Kornersite

Just In Sports

IPL 2023: ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್; ರಿಂಕು ಹೋರಾಟ ವ್ಯರ್ಥ!

Kolkatta : ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಸ್ಫೋಟಕ ಶತಕದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ 23 ರನ್‌ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 4 ವಿಕೆಟ್‌ ನಷ್ಟಕ್ಕೆ 228 ರನ್ ಗಳ ಬೃಹತ್ ಮೊತ್ತ ಗಳಿಸಿತು. 229 ರನ್‌ ಗಳ ಸವಾಲನ್ನು ಪಡೆದ ಕೋಲ್ಕತ್ತಾ 7 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲು ಅನುಭವಿಸಿತು. ಕೋಲ್ಕತ್ತಾ 30 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಗಳನ್ನು ಕಳೆದುಕೊಂಡಿತ್ತು. ನಾಯಕ ನಿತೀಶ್‌ ರಾಣಾ (Nitish Rana) ಮತ್ತು ರಿಂಕು ಸಿಂಗ್‌ (Rinku Singh) ಸ್ಫೋಟಕ ಆಟವಾಡಿದರು. ರಾಣಾ 75 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯವರೆಗೂ ಹೋರಾಡಿದ ರಿಂಕು ಔಟಾಗದೇ 58 ರನ್‌(31 ಎಸೆತ, 4 ಬೌಂಡರಿ, 4 ಸಿಕ್ಸರ್‌) ಚಚ್ಚಿದ್ದರು.

ಕೊನೆಗೆ 24 ಎಸೆತದಲ್ಲಿ ಕೋಲ್ಕತ್ತಾ ಗೆಲ್ಲಲು 70 ರನ್‌ಗಳ ಅವಶ್ಯಕತೆಯಿತ್ತು. ರಾಣಾ ಮತ್ತು ರಿಂಕು ಸಿಂಗ್‌ 6ನೇ ವಿಕೆಟಿಗೆ 39 ಎಸೆತಗಳಲ್ಲಿ 69 ರನ್‌ ಗಳಿಸಿದರು. 17ನೇ ಓವರ್‌ನ ಮೊದಲ ಎಸೆತವನ್ನು ರಾಣಾ ಸಿಕ್ಸರ್‌ಗೆ ಅಟ್ಟಿದ್ದರೆ ಎರಡನೇ ಎಸೆತವನ್ನೂ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ನಡೆಸಿ, ಕ್ಯಾಚ್‌ ನೀಡಿ ಔಟ್ ಆದರು. ಪರಿಣಾಮ ಪಂದ್ಯ ಹೈದರಬಾದ್‌ ಕಡೆಗೆ ತಿರುಗಿತು.


ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದರು. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಅತಿ ಹೆಚ್ಚು ಸ್ಕೋರ್‌ ಆಗಿರುವುದು ವಿಶೇಷ.

ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌ (17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌ (6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌)ಬಂದವು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್