Kornersite

Bengaluru Just In Karnataka State

Karnataka Assembly Election :ಬಿಜೆಪಿಯ ಮೊದಲ ಪಟ್ಟಿಯಲ್ಲಿ 8 ಜನ ಮಹಿಳೆಯರಿಗೆ ಅವಕಾಶ!

Bangalore : ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಬಿಜೆಪಿ ಪಕ್ಷದ ಹೈಕಮಾಂಡ್ ಮಂಗಳವಾರ ರಾತ್ರಿ 189 ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಈ ಪೈಕಿ 8 ಮಹಿಳೆಯರಿಗೆ ಟಿಕೆಟ್‌ (Karnataka BJP Women Candidates) ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹಾಲಿ ಶಾಸಕಿಯರು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೂಪಾಲಿ ಸಂತೋಷ್‌ ನಾಯ್ಕ್‌ ಹಾಲಿ ಶಾಸಕರಾಗಿದ್ದು, ಈ ಬಾರಿ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಇದರೊಂದಿಗೆ 5 ಜನ ವಕೀಲರು, 9 ಜನ ವೈದ್ಯರು, ಒಬ್ಬರು ನಿವೃತ್ತ ಐಎಎಸ್‌, ಒಬ್ಬರು ಐಪಿಎಸ್‌ ಅಧಿಕಾರಿ ಟಿಕೆಟ್ ಪಡೆದಿದ್ದಾರೆ.


ನಿಪ್ಪಾಣಿ – ಶಶಿಕಲಾ ಜೊಲ್ಲೆ
ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
ಸವದತ್ತಿ – ರತ್ನಾ ವಿಶ್ವನಾಥ್‌ ಮಾಮನಿ
ಕಾರವಾರ – ರೂಪಾಲಿ ನಾಯ್ಕ್
ಸಂಡೂರು – ಶಿಲ್ಪಾ ರಾಘವೇಂದ್ರ
ನಾಗಮಂಗಲ – ಸುಧಾ ಶಿವರಾಮೇಗೌಡ
ಪುತ್ತೂರು – ಆಶಾ ತಿಮ್ಮಪ್ಪ ಗೌಡ
ಸುಳ್ಯ – ಭಾಗೀರಥಿ ಮುರುಳ್ಯ

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ