Kornersite

Bollywood Entertainment Just In

Bollywood : ತಂದೆ- ಮಗನ ಜೊತೆ ನಟಿ ಮಲಗಿದ್ದ ವಿವಾದದ ಹೇಳಿಕೆ- 3 ಸಾವಿರ ದೂರು ದಾಖಲು!

Bollywood : ಬಾಲಿವುಡ್ ಸಿನಿಮಾ ವಿಮರ್ಶಕ ಉಮೈರ ಸಂಧು (Umaira Sandhu) ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದೇನೆ ಎದು ಬಾಲಿವುಡ್ ಖ್ಯಾತ ನಟಿ ಸೆಲಿನಾ ಜೇಟ್ಲಿ(Celina Jaitley) ಹೇಳಿದ್ದಾರೆ.

ಕೇವಲ ಸಂಧು ವಿರುದ್ಧ ಮಾತ್ರವಲ್ಲ, ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ದೂರು ದಾಖಲಿಸಿದ್ದೇನೆ ಎಂದು ನಟಿ ಹೇಳಿದ್ದಾರೆ.ಜನಶೀನ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಸೆಲಿನಾ ಜೇಟ್ಲಿ ದಶಕಗಳಿಂದಲೂ ಚಿತ್ರರಂಗದಲ್ಲಿ ಇದ್ದಾರೆ. ಸಾಕಷ್ಟು ಚಿತ್ರಗಳನ್ನು ಇವರು ಮಾಡಿದ್ದಾರೆ. ಈ ನಟಿಯು ತಂದೆ- ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿಯೇ ಬೀಸುವಂತೆ ಮಾಡಿದ್ದರು.


ಜನಶೀನ್ ಬಾಲಿವುಡ್ ದಿಗ್ಗಜ ಫಿರೋಜ್ ಖಾನ್ (Feroze Khan) ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಈ ಸಿನಿಮಾವನ್ನು ತಮ್ಮ ಪುತ್ರ ಫರ್ದಿನ್ ಖಾನ್ (Fardeen Khan) ಗಾಗಿ ಮಾಡಿದ್ದರು ಎನ್ನುವ ಮಾತು ಇದೆ. ಈ ಸಿನಿಮಾ ಮೂಲಕವೇ ಸೆಲಿನಾ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಅವಕಾಶಕ್ಕಾಗಿ ಅವರು ತಂದೆ ಹಾಗೂ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡಿದ್ದ, ಈ ಟ್ವೀಟ್ ವೈರಲ್ ಕೂಡ ಆಗಿತ್ತು.


ಈ ಟ್ವೀಟ್ ಅನ್ನು ಗಮನಿಸಿರುವ ಸೆಲಿನಾ, ಖಾರವಾಗಿಯೇ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಅಕ್ಷರಗಳ ಮೂಲಕವೇ ಉಮೈರ್ ಗೆ ಚಳಿ ಬಿಡಿಸಿದ್ದಾರೆ. ಉಮೈರ್ ಬರೆದ ಟ್ವೀಟ್ ಗೆ ಉತ್ತರ ನೀಡಿರುವ ಅವರು, ‘ಡಿಯರ್ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾನಾ ಮಾರ್ಗಗಳಿವೆ. ಅದಕ್ಕಾಗಿ ಬಿಡುವು ಮಾಡಿಕೊಂಡು ವೈದ್ಯರನ್ನು ಸಂಪರ್ಕಿಸು’ ಎಂದು ಮರು ಹೇಳಿದ್ದರು.


ವಿದೇಶಗಳಲ್ಲಿ ರಿಲೀಸ್ ಮಾಡುವ ಸಿನಿಮಾಗಳ ಸೆನ್ಸಾರ್ ಬೋರ್ಡ್ ಸದಸ್ಯನೆಂದು ಹೇಳಿಕೊಳ್ಳುವ ಉಮೈರ್, ಸಿನಿಮಾ ರಿಲೀಸ್ ಗೂ ಮುನ್ನ ಆ ಚಿತ್ರದ ಕುರಿತು ಬರೆಯುತ್ತಾರೆ. ಕೆಲವೇ ಸಲ ಅವರ ವಿಮರ್ಶೆಗಳು ಪಾಸಿಟಿವ್ ಆಗಿರುತ್ತವೆ. ನೆಗೆಟಿವ್ ವಿಮರ್ಶೆ ಕೊಟ್ಟ ಚಿತ್ರಗಳು ಹಿಟ್ ಕೂಡ ಆಗಿವೆ. ಹೀಗಾಗಿ ತಲೆನೋವಿನ ಉಮೈರ್ ಎಂದೇ ಬಾಲಿವುಡ್ ಈತನನ್ನು ಕರೆಯುತ್ತದೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ