Kornersite

Bengaluru Just In Karnataka State

Breaking News: ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಕಾಂಗ್ರೆಸ್ ನಿಂದ ಆಹ್ವಾನ!

Karnataka Assembly Election: ಬಿಜೆಪಿಯ ಹೊಸ ಪ್ರಯೋಗಕ್ಕೆ ಹಲವಾರು ಹಿರಿಯ ನಾಯಕರು ಬಲಿ ಪಶುವಾಗಿದ್ದಾರೆ. ಹಲವರು ಟಿಕೆಟ್ ವಂಚಿತರಾಗಿದ್ದರೆ, ಇನ್ನೂ ಹಲವರು ರಾಜಕೀಯದಿಂದಲೇ ನಿವೃತ್ತಿ ಪಡೆದಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಕೂಡ ಈ ಸಾಲಿಗೆ ಬಂದು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು, ಅಸಮಾಧಾನಗೊಂಡವರನ್ನು ಸೆಳೆಯಲು ಯತ್ನಿಸುತ್ತಿದೆ.

ಈಗಾಗಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ಅವರನ್ನು ಕಾಂಗ್ರೆಸ್ (Congress) ಪಕ್ಷ ಸೆರ್ಪಡೆಯಾಗಿ ಎಂದು ಆಹ್ವಾನ ನೀಡಲಾಗಿದೆ.
ಭಾಲ್ಕಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ (Eshwara Khandre) ಅವರು, ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ದಾರೆ. ಜಗದೀಶ್ ಶೆಟ್ಟರ್ ಹಿರಿಯ ನಾಯಕರಾಗಿ ಒಂದು ಟಿಕೆಟ್‌ಗಾಗಿ ಮನೆಯ ಬಾಗಿಲು- ಬಾಗಿಲು ಓಡಾಡುತ್ತಿದ್ದಾರೆ. ಲಕ್ಷ್ಮಣ ಸವದಿ (Laxman Savadi) ಟಿಕೆಟ್ ಸಿಗದೇ ಕಣ್ಣೀರು ಹಾಕಿ ಕೊನೆಗೂ ಕಾಂಗ್ರೆಸ್ ಸೆರ್ಪೆಡೆಯಾಗಿದ್ದಾರೆ ಎಂದರು.


ಹಿರಿಯರನ್ನು ಬಿಜೆಪಿ (BJP) ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ಜನ ಗಮನಿಸುತ್ತಿದ್ದಾರೆ. ಲಕ್ಷ್ಮಣ ಸವದಿ ಈಗಾಗಲೇ ಕಾಂಗ್ರೆಸ್‌ಗೆ ಬಂದಿದ್ದಾರೆ. ಇದೇ ರೀತಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಬರಲಿ. ಅಲ್ಲದೇ ಅವರ ಜೊತೆಗೆ ಇನ್ನೂ ಬಹಳಷ್ಟು ಜನರು ಕಾಂಗ್ರೆಸ್‌ಗೆ ಬರುತ್ತಾರೆ. ಮುಂದೆ ರಾಜ್ಯದ ಜನರು ಇದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.


ಚಿತ್ತಾಪುರ ಕ್ಷೇತ್ರದಿಂದ ಮಣಿಕಂಠ ರಾಠೋಡ್‌ಗೆ (Manikanta Rathod) ಬಿಜೆಪಿ ಟಿಕೆಟ್ ಘೋಷಣೆಯ ವಿಚಾರವಾಗಿ ಮಾತನಾಡಿದ ಅವರು, ಇದರಿಂದ ಬಿಜೆಪಿಯ ಸಂಸ್ಕೃತಿ ಗೊತ್ತಾಗುತ್ತದೆ. ಪೊಲೀಸರು ಹಾಗೂ ಕಾನೂನು ಅವರನ್ನು ಗೂಂಡಾ ಪಟ್ಟಿಯಿಂದ ತೆಗೆಯಬಾರದು ಎಂದಿದ್ದರು. ಆದರೂ ರಾಜಕೀಯ ದುರುದ್ದೇಶದಿಂದ ಅವರ ಹೆಸರನ್ನು ಗೂಂಡಾ ಪಟ್ಟಿಯಿಂದ ತೆಗೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಗೂಂಡಾಗಳಿಗೆ ಟಿಕೆಟ್ ನೀಡವು ಬಿಜೆಪಿಗೆ ಜನರ ಮುಂದೆ ಹೋಗಿ ನಾವು ನಿಮ್ಮ ಸೇವೆ ಮಾಡುತ್ತೇವೆ ಎಂದು ಹೇಳುವ ಯಾವ ನೈತಿಕತೆ ಇದೆ? ಬಿಜೆಪಿಯವರು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರಾ ಎಂದು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ