ಕೇಂದ್ರ ಗೃಹ ಇಲಾಖೆಯು ನಟ ಚೇತನ್ ಅಹಿಂಸಾ ಅವರ ವೀಸಾವನ್ನ ರದ್ದು ಮಾಡಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕಾನೂನು ಹೋರಾಟಕ್ಕೆ ಮುಂದಾದ ಚೇತನ್:
ವೀಸಾ ರದ್ದಾಗಿರುವುದರಿಂದ ಬೆಸೆತ್ತುಕೊಂಡ ನಟ ಪತ್ರಿಕಾಗೋಷ್ಟಿಯನ್ನ ಏರ್ಪಡಿಸಿದ್ದರು. ಈ ಪ್ರೆಸ್ ಮೀಟ್ ನಲ್ಲಿ ನನ್ನ ಮೇಲೆ ಇದೊಂದು ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ರೀತಿಯಲ್ಲಿ ದೇಶವಿರೋಧಿ ವಟುವಟಿಕೆಯಲ್ಲಿ ನಾನು ಭಾಗಿಯಾಗಿಲ್ಲ. ನನ್ನ ವಾಕ್ ಸ್ವಾತಂತ್ಪ್ರ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿ, ನನಗೆ ಜೈಲಿಗೆ ಕಳುಹಿಸಿದ್ದರು. ಈಗ ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದು ಮಾಡಿದ್ದಾರೆ. ಹೀಗಾಗಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದ್ದಾರೆ ನಟ ಚೇತನ್.
ಅಲ್ಲದೇ ಪ್ರೇಸ್ ಮೀಟ್ ಮುಂದುವರೆಸುತ್ತ, 22 ವರ್ಷಗಳಿಂದ ನಾನು ಅಮೇರಿಕದಲ್ಲಿ ಓದುತ್ತಿದ್ದೆ. ಆದರೆ ನನ್ನ ಹೆತ್ತವರ ಮೂಲ ಭಾರತ. ರಂಗಭೂಮಿ ಅಧ್ಯಯನ ಮಾಡಿದ್ದೇನೆ. ಹಲವು ರೈತರ ಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ಆದಿವಾಸಿಗಳ ಪರ ಹೋರಾಡಿದ್ದೇನೆ. ನನ್ನ್ದು ಅಂಬೇಡ್ಕರ್ ಹಾಗೂ ಪೆರಿಯರ್ ಸಿದ್ದಾಂತ. ಇದು ಸರ್ಕಾರಕ್ಕೆ ಇಷ್ಟವಾಗಿಲ್ಲ. ಬ್ರಾಹ್ಮಣ್ಯ ಬಗ್ಗೆ ಮಾತನಾಡಿದ್ದಕ್ಕೆ 295A ಕೇಸ್ ಹಾಕಿದ್ದರು. ಇದೀಗ ವೀಸಾ ರದ್ದು ಮಾಡಿದ್ದಾರೆ. 15 ದಿನದವರೆಗೂ ಕಾಲಾವಕಾಶವಿದೆ. 15 ದಿನದೊಳಗೆ ತಡೆಯಾಜ್ಞೆ ತರುತ್ತೇನೆ.
ಜಾನಪದ ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರದ ಮೇಲೆ ಸಂಶೋಧನೆ ಮಾಡಿ ಪದವಿ ತೆಗೆದುಕೊಂಡಿದ್ದೇನೆ. ಕಳೆದ 15 ವರ್ಷದಿಂದ ಭಾರತದಲ್ಲೇ ಇದ್ದೇನೆ. ಆದಾಯ ತೆರಿಗೆ ಕಟ್ಟಿತ್ತಿದ್ದೇನೆ. ಆದರೂ ಓಸಿಐ ರದ್ದು ಮಾಡಲಾಗಿದೆ ಎಂದು ನೋಟೀಸ್ ನೀಡಿದ್ದಾರೆ. ನಾನು ಭಾರತ ದೇಶದವನು. ಈ ದೇಶದಲ್ಲೇ ಇರುವ ಹಕ್ಕು ನನಗೆ ಇದೆ. ಹೀಗಾಗಿ ಕಾನೂನು ಹೋರಾಟ ಮಾಡುವುದಾಗಿ ನಟ ಚೇತನ್ ಅಹಿಂಸಾ ಹೇಳಿದ್ದಾರೆ.