀಡಿರುವ ಚೀನಾ(china)ದಲ್ಲಿ ಈಗ ಮತ್ತೊಂದು ಡೆಡ್ಲಿ ವೈರಸ್ ಪತ್ತೆಯಾಗಿದೆ.


ಮಾರ್ಚ್‌ 27 ರಂದು ಏವಿಯನ್‌ ಇನ್ಫ್ಲುಯೆನ್ಸಾ-ಎ (H3N8 Virus – ಹಕ್ಕಿಜ್ವರದ ರೀತಿಯ ವೈರಸ್‌) ವೈರಸ್‌ ನಿಂದಾಗಿ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತು ಪರಿಶೀಲಿಸಾಗ ಇಲ್ಲಿಯವರೆಗೆ ಮೂರು ಪ್ರಕರಣಗಳು ಚೀನಾದಿಂದಲೇ ವರದಿಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.


ಸದ್ಯದ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಡೆಡ್ಲಿ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ. ಜೊತೆಗೆ ವೈರಸ್‌ ನಿಂದ ಹರಡುವಿಕೆಯಲ್ಲಿ ಅಪಾಯದ ಪ್ರಮಾಣ ಕಡಿಮೆ ಇದೆ ಎಂದು ತಜ್ಞರು ಅಧ್ಯಯನದಿಂದ ತಿಳಿಸಿದ್ದಾರೆ. ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ 56 ವರ್ಷದ ಮಹಿಳೆ, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾದ ಒಂದು ತಿಂಗಳ ನಂತರ ನಿಧನರಾಗಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಕೂಡಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಕೋಳಿಗೆ ತಗುಲುವ ರೋಗ ಲಕ್ಷಣಗಳು (ಹಕ್ಕಿಜ್ವರದ ಲಕ್ಷಣಗಳು) ಮಹಿಳೆಯಲ್ಲಿ ಕಂಡು ಬಂದಿದೆ ಎಂದು ಹೇಳಿದೆ.


ಉತ್ತರ ಅಮೆರಿಕದ ಜಲಪಕ್ಷಿಗಳಲ್ಲಿ ಈ ಹಿಂದೆ ಕಂಡು ಬಂದಿದ್ದ ಈ H3N8 ವೈರಸ್‌ 2002ರಿಂದ ಇನ್ನಿತರ ಹಲವು ದೇಶಗಳಿಗೆ ವ್ಯಾಪಿಸಿದೆ. ಈ ವೈರಸ್‌ ಕುದುರೆ, ನಾಯಿಯ ಹಾಗೂ ಹಲವು ಜಲಚರ ಪ್ರಾಣಿಗಳಿಗಲ್ಲಿ ಕಂಡು ಬರುತ್ತದೆ. ಕೋಳಿಯಂತಹ ಸಾಮಾನ್ಯ ಪಕ್ಷಿಗಳಲ್ಲಿ ಕೂಡ ಇದು ಕಂಡು ಬರುತ್ತದೆ. ಅಲ್ಲದೇ, ಪ್ರಾಣಿಗಳಿಂದ ಮನುಷ್ಯರಿಗೂ ಈ ವೈರಲ್ ಹರಡುತ್ತದೆ. ಆದರೆ, ವೇಗವಾಗಿ ಇದು ಹರಡುವುದಿಲ್ಲ. ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾತ್ರ ಇದು ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ.


ಈ ವೈರಸ್‌ ಝೂನೋಟಿಕ್ ಇನ್ಫ್ಲುಯೆನ್ಸಾ ಸೋಂಕು ಆಗಿರುವುದರಿಂದ ಲಕ್ಷಣ ರಹಿತವಾಗಿ ರೋಗ ಸೃಷ್ಟಿಸಬಹುದು. ಸೌಮ್ಯ ಜ್ವರ, ತೀವ್ರತರಹದ ಉಸಿರಾಟ, ಜಠರ ಅಥವಾ ನರಗಳಲ್ಲಿ ಸಮಸ್ಯೆ ಉಂಟುಮಾಡುವ ರೋಗಲಕ್ಷಣಗಳ ಮೂಲಕ ವೈರಸ್‌ ನ್ಯೂನತೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ,

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು