Bangalore : ಸಚಿವ ವಿ.ಸೋಮಣ್ಣಗೆ(Somanna) ಬಿಜೆಪಿಯಿಂದ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯ (Siddaramaiah) ಅವರನ್ನು ಕಟ್ಟಿ ಹಾಕಲು ಸೋಮಣ್ಣಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಅಲ್ಲದೇ, ಇದರೊಂದಿಗೆ ಅವರಿಗೆ ಚಾಮರಾಜನಗರದಲ್ಲಿಯೂ ಟಿಕೆಟ್ ನೀಡಲಾಗಿದೆ. ಈ ಬೆನ್ನಲ್ಲಿಯೇ ಚಾಮರಾಜನಗರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ (Congress) ಪ್ಲ್ಯಾನ್ ಮಾಡಿದೆ.

ಸದ್ಯ ಬೆಂಗಳೂರಿನ ಗೋವಿಂದರಾಜನಗರದ ಶಾಸಕರಾಗಿರುವ ಸೋಮಣ್ಣ ಅವರಿಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಚಾಮರಾಜನಗರ (Chamarajanagara) ಮತ್ತು ವರುಣಾದಲ್ಲಿ (Varuna) ಟಿಕೆಟ್ ನೀಡಿದೆ.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧವೇ ಸೋಮಣ್ಣ ಕಣಕ್ಕೆ ಇಳಿಯುತ್ತಿರುವ ಕಾರಣ ಚಾಮರಾಜನಗರದಲ್ಲಿ ಸೋಮಣ್ಣ ಅವರನ್ನು ಕಟ್ಟಿ ಹಾಕಲು ಬಂಡಾಯ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸಂಪರ್ಕ ಮಾಡುತ್ತಿದೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್ ನೀಡಿದೆ. ಈಗ ಬಿಜೆಪಿ ಟಿಕೆಟ್ ಬಯಸಿದ್ದ ನಾಯಕರನ್ನು ಸಿದ್ದರಾಮಯ್ಯ ತಂಡ ಸಂರ್ಪಕಿಸಿದೆ. ಬಂಡಾಯ ನಾಯಕರು ಎರಡು ದಿನ ಸಮಯ ಕೇಳಿದ್ದಾರೆ ಎನ್ನಲಾಗಿದೆ.