Chennai : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಆರಂಭವಾಗಿದ್ದು, ಸಿಎಸ್ಕೆ (CSK) ಉತ್ತಮ ಪ್ರದರ್ಶನ ತೋರುತ್ತಿದೆ. ಈ ತಂಡದ ನಾಯಕ ಎಂ.ಎಸ್ ಧೋನಿ (MS Dhoni) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುನ್ನಡೆಸುವ ಮೂಲಕ ಐಪಿಎಲ್ನಲ್ಲಿ (IPL 2023) ರಲ್ಲಿ ವಿಶಿಷ್ಟ ಸಾಧನೆಯೊಂದನ್ನು ಮಾಡಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು 200ನೇ ಪಂದ್ಯದಲ್ಲಿ ಮುನ್ನಡೆಸಿದ ವಿಶಿಷ್ಟ ಸಾಧನೆಯನ್ನು ಧೋನಿ ಮಾಡಿದ್ದಾರೆ. ಈ ಮೂಲಕ ನಾಯಕನಾಗಿ ಒಂದೇ ತಂಡವನ್ನು ಅತ್ಯಧಿಕ ಬಾರಿ ಮುನ್ನಡೆಸಿದ ಸಾಧನೆಯನ್ನು ಧೋನಿ ಮಾಡಿದ್ದಾರೆ. ಅದರಲ್ಲಿಯೂ ತಮ್ಮ ತವರಿನಲ್ಲಿಯೇ ಈ ವಿಶೇಷ ಸಾಧನೆಯ ದಾಖಲೆಯನ್ನು ಧೋನಿ ಮಾಡುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
2021ರ ಐಪಿಎಲ್ ಆವೃತ್ತಿಯಲ್ಲೇ ಧೋನಿ ನಾಯಕ ನಾಯಕನಾಗಿ 200 ಪಂದ್ಯಗಳನ್ನು ಪೂರ್ಣಗೊಳಿಸಿದ ಮೊದಲ ಆಟಗಾರನೆಂಬ ಸಾಧನೆ ಮಾಡಿದ್ದರು. ಆದರೆ 2016ರಲ್ಲಿ ರೈಸಿಂಗ್ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. ಇದರ ಹೊರತಾಗಿ ಸಿಎಸ್ಕೆ ತಂಡಕ್ಕೇ ನಾಯಕ ಎನ್ನುವುದನ್ನು ನೋಡುವುದಾದರೆ ಧೋನಿ ಇಂದು ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ 200ನೇ ಪಂದ್ಯ ಮುನ್ನಡೆಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 200 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಇಲ್ಲಿಯವರೆಗೆ ಸಿಎಸ್ಕೆ ನಾಯಕನಾಗಿ 199 ಪಂದ್ಯಗಳನ್ನು ಮುನ್ನಡೆಸಿರುವ ಧೋನಿ 120 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 4 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದಾರೆ. 78 ಪಂದ್ಯಗಳಲ್ಲಿ ಚೆನ್ನೈ ತಂಡ ಸೋತಿದೆ. ಒಟ್ಟಾರೆ ಐಪಿಎಲ್ನಲ್ಲಿ ನಾಯಕನಾಗಿ ಧೋನಿ 213 ಪಂದ್ಯಗಳನ್ನು ಮುನ್ನಡೆಸಿದ್ದು, 125 ಪಂದ್ಯಗಳಲ್ಲಿ ಗೆಲುವು ತಂದರೆ, 87 ಪಂದ್ಯದಲ್ಲಿ ತಂಡ ಸೋಲನ್ನು ಅನುಭವಿಸಿದೆ.