ಸಿನಿಪ್ರೀಯರಿಗೆ ಇವತ್ತಿಗೂ ನಟಿ ಪ್ರೇಮಾ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿರುವ ನಟಿ ಪ್ರೇಮಾ ಗೊತ್ತೊ ಗೊತ್ತಿಲ್ಲದೆನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ.

ಕೆಲವು ತಿಂಗಳ ಹಿಂದೆ ನಟಿ ಪ್ರೇಮಾ ಎರಡನೇ ಮದುವೆಯಾಗ್ತಾ ಇದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿತ್ತು. ಎರಡನೇ ಮದುವೆಗೂ ಮುನ್ನ ದೈವ ಪೂಜೆ ಮಾಡಿಸುತ್ತಿದ್ದಾರೆ ಅಂತ ಎಲ್ಲರೂ ಮಾತಾಡ್ತಾ ಇದ್ರು. ಮತ್ತೆ ಕೆಲವರು ಮತ್ತೊಮ್ಮೆ ಮದುವೆಯಾಗುವ ಮನಸ್ಸು ಯಾಕೆ ಮಾಡಿದ್ದಾರೆ ಎಂದು ಪ್ರಶ್ನೇಗಳನ್ನ ಕೇಳ್ತಾ ಇದ್ರು. ಬಟ್ ಇದೀಗ ಖುದ್ದು ಪ್ರೇಮಾ ಈ ಸುದ್ದಿಗೆ ತೆಲುಗು ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ್ದಾರೆ.
“ಮದುವೆ ಅನ್ನೋದು ನನ್ನ ವೈಯಕ್ತಿಕ ವಿಚಾರ. ಮದುವೆ ಆಗಬೇಕೋ ಬೇಡವೋ, ಯಾರನ್ನ ಮದುವೆಯಾಗಬೇಕು, ಯಾವಾಗ ಆಗಬೇಕು ಅನ್ನೋದು ನನಗೆ ಬಿಟ್ಟಿದ್ದು. 70ರ ವಯಸ್ಸಿನಲ್ಲಿಯೂ ಕೂಡ ಮದುವೆಯಾದವರ ಉದಾಹರಣೆ ಇದೆ. ಒಂದೊಳ್ಳೆ ಹುಡುಗ ಸಿಕ್ಕರೆ ಗ್ಯಾರಂಟಿ ಮ್ಯಾರೇಜ್ ಆಗ್ತೀನಿ” ಎಂದು ಸಂದರ್ಶನದಲ್ಲಿ ನಟಿ ಪ್ರೇಮಾ ತಿಳಿಸಿದ್ದಾರೆ.

ಸಂದರ್ಶನ ಮುಂದುವರೆಯುತ್ತಿಂದಂತೆ ಮತ್ತೊಂದು ವಿವಾದದ ಬಗ್ಗೆ ಮಾತನಾಡಿದ್ದಾರೆ. ಅದುವೇ ಕ್ಯಾನ್ಸರ್ ಬಗ್ಗೆ.
“ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನನ್ನ ಫ್ರೆಂಡ್ಸ್ ಇದ್ದಾರೆ. ಡಿಪ್ರೆಶನ್ ಗೆ ಹೋಗಿದ್ದರಿಂದ ಸ್ವಲ್ಪ ದಿನ ಸ್ನೇಹಿತರ ಜೊತೆ ಕಾಲ ಕಲೆಯಲು ಹೋಗಿದ್ದೆ. ನನಗೆ ಕ್ಯಾನ್ಸರ್ ಬಂದಿಲ್ಲ. ವಿದೇಶಕ್ಕೆ ಕ್ಯಾನ್ಸರ್ ಟ್ರಿಟ್ ಮೆಂಟ್ ಗೆ ಹೋಗಿದ್ದೆ ಅನ್ನೋದು ಶುದ್ದ ಸುಳ್ಳು ಸುದ್ದಿ” ಎಂದು ಮಾತನಾಡಿದ್ದಾರೆ.

ಕೆಲವೊಂದು ಸುಳ್ಳು ಸುದ್ದಿ, ತಮ್ಮ ಜೀವನದ ನಿರ್ಧಾರಗಳ ಬಗ್ಗೆ ಮಾತನಾಡಿದ ನಟಿ ಪ್ರೇಮಾ, ಡಿಪ್ರೆಶನ್ ನಲ್ಲಿ ಇದ್ದವರಿಗೆ ಜೀವನದಲ್ಲಿ ತೊಂದರೆ ಅನುಭವಿಸ್ತಾ ಇದ್ದವರಿಗೆ ಸಲಹೆ ಕೂಡ ಕೊಟ್ತಿದ್ದಾರೆ. ಜೀವನದಲ್ಲಿ ಏನೇ ಕಷ್ಟ ಬಂದರೂ ಧೈರ್ಯದಿಂದ ಎದುರಿಸಬೇಕು. ಎಲ್ಲದಕ್ಕೂ ಆತ್ಮಹತ್ಯೆ ಒಂದೇ ಉತ್ತರವಲ್ಲ. ಪ್ರಪಂಚ ತುಂಬಾ ದೊಡ್ಡದಾಗಿದೆ. ಬೇರೆ ಕೆಲಸ ಮಾಡುತ್ತಾ ಧೈರ್ಯವಾಗಿ ಮುನ್ನುಗ್ಗಿ ಎಂದು ಹೇಳಿದ್ದಾರೆ ನಟಿ ಪ್ರೇಮಾ.