ತಾಯಿ ಐಸ್ ಕ್ರೀಮ್ ತರಲು ಹೋದಾಗ ಮಗು, ನೀರಿನ ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ
ಮಧ್ಯಪ್ರದೇಶದ ಇಂದೋರ್ ನ ಜುನಾ ರಿಸಾಲಾ ಪ್ರದೇಶದಲ್ಲಿ ನಡೆದಿದ್ದು, ಎರಡು ವರ್ಷದ ಗಂಡು ಮಗುವೊಂದು ನೆಲದೊಳಗಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದೆ.
ಮಗುವಿನ ತಾಯಿ ಐಸ್ ಕ್ರೀಮ್ ತರಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಮಗುವನ್ನು ಜುನಾ ರಿಸಾಲ ನಿವಾಸಿ ಚಂದ್ರಶೇಖರ್ ಅವರ ಪುತ್ರ ಎರಡು ವರ್ಷದ ಲಕ್ಷ್ಮಯ ಎಂದು ಗುರುರಿಸಲಾಗಿದೆ. ಲಕ್ಷ್ಯ ಅವರ ತಾಯಿ ಕಾಲೋನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅಲ್ಲಿಂದ ಮನೆಗೆ ಹಿಂದಿರುಗಿ, ಮಗುವನ್ನು ನೀರಿನ ಟ್ಯಾಂಕ್ ಹತ್ತಿರಿ ಕೂರಿಸಿ ಅವನಿಗೆ ಐಸ್ ತರಲು ತೆರಳಿದ್ದರು. ಆದರೆ, ಮರಳಿ ಬಂದು ನೋಡುವಷ್ಟರಲ್ಲಿ ಮಗು ಸ್ಥಳದಲ್ಲಿ ಇರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಸಿಕ್ಕಿಲ್ಲ. ಕೊನೆಗೆ ಟ್ಯಾಂಕ್ ಬಳಿ ನೋಡಿದಾಗ ಮಗು ನೀರಿನ ತೊಟ್ಟಿಯಲ್ಲಿ ಮುಳುಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಮಗು ಉಳಿಯಲಿಲ್ಲ.
ನೀರಿನ ತೊಟ್ಟಿಯ ಮೇಲಿನ ಸ್ಲ್ಯಾಬ್ ಮೇಲೆ ಮಗು ಕುಳಿತಿದ್ದ ಸಂದರ್ಭದಲ್ಲಿ ಸ್ಲ್ಯಾಬ್ ಒಡೆದು ಅದರೊಳಗೆ ಮಗು ಬಿದ್ದಿದೆ ಎನ್ನಲಾಗಿದೆ. ತೊಟ್ಟಿಯಲ್ಲಿ ಸುಮಾರು 2.5 ಅಡಿ ನೀರು ಇದ್ದು ಮಗು ಅದರಲ್ಲಿ ಮುಳುಗಿದ. ಮಗು ಯಾವ ಸಂದರ್ಭದಲ್ಲಿ ಬಿದ್ದಿದೆ ಎಂಬುವುದನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದಾರೆ.