Kornersite

Sports

IPL 2023: ಹೋರಾಡಿ ಸೋತ ಚೆನ್ನೈ; ರೋಚಕ ಗೆಲುವು ಸಾಧಿಸಿದ ರಾಜಸ್ಥಾನ್

Chennai : ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರೋಚಕ ಸೋಲು ಕಂಡಿದೆ.


ನಾಯಕ ಎಂ.ಎಸ್‌ ಧೋನಿ (MS Dhoni), ರವೀಂದ್ರ ಜಡೇಜಾ (Ravindra Jadeja) ಹೋರಾಟದ ಫಲವಾಗಿಯು ರಾಜಸ್ಥಾನ್‌ ರಾಯಲ್ಸ್‌ (Rajasthan Royals) 3 ರನ್‌ಗಳ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ (Chennai Super Kings) 21 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಬೌಲಿಂಗ್‌ಗೆ ಬಂದ ಸಂದೀಪ್‌ ಶರ್ಮಾ ಸತತ 2 ವೈಡ್‌ ನೀಡಿ ಆತಂಕ ಹೆಚ್ಚಿಸಿದ್ದರು. ನಂತರ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಧೋನಿ ಮೊದಲ ಎಸೆತದಲ್ಲಿ ರನ್‌ ಕದಿಯುವಲ್ಲಿ ವಿಫಲರಾದರು. ಆದರೆ 2-3ನೇ ಎಸೆತಗಳಲ್ಲಿ ಭರ್ಜರಿ ಸಿಕ್ಸರ್‌ ಬಾರಿಸಿ, 4ನೇ ಎಸೆತದಲ್ಲಿ 1 ರನ್‌ ಕದ್ದರು. ಇನ್ನೂ 2 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು, ಈ ವೇಳೆ ಕ್ರೀಸ್‌ಗೆ ಬಂದ ಜಡೇಜಾ 5ನೇ ಎಸೆತದಲ್ಲಿ 1 ರನ್‌ ಪಡೆದರು. ಕೊನೆಯ ಎಸೆತದಲ್ಲಿ ಮಹಿ ಸಿಕ್ಸರ್‌ ಬಾರಿಸಲು ಯತ್ನಿಸಿ, ಕೇವಲ 1 ರನ್‌ ಪಡೆದರು. ಪರಿಣಾಮ ಸಿಎಸ್‌ಕೆ 3 ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.


ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ್‌ ರಾಯಲ್ಸ್‌ ತಂಡವು 20 ಓವರ್‌ ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತು. 176 ರನ್‌ಗಳ ಗುರಿ ಬೆನ್ನತ್ತಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತು.
ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳೆದ ಮೂರು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಋತುರಾಜ್‌ ಗಾಯಕ್ವಾಡ್‌ 8 ರನ್‌ ಗಳಿಸಿ ಔಟ್ ಆದರು. ಈ ಸಂದರ್ಭದಲ್ಲಿ 2ನೇ ವಿಕೆಟ್‌ ಗೆ ಜೊತೆಯಾದ ಅಜಿಂಕ್ಯ ರಹಾನೆ, ಡಿವೋನ್‌ ಕಾನ್ವೆ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 19 ಎಸೆತಗಳಲ್ಲಿ 31 ರನ್‌ (2 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್‌ ಮಾಡುತ್ತಿದ್ದ ರಹಾನೆ ಅಶ್ವಿನ್‌ ಬೌಲಿಂಗ್‌ನಲ್ಲಿ ಔಟಾಗಿ ಹೊರನಡೆದರು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುತ್ತಿದ್ದ ಡಿವೋನ್ವೆ 50 ರನ್‌ (38 ಎಸೆತ, 6 ಬೌಂಡರಿ) ಕ್ಯಾಚ್‌ ನೀಡಿ ಫೆವಲಿಯನ್ ಸೇರಿದರು.


ನಾಯಕ ಎಂ.ಎಸ್‌ ಧೋನಿ, ರವೀಂದ್ರ ಜಡೇಜಾ ಸಿಕ್ಸರ್‌, ಬೌಂಡರಿ ಅಬ್ಬರಿಸಲು ಶುರು ಮಾಡಿದರು. 30 ಎಸೆತಗಳಲ್ಲಿ ಈ ಜೋಡಿ ಮುರಿಯದ 7ನೇ ವಿಕೆಟ್‌ಗೆ 59 ರನ್‌ ಬಾರಿಸಿತ್ತು. ಧೋನಿ 17 ಎಸೆತಗಳಲ್ಲಿ 32 ರನ್‌ (3 ಸಿಕ್ಸರ್‌, 1 ಬೌಂಡರಿ) ಬಾರಿಸಿದರೆ, ಜಡೇಜಾ 15 ಎಸೆತಗಳಲ್ಲಿ 25 ರನ್‌ (2 ಸಿಕ್ಸರ್‌, 1 ಬೌಂಡರಿ) ಗಳಿಸಿದರು. ರಾಜಸ್ಥಾನ್‌ ರಾಯಲ್ಸ್‌ ಪರ ರವಿಚಂದ್ರನ್‌ ಅಶ್ಚಿನ್‌ (Ravichandran Ashwin) 2, ಯಜುವೇಂದ್ರ ಚಾಹಲ್‌ 2, ಆಡಂ ಜಂಪಾ, ಸಂದೀಪ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.


ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 2 ವಿಕೆಟ್ ಪಡೆದುಕೊಂಡರು. ಆಕಾಶ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಕೂಡ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಮೊಯಿನ್‌ ಅಲಿ 1 ವಿಕೆಟ್‌ ಕಿತ್ತರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್