Bangalore : ಪಾಪಿಯೊಬ್ಬ ಪ್ರೇಯಸಿಯ ಹುಟ್ಟು ಹಬ್ಬದ ದಿನವೇ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಗರದ ಲಗ್ಗೆರಿಯಲ್ಲಿ ನಡೆದಿದೆ.

ನವ್ಯ (24) ಕೊಲೆಯಾದ ಯುವತಿ. ಕೊಲೆಯಾದ ಯುವತಿ, ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಪ್ರಶಾಂತ್ ಕೊಲೆ ಮಾಡಿದ ಯುವಕ ಎಂದು ಗುರುತಿಸಲಾಗಿದೆ. ನವ್ಯ ಹಾಗೂ ಪ್ರಶಾಂತ್ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರೂ ಕನಕಪುರ ಮೂಲದವರು. ಅಲ್ಲದೇ, ದೂರದ ಸಂಬಂಧಿಕರು. ಕಳೆದ ಮಂಗಳವಾರ ನವ್ಯ ಬರ್ತಡೇ ಇತ್ತು. ನವ್ಯ ಹುಟ್ಟು ಹಬ್ಬದ ದಿನ ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್, ಏ. 14ರಂದು ಬರ್ತಡೇ ಸೆಲೆಬ್ರೇಷನ್ ಗೆ ಸಿದ್ಧತೆ ಮಾಡಿದ್ದ.

ಅದರಂತೆ ರಾತ್ರಿ ಕೇಕ್ ಕತ್ತರಿಸಿ, ತಿನ್ನಿಸಿದ್ದಾನೆ. ಆ ನಂತರ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಮೃತ ಯುವತಿಯ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚೆಗೆ ಮೃತ ಯುವತಿ ಬೇರೆಯವರ ಜೊತೆ ಚಾಟಿಂಗ್ ಮಾಡುತ್ತಿದ್ದಳು ಎಂದು ಪ್ರಶಾಂತ್ ಅವಮಾನಿಸಿದ್ದ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಅನುಮಾನದ ಹಿನ್ನೆಲೆಯಲ್ಲಿ ಹುಟ್ಟು ಹಬ್ಬದ ಸಂಭ್ರಮದ ನಂತರ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.