Bangalore : ಇತ್ತೀಚೆಗೆ ರಾಜ್ಯ ಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿರುವ ಅವರು, ಅಂತಹ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ.

ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಪ್ರಮೋಷನ್ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಫೇಕ್ ಐಡಿ ಮೂಲಕ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಪಾಠ ಕಲಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ನಕಲಿ ಖಾತೆಗಳನ್ನು ಹೊಂದಿ, ಬಾಯಿಗೆ ಬಂದಂತೆ ಕಾಮೆಂಟ್ (Comment) ಮಾಡುವವರ ವಿರುದ್ಧ ಈಗ ಅವರು (Jaggesh) ಸಮರ ಸಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಸಕ್ರೀಯರಾಗಿರುವ ಹಾಗೂ ಮತ್ತು ಅನೇಕ ವಿಷಯಗಳನ್ನು ಅದರ ಮೂಲಕವೇ ತಿಳಿಸುವ ಜಗ್ಗೇಶ್ ಅವರು ಕಳೆದ ನಾಲ್ಕು ತಿಂಗಳಲ್ಲಿ 12ಕ್ಕೂ ಹೆಚ್ಚು ಫೇಕ್ ಐಡಿ ವೀರರನ್ನು ಜೈಲಿಗೆ (Jail) ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಈ ವಿಷಯವನ್ನು ಅವರು ಇಲ್ಲಿಯವರೆಗೂ ಬಹಿರಂಗವಾಗಿ ಹೇಳಿರಲ್ಲ. ಈಗ ಈ ಕುರಿತು ವಿಷಯ ಹಂಚಿಕೊಂಡಿದ್ದಾರೆ.
ಈ ಸೋಷಿಯಲ್ ಮೀಡಿಯಾವನ್ನು ಕಂಡು ಹಿಡಿದವನಿಗೆ ದೊಡ್ಡದೊಂದು ನಮಸ್ಕಾರ ಹೇಳಬೇಕು. ನಾವು ಯಾವುದೇ ಮೂಲೆಯಲ್ಲಿರಲಿ, ನಮ್ಮವರು ಎಲ್ಲಿಯೇ ಇರಲಿ ಒಂದೇ ವೇದಿಕೆಯಲ್ಲಿ ಕ್ಷಣಾರ್ಧದಲ್ಲಿ ಸಂವಹನ ಮಾಡಬಹುದು. ಈ ವೇದಿಕೆಯನ್ನು ಕಂಡು ಹಿಡಿದವನ ಕಾಲಿಗೆ ಬೀಳಬೇಕು ಅಂತ ಅನಿಸುತ್ತದೆ ಎದು ಹೇಳಇದ್ದಾರೆ. ಶೇ. 99ಕ್ಕಿಂತಲೂ ಅಧಿಕ ಪಾಸಿಟಿವ್ ಕಾಮೆಂಟ್ ಗಳೇ ಇರುತ್ತವೆ. ಉಳಿದ ಒಂದು ಪರ್ಸಂಟ್ ಫೇಕ್ ಐಡಿ ವೀರರಿಂದ ಬಂದಂತವುಗಳು. ಅವರನ್ನು ಹುಡುಕುವುದು ನನಗೇನೂ ಕಷ್ಟವಲ್ಲ. ಆಗಲೇ ಹುಡುಕಿ ಜೈಲಿಗೂ ಕಳಿಸಿದ್ದೇನೆ ಎಂದು ಹೇಳಿದ್ದಾರೆ.